'ಹಿಂದಿ ಸಂಸ್ಥಾನ- ಲಖನೌ' ನೀಡುವ ‘ಸೌಹಾರ್ದ ಸಮ್ಮಾನ’ ಪ್ರಶಸ್ತಿಗೆ ಸಾಹಿತಿ ಡಾ. ಆರ್. ಲಕ್ಷ್ಮೀನಾರಾಯಣ ಆಯ್ಕೆ

lakshminarayana
Published on

ಲಖನೌ: ಉತ್ತರ ಪ್ರದೇಶ ಸರ್ಕಾರದ 'ಹಿಂದಿ ಸಂಸ್ಥಾನ, ಲಖನೌ' ಇವರು ನೀಡುವ ‘ಸೌಹಾರ್ದ ಸಮ್ಮಾನ’ ಪುರಸ್ಕಾರಕ್ಕೆ ಕನ್ನಡದ ಖ್ಯಾತ ಲೇಖಕ ಡಾ. ಆರ್.ಲಕ್ಷ್ಮೀನಾರಾಯಣ ಅವರು 2021 ನೇ ಸಾಲಿಗೆ ಆಯ್ಕೆಯಾಗಿದ್ದಾರೆ.

ಹಿಂದೀ ಮತ್ತು ಆಯಾ ಪ್ರಾದೇಶಿಕ ಭಾಷೆಗಳ ನಡುವಣ ಸೌಹಾರ್ದ ಸಂವರ್ಧನೆಗಾಗಿ ಅನುವಾದದ ಮೂಲಕ ನೀಡಿರುವ ಕೊಡುಗೆಗಾಗಿ ಕೊಡಮಾಡುವ ಪುರಸ್ಕಾರ ಇದಾಗಿದೆ.

ಹಿಂದಿ ಮತ್ತು ಆಯಾ ಪ್ರಾದೇಶಿಕ ಭಾಷೆಗಳ ನಡುವಣ ಸೌಹಾರ್ದ ಸಂವರ್ಧನೆಗಾಗಿ 'ಹಿಂದಿ ಸಂಸ್ಥಾನ, ಲಖನೌ' ವತಿಯಿಂದ ವಿವಿಧ ಪ್ರಶಸ್ತಿಗಳನ್ನು ನೀಡಲಾಗುತ್ತಿದ್ದು, ‘ಸೌಹಾರ್ದ ಸಮ್ಮಾನ’ ಪ್ರಶಸ್ತಿಗೆ ಡಾ. ಅರ್. ಲಕ್ಷ್ಮೀನಾರಾಯಣ ಅವರೂ ಆಯ್ಕೆಯಾಗಿದ್ದಾರೆ. ಈ ಪ್ರಶಸ್ತಿಯು ಎರಡೂವರೆ ಲಕ್ಷ ರೂಪಾಯಿಗಳನ್ನು ಒಳಗೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net