VIDEO: ಪ್ರವಾಹದ ಭೀತಿ ಇದ್ದರೂ ನದಿ ತಟದಲ್ಲಿ ಮಹಿಳೆಯರ ದೆವ್ವ ಬಿಡಿಸ್ತಿದ್ದಾರೆ! ರಾಯಚೂರಲ್ಲಿ ಹೀಗೆ ನಡೆದಿದೆ ನೋಡಿ...

raichur
Published on

ರಾಯಚೂರು: ಪ್ರವಾಹದ ಭೀತಿ ನಡುವೆ ಕೃಷ್ಣಾ ನದಿ ತಟದಲ್ಲಿ ಚಿತ್ರ ವಿಚಿತ್ರ ಪೂಜೆಯನ್ನು ಗ್ರಾಮಸ್ಥರು ನಡೆಸಿದ್ದಾರೆ. ರಾಯಚೂರು ತಾಲೂಕಿನ ಕಾಡ್ಲೂರು ಬಳಿ ಈ ಘಟನೆ ನಡೆದಿದೆ.

ಮಹಿಳೆಯರ ಮೈಮೇಲಿನ ದೆವ್ವ, ಭೂತ ಬಿಡಿಸುವ ನೆಪದಲ್ಲಿ ಪೂಜೆ ಮಾಡಲಾಗಿದೆ. ನಿಂಬೆ ಹಣ್ಣು, ನೈವೇದ್ಯ ನದಿಗೆ ಹರಿ ಬಿಟ್ಟು, ನದಿಯಲ್ಲೇ ಸ್ನಾನ ಮಾಡಿರುವ ದೃಶ್ಯ ಕಂಡುಬಂದಿದೆ.

ನದಿಗೆ ಹೊಸ ನೀರು ಬರುತ್ತಿರುವ ಹಿನ್ನೆಲೆ ವಿಚಿತ್ರ ಪೂಜೆಗೆ ಜನರು ಮುಂದಾಗಿದ್ದಾರೆ. ನಾರಾಯಣಪುರ ಜಲಾಶಯದಿಂದ 1.60 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದ್ದು, ರಾಯಚೂರು ಜಿಲ್ಲೆಯಲ್ಲಿ ಕೃಷ್ಣಾ ನದಿ ತುಂಬಿ ಹರಿಯುತ್ತಿದೆ.

ನದಿ ಸೆಳೆತ ಜೋರಾಗಿದ್ದರೂ ನದಿ ತಟಕ್ಕೆ ಬರುತ್ತಿರುವ ಜನ ವಿಚಿತ್ರ ಪೂಜೆಯಲ್ಲಿ ತೊಡಗಿದ್ದಾರೆ. ಪೂಜೆಯ ಜತೆಗೆ ಮೀನು ಹಿಡಿಯಲು ಕೂಡ ಜನರು ಬರುತ್ತಿದ್ದಾರೆ. (ದಿಗ್ವಿಜಯ ನ್ಯೂಸ್​)

ಇಲ್ಲಿದೆ ನೋಡಿ ವಿಡಿಯೋ:

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net