ರಾತ್ರಿ ಸಾಯ್ತಾನೆ, ಬೆಳಗ್ಗೆ ಬರ್ತಾನೆ... ಬಲಿ ಕೊಟ್ರೂ ಬದಕ್ತಾನೆ! ಚಾಮರಾಜನಗರದಲ್ಲಿ ನಡೀತಿದೆ ಈ ಆಚರಣೆ...

chamrajngar
Published on

ಚಾಮರಾಜನಗರ: ರಾತ್ರಿ ಆತನ ಪ್ರಾಣಪಕ್ಷಿ ಹಾರಿ ಹೋಗಿರುತ್ತೆ, ಆತನ ಶವವನ್ನು ಊರತುಂಬೆಲ್ಲಾ ಮೆರವಣಿಗೆ ಮಾಡಲಾಗುತ್ತೆ, ಮೆರವಣಿಗೆ ವೇಳೆ ಶವವನ್ನು ಎಳೆದಾಡಲಾಗುತ್ತೆ, ಆದರೆ ಹೀಗೆ ಬಲಿಬಿದ್ದ ವ್ಯಕ್ತಿಗೆ ಮತ್ತೆ ಮರುಜೀವ ಬರುತ್ತೆ!

ಇದು ಚಾಮರಾಜನಗರದಲ್ಲಿ ನಡೆಯುವ ಹಬ್ಬ. ಅಬ್ಬಬ್ಬಾ ಎನ್ನುವಂಥ ಈ ಹಬ್ಬದಲ್ಲಿ ಸತ್ತವನು ಮತ್ತೆ ಎದ್ದು ಬರುತ್ತಾರೆ. ಕೊಳ್ಳೇಗಾಲ ತಾಲೂಕಿನ ಪಾಳ್ಯ ಗ್ರಾಮದಲ್ಲಿ ಈ ಹಬ್ಬದ ರೂಪದ ಆಚರಣೆ ಚಾಲ್ತಿಯಲ್ಲಿದೆ.

ಸೀಗಮಾರಮ್ಮ ಬಲಿ ಹಬ್ಬದಲ್ಲಿ ವಿಶಿಷ್ಟ ಆಚರಣೆ ಮಾಡಲಾಗುತ್ತದೆ. ಸತತ ಒಂಬತ್ತು ತಾಸು ಆತನ ಉಸಿರಾಟ ನಿಂತುಹೋಗಿರುತ್ತೆ. ಅರ್ಥಾತ್ ಬಲಿಯಾಗಿರುತ್ತಾನೆ ಎಂಬ ನಂಬಿಕೆ ಜನರಿಗೆ ಇದೆ.

19 ವರ್ಷಗಳಿಂದ ನಿಂತುಹೋಗಿದ್ದ ಈ ಹಬ್ಬಕ್ಕೆ ಈಗ ಮತ್ತೆ ಚಾಲನೆ ಸಿಕ್ಕಿದೆ. ಸೀಗಮಾರಮ್ಮ ಬಲಿ ಹಬ್ಬಕ್ಕೆ ಗ್ರಾಮದ ಎಲ್ಲಾ‌ ಸಮುದಾಯಗಳು ಭರ್ಜರಿ ತಯಾರಿ ನಡೆಸಿವೆ.

ಬಲಿ ಬೀಳುವ ವ್ಯಕ್ತಿಯ ಎದೆ ಮೇಲೆ ಮಧ್ಯೆ ರಾತ್ರಿ 12 ಗಂಟೆ ವೇಳೆಗೆ ಸೀಗಮಾರಮ್ಮ ದೇವತೆ ಮೈಮೇಲೆ ಬಂದ ಅರ್ಚಕ ಕಾಲಿಟ್ಟರೇ ಪ್ರಾಣ ಹೋಗುತ್ತೆ ಎಂಬ ನಂಬಿಕೆ ಇದೆ. ಪ್ರಾಣ ಹೋಗಿ ನಿಷ್ಕ್ರಿಯವಾದ ವ್ಯಕ್ತಿಯನ್ನು ಬಲಿ ಪೀಠಕ್ಕೆ ಗ್ರಾಮಸ್ಥರು ಕೊಂಡೊಯ್ಯುತ್ತಾರೆ. ಬಲಿ ಪೀಠದ ಬಳಿ ಸತ್ತ ವ್ಯಕ್ತಿಯ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ. ಬೆಳಗ್ಗೆ 9 ಗಂಟೆ ವೇಳೆಗೆ ಒಳಗೆರೆ ಹುಚ್ಚಮ್ಮ ದೇವತೆ ಮೈಮೇಲೆ ಬಂದ ಅರ್ಚಕರಿಂದ ನಿರ್ಜೀವ ವ್ಯಕ್ತಿ ಮೇಲೆ ತೀರ್ಥ ಪ್ರೋಕ್ಷಣೆ ಮಾಡುತ್ತಾರೆ.

ಸತ್ತ ವ್ಯಕ್ತಿಗೆ ತೀರ್ಥ ಪೋಕ್ಷಣೆಯಿಂದ ಮರುಜೀವ ಬರುತ್ತದೆ. ಸತ್ತಿದ್ದ ವ್ಯಕ್ತಿಗೆ 11 ನೇ ದಿನ ಸಾಂಕೇತಿಕವಾಗಿ ತಿಥಿ ಕೂಡ ಮಾಡಲಾಗುತ್ತದೆ. ಹೀಗೆ ಬಲಿ ಬೀಳುವ ವ್ಯಕ್ತಿ ಇನ್ನು ಮುಂದೆ ತನ್ನ ಜೀವಮಾನದಲ್ಲಿ ಮನೆಬಿಟ್ಟು ಹೊರಗೆ ಊಟ ತಿಂಡಿ ಮಾಡುವಂತಿಲ್ಲ. ಇದು ಆಚರಣೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net