

ಚಿಕ್ಕಬಳ್ಳಾಪುರ: ಜನ್ಮ ನೀಡಿದ ತಂದೆ ತಾಯಿಯರನ್ನೇ ಬೀದಿಗೆ ತಳ್ಳುವ ಈ ಸಂದರ್ಭದಲ್ಲಿ ಮೃತಪಟ್ಟ ಗುಬ್ಬಚ್ಚಿಯೊಂದಕ್ಕೆ ಗ್ರಾಮಸ್ಥರೆಲ್ಲರೂ ಸೇರಿ ಸಮಾಧಿ ನಿರ್ಮಿಸಿ, ತಿಥಿ ಮಾಡಿ, ಬಾಡೂಟ ಹಾಕಿಸಿರುವ ಅಪರೂಪದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲ್ಲೂಕಿನ ಬಸವಪಟ್ಟಣದಲ್ಲಿ ನಡೆದಿದೆ.
‘ಮತ್ತೆ ಹುಟ್ಟಿಬಾ ಗುಬ್ಬಚ್ಚಿ’ ಎಂಬ ಬ್ಯಾನರ್ ಕಟ್ಟಿ , ಪೂಜೆ ಪುನಸ್ಕಾರ ಮಾಡಿ ಹೂವಿನ ಹಾರ ಹಾಕಿ ಸಂಪ್ರದಾಯಬದ್ದವಾಗಿ ವಿಧಿ ವಿಧಾನ ಮಾಡಿದ್ದಾರೆ. ಕೋತಿ ನಾಯಿ ಸತ್ತ ಸಂದರ್ಭದಲ್ಲಿ ಸಮಾಧಿ ನಿರ್ಮಸಿ ಜನ ಮಾನವೀಯತೆ ಮೆರೆಯುತ್ತಿದ್ದರು. ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಗುಬ್ಬಚ್ಚಿಗೂ ಸಮಾಧಿ ನಿರ್ಮಿಸಿ ಮಾನವೀಯತೆ ಮೆರೆದಿದ್ದಾರೆ.
ಜನವರಿ 26ರಂದು ಬಸವ ಪಟ್ಟಣದಲ್ಲಿ ಗುಬ್ಬಚ್ಚಿಯೊಂದು ಮೃತಪಟ್ಟಿತ್ತು. ಈ ಗುಬ್ಬಚ್ಚಿ ಗ್ರಾಮದ ಎಲ್ಲರಿಗೂ ಹತ್ತಿರವಾಗಿತ್ತು. ಗುಬ್ಬಚ್ಚಿ ಎಲ್ಲರ ಮನೆಗೆ ಹೋಗುತ್ತಿತ್ತು. ಗ್ರಾಮದಲ್ಲಿಯೇ ಇದ್ದುದರಿಂದ ಜನರ ಸಂಪರ್ಕದಲ್ಲಿಯೇ ಗುಬ್ಬಚ್ಚಿ ಇರುತ್ತಿತ್ತು. ಹಾಗಾಗಿ ಗುಬ್ಬಚ್ಚಿಯನ್ನು ಗ್ರಾಮಸ್ಥರು ಇಷ್ಟಪಡುತ್ತಿದ್ದರು. ಗುಬ್ಬಚ್ಚಿ ಸಾವಿನ ವಿಷಯ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಸಣ್ಣದಾಗಿ ಸಮಾಧಿ ಮಾಡಿದ್ದರು. ಇದೀಗ 11ನೇ ದಿನ ಕಾರ್ಯ ಸಹ ಮಾಡಿದ್ದಾರೆ. (ದಿಗ್ವಿಜಯ ನ್ಯೂಸ್)