

ತುಮಕೂರು ಜಿಲ್ಲಾ ಕೇಂದ್ರ ಗ್ರಂಥಾಲಯ ವ್ಯಾಪ್ತಿಯಲ್ಲಿ ಬರುವ ಗ್ರಾಮ ಪಂಚಾಯಿತಿ ಗ್ರಂಥಾಲಯಗಳಿಗೆ ಗೌರವ ಸಂಭಾವನೆ ಆಧಾರದ ಮೇಲೆ 19 ಮೇಲ್ವಿಚಾರಕರನ್ನು ಆಯ್ಕೆ ಮಾಡಿಕೊಳ್ಳಲಾಗುತ್ತಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಹುದ್ದೆಗಳಲ್ಲಿ ಗ್ರಾಮೀಣ ಅಭ್ಯರ್ಥಿ, ಅಂಗವಿಕಲ, ಕನ್ನಡ ಮಾಧ್ಯಮ, ಮಹಿಳಾ, ಎಸ್ಸಿ, ಎಸ್ಟಿ, ಪ್ರವರ್ಗಕ್ಕೆ ಸೇರಿದ ಅಭ್ಯರ್ಥಿಗಳಿಗೆ ಮೀಸಲಾತಿ ನಿಗದಿಯಾಗಿದೆ.
ಎಲ್ಲೆಲ್ಲಿ ಉದ್ಯೋಗ?
ಗುಬ್ಬಿ ತಾಲೂಕಿನ ಅಂಕಸಂದ್ರ, ಕುಣಿಗಲ್ನ ಬಾಗೇನಹಳ್ಳಿ, ಕೊಡಗೆಹಳ್ಳಿ, ನಡೆಮಾವಿನಪುರ, ಶಿರಾದ ಬೇವಿನಹಳ್ಳಿ, ನಾದೂರು, ತಿಪಟೂರಿನ ಭೈರನಾಯಕನಹಳ್ಳಿ, ನೊಣವಿನಕೆರೆ, ಪಾವಗಡದ ಚೆನ್ನಕೇಶವಪುರ, ನಲ್ಲಿಗಾನಹಳ್ಳಿ, ಸಿದ್ದಾಪುರ, ವಳ್ಳೂರು, ತುರುವೇಕೆರೆಯ ದಂಡಿನಶಿವರ, ಮಧುಗಿರಿ ತಾಲೂಕಿನ ಗರಣಿ, ಚಿಕ್ಕನಾಯಕನ ಹಳ್ಳಿಯ ಹುಳಿಯಾರ, ಕೆಂಕೆರೆ, ಮುದ್ದೇನಹಳ್ಳಿ, ತುಮಕೂರಿನ ನಿಡವಳಲು, ಕೊರಟಗೆರೆ ತಾಲೂಕಿನ ವಡ್ಡಗೆರೆ ಗ್ರಾಮ ಪಂಚಾಯಿತಿಗಳಲ್ಲಿ ನೇಮಕ ಮಾಡಿಕೊಳ್ಳಲಾಗುತ್ತಿದೆ.
ಅರ್ಹತೆಗಳೇನು?
ಎಸ್ಸೆಸ್ಸೆಲ್ಸಿಯಲ್ಲಿ ಉತ್ತೀರ್ಣರಾಗಿರಬೇಕು. ಅಭ್ಯರ್ಥಿಯು ಆಯಾ ಗ್ರಾಪಂ ವಾಸಿಯಾಗಿದ್ದು, ತಹಸೀಲ್ದಾರ್ರಿಂದ ಪಡೆದ ವಾಸ ದೃಢೀಕರಣ ಪತ್ರ ಹೊಂದಿರಬೇಕು. ಗ್ರಂಥಾಲಯ ವಿಜ್ಞಾನದಲ್ಲಿ ತರಬೇತಿ ಪಡೆದವರಿಗೆ ಆದ್ಯತೆ ನೀಡಲಾಗುವುದು.
ಸಾಮಾನ್ಯ ವರ್ಗದ ಅಭ್ಯರ್ಥಿಗೆ ಗರಿಷ್ಠ 35 ವರ್ಷ, ಎಸ್ಸಿ, ಎಸ್ಟಿಗೆ ಗರಿಷ್ಠ 40 ವರ್ಷ, ಪ್ರವರ್ಗಕ್ಕೆ ಸೇರಿದ ಅಭ್ಯರ್ಥಿಗಳಿಗೆ ಗರಿಷ್ಠ 38 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ.
ಮಾಸಿಕ 12,000 ರೂ. ಗೌರವ ಧನ ನೀಡಲಾಗುವುದು.
ಅರ್ಜಿ ಸಲ್ಲಿಕೆ ವಿಧಾನ: ಆಯಾ ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ಅರ್ಜಿ ನಮೂನೆಯನ್ನು ಪಡೆದು, ಭರ್ತಿ ಮಾಡಿ ಆಯಾ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಸಲ್ಲಿಸಬೇಕು.
ಅರ್ಜಿ ಸಲ್ಲಿಸಲು ಕೊನೇ ದಿನ: 14.3.2022
ಅಧಿಸೂಚನೆಗೆ: https://bit.ly/33INIXP
ಮಾಹಿತಿಗೆ: http://tumkur.nic.in