ಕೇಂದ್ರದ ರಕ್ತಹೀರುವ ಕೆಲಸಕ್ಕೆ ರಾಜ್ಯ ಸಾಥ್​ ನೀಡ್ತಿದೆ: ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿ

Siddu
Published on

ಬೆಂಗಳೂರು: ಕೇಂದ್ರ ಸರ್ಕಾರದ ವೈಫಲ್ಯದಿಂದ ಅಗತ್ಯ ವಸ್ತುಗಳ ಬೆಲೆಗಳು ಯದ್ವಾತದ್ವಾ ಏರಿಕೆಯಾಗಿವೆ. ಇದು ಸಾಲದೆಂಬಂತೆ ಜಿಎಸ್ ಟಿ ದರ ಹೆಚ್ಚಳ ಬರೆ ಹಾಕಲಾಗಿದೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸುದ್ದಿಗೋಷ್ಠಿ‌ಯಲ್ಲಿ ಕಟುವಾಗಿ ಟೀಕಿಸಿದರು.

ಜಿಎಸ್ ಟಿ ವ್ಯಾಪ್ತಿಗೆ ಹೊಸದಾಗಿ ಮೊಸರು, ಮಜ್ಜಿಗೆ, ಲಸ್ಸಿ, ಪನ್ನೀರ್ ಗೆ ಶೇಕಡ ಐದರಷ್ಟು ಬ್ಯಾಂಕ್ ಚೆಕ್ ಗೆ ಶೇ.18ರಷ್ಟು ಜಿಎಸ್ ಟಿ‌ ವಿಧಿಸಿದ್ದಾರೆ. ಬಡವರು, ರೈತರು ಮಧ್ಯಮವರ್ಗದವರು, ವಿದ್ಯಾರ್ಥಿಗಳಿಗೆ ಭಾರ ಹೊರಿಸಿದ್ದಾರೆ ಎಂದು ಆರೋಪಿಸಿದರು.

ಶ್ರೀಮಂತರಿಗೆ ತೆರಿಗೆಯನ್ನು ಶೇ 30 ರಿಂದ 22ಕ್ಕೆ ಇಳಿಸಲಾಗಿದೆ. ಆದಾಯ ಕುಸಿತ, ನಿರುದ್ಯೋಗ ಹೆಚ್ಚಳ, ರೈತರು, ದುಡಿಯುವ ಜನರ ಆದಾಯ ಕಡಿಮೆಯಾಗಿದೆ. ಬಡವರು, ಮಧ್ಯಮವರ್ಗದವರ ರಕ್ತಹೀರುವ ಕೆಲಸ ಕೇಂದ್ರ ಸರ್ಕಾರ ಮಾಡುತ್ತಿದ್ದು,‌ ರಾಜ್ಯ ಸರ್ಕಾರಗಳು ಸಾಥ್ ನೀಡುತ್ತಿವೆ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರ, ರಾಜ್ಯ ಸರ್ಕಾರಗಳು ಸಾಧನೆಯ ಸಮಾವೇಶ ಮಾಡಲು ಹೊರಟಿವೆ. ದುಬಾರಿಯಾಗಿದ್ದನ್ನು ಹೇಳುವುದಿಲ್ಲ. ರಾಜ್ಯದ ರೈತರು ರಸಗೊಬ್ಬರಕ್ಕಾಗಿ ಬೀದಿಗೆ ಇಳಿದಿದ್ದರೆ, ಬಸವರಾಜ ಬೊಮ್ಮಾಯಿ‌ ನೇತೃತ್ವದ ಸರ್ಕಾರ ವರ್ಷದ ಸಾಧನೆ ಸಮಾವೇಶಕ್ಕೆ ಸಿದ್ಧತೆ ನಡೆಸಿದೆ ಎಂದು ಸಿದ್ದರಾಮಯ್ಯ ಹರಿಹಾಯ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net