More

    ಕೆಲ ಸರಕು, ಸೇವೆ ದುಬಾರಿ: ನಾಳೆಯಿಂದ ಪರಿಷ್ಕೃತ ಜಿಎಸ್​ಟಿ ದರ ಜಾರಿ, ಜನರ ಜೇಬಿಗೆ ಕತ್ತರಿ..

    ನವದೆಹಲಿ: ಒಂದು ಸಾವಿರ ರೂಪಾಯಿಗಿಂತ ಕಡಿಮೆ ಬಾಡಿಗೆ ಇರುವ ಹೋಟೆಲ್ ರೂಂಗಳು, (ಶೇ. 12) ಐದು ಸಾವಿರ ರೂಪಾಯಿ ಮತ್ತು ಅದಕ್ಕೂ ಮೇಲ್ಪಟ್ಟ ಬಾಡಿಗೆ ಇರುವ ಐಸಿಯು ರಹಿತ ಆಸ್ಪತ್ರೆಗಳ ವಾರ್ಡ್​ಗಳಿಗೆ ವಿಧಿಸಲಾಗಿರುವ (ಶೇ.5) ತೆರಿಗೆ ಸೋಮವಾರದಿಂದ ಜಾರಿಗೆ ಬರಲಿದೆ. ಪ್ಯಾಕ್ ಮಾಡಲಾದ ಬ್ರಾ್ಯಂಡ್ ಅಲ್ಲದ ಮತ್ತು ಪ್ರಿಪ್ಯಾಕ್ಡ ಲೇಬಲ್ ಅಂಟಿಸಿದ ಆಹಾರ ಪದಾರ್ಥಗಳಿಗೆ ನೀಡಲಾಗಿದ್ದ ವಿನಾಯಿತಿಯನ್ನು ಹಿಂಪಡೆದಿರುವ ಕಾರಣ ಈ ಸಾಮಗ್ರಿಗಳಿಗೆ ಶೇ. 5ರಷ್ಟು ತೆರಿಗೆ ಬೀಳಲಿದೆ. ಬ್ಯಾಂಕ್ ಚೆಕ್​ಬುಕ್ (ಶೇ. 18) ತೆರಿಗೆ ಆಕರ ಆಗಲಿದೆ. ಈ ಕುರಿತ ಅಧಿಸೂಚನೆಯನ್ನು ಕೇಂದ್ರೀಯ ಪರೋಕ್ಷ ತೆರಿಗೆ ಮಂಡಳಿ ಮತ್ತು ಸೀಮಾ ಸುಂಕ ಇಲಾಖೆಗಳು ಹೊರಡಿಸಿವೆ.

    ತೆರಿಗೆ ಹೆಚ್ಚಳದ ಪರಿಣಾಮ: ಈಗಾಗಲೇ ಹಣದುಬ್ಬರದ ಏರಿಕೆಯ ಕಾರಣ ಬೆಲೆಗಳು ಅಧಿಕವಾಗಿ ತತ್ತರಿಸಿರುವ ಬಡವರು, ಕೆಳ ಮಧ್ಯಮ ವರ್ಗದವರ ಖರೀದಿ ಶಕ್ತಿಯನ್ನು ಈ ತೆರಿಗೆ ಹೆಚ್ಚಳವು ಮಿತಗೊಳ್ಳುವ ಸಾಧ್ಯತೆ ಇದೆ. ಇದರಿಂದ ಚಿಲ್ಲರೆೆ ವ್ಯಾಪಾರ ಕಡಿಮೆ ಆಗಬಹುದು. ಅಡುಗೆ ಮನೆಗೆ ಬಳಸುವ ಚಾಕು, ಸೌಟು, ರುಬ್ಬುವ ಯಂತ್ರಗಳ ದರ ಏರಿಕೆಯು ಶ್ರೀಸಾಮಾನ್ಯ ಜೇಬಿಗೆ ಹೊರೆ ಆಗುತ್ತದೆ. ಆಗಸ್ಟ್ ಆರಂಭದಿಂದಲೇ ಹಬ್ಬಗಳ ಸಾಲು ಶುರುವಾಗುವ ಕಾರಣ ಬೆಲೆ ಏರಿಕೆ ಬಿಸಿ ಹೆಚ್ಚುತ್ತದೆ.

    ಜಿಎಸ್​ಟಿ ಮಂಡಳಿ ತೀರ್ಮಾನ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅಧ್ಯಕ್ಷತೆಯಲ್ಲಿ ಜೂ.28, 29ರಂದು ಚಂಡೀಗಢದಲ್ಲಿ ನಡೆದ ಜಿಎಸ್​ಟಿ ಮಂಡಳಿಯ 47ನೇ ಸಭೆಯಲ್ಲಿ ಹಲವು ಸರಕು, ಸೇವೆಗಳ ತೆರಿಗೆ ಪರಿಷ್ಕರಿಸಲಾಗಿತ್ತು. ಕರ್ನಾಟಕ ಸಿಎಂ ಬಸವರಾಜ ಬೊಮ್ಮಾಯಿ, ಮೇಘಾಲಯ ಸಿಎಂ ಕಾನ್ರಾಡ್ ಸಂಗ್ಮಾ ನೇತೃತ್ವದ ಸಮಿತಿಗಳು ನೀಡಿದ್ದ ಮಧ್ಯಂತರ ವರದಿಯ ಬಹುತೇಕ ಅಂಶಗಳಿಗೆ ಸಭೆೆ ಒಪ್ಪಿಗೆ ನೀಡಿತ್ತು. ಕ್ಯಾಸಿನೊ, ಆನ್​ಲೈನ್ ಗೇಮ್ ಕುದುರೆ ರೇಸ್​ಗಳ ಮೇಲೆ ಶೇ. 28ರಷ್ಟು ತೆರಿಗೆ ಹಾಕಬೇಕೆಂಬ ಶಿಫಾರಸನ್ನು ಮರುಪರಿಶೀಲಿಸಿ ಜು.15ಕ್ಕೆ ಹೊಸ ವರದಿ ಸಲ್ಲಿಸುವಂತೆ ಸಚಿವರ ಗುಂಪಿನ ಸಮಿತಿಗೆ ಸೂಚಿಸಿತ್ತು.

    ನಿರ್ಮಾಣ ಕಾಮಗಾರಿಗಳಿಗೆ ತೆರಿಗೆ

    • ರಸ್ತೆ, ಸೇತುವೆ, ರೈಲ್ವೆ, ಮೆಟ್ರೋ, ತ್ಯಾಜ್ಯನೀರು ಸಂಸ್ಕರಣ ಘಟಕ, ಚಿತಾಗಾರ ಇತರೆ ನಿರ್ವಣಕ್ಕೆ18%
    • ಐತಿಹಾಸಿಕ ಸ್ಮಾರಕಗಳು, ನಾಲೆ, ಅಣೆಕಟ್ಟೆ, ಕೊಳವೆ ಮಾರ್ಗ, ನೀರು ಸರಬರಾಜು ಘಟಕ, ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳಲ್ಲಿನ ವಿಸ್ತರಣೆ ಅಥವಾ ದುರಸ್ತಿಯ ಸಿವಿಲ್ ಕಾಮಗಾರಿಗಳಿಗೆ 18%
    • ರಾಜ್ಯ, ಕೇಂದ್ರಾಡಳಿತ ಪ್ರದೇಶಗಳು, ಕೇಂದ್ರ ಸರ್ಕಾರಗಳ ಭೂ ಸಂಬಂಧಿಸಿದ ಕಾಮಗಾರಿ ಮತ್ತು ಉಪಗುತ್ತಿಗೆ-12%

    ಐಜಿಎಸ್​ಟಿಯಿಂದ ವಿನಾಯಿತಿ: ಕ್ರಿಮಿ-ಕೀಟಗಳಿಂದ ಹರಡುವ ಸಾಂಕ್ರಾಮಿಕ ರೋಗಗಳ ತಡೆಯ ರಾಷ್ಟ್ರೀಯ ಕಾರ್ಯಕ್ರಮಕ್ಕೆ ವಿದೇಶದಿಂದ ಪೂರೈಕೆಯಾಗುವ ಮಾತ್ರೆಗಳು ಹಾಗೂ ಖಾಸಗಿ ಸಂಸ್ಥೆಗಳು ಆಮದು ಮಾಡಿಕೊಳ್ಳುವಂತಹ ಮತ್ತು ಇನ್ನು ರಕ್ಷಣಾ ಪಡೆಗಳ ಬಳಕೆಗೆ ನೀಡುವಂತಹ ಉಪಕರಣಗಳನ್ನು ಐಜಿಎಸ್​ಟಿಯಿಂದ ಹೊರಗಿಡಲಾಗಿದೆ. ಪ್ಯಾಕ್ ಮಾಡದ, ಲೇಬಲ್ ಇಲ್ಲದ ಆಹಾರ ಪದಾರ್ಥಗಳಿಗೆ ತೆರಿಗೆ ಇಲ್ಲ.

    ನೋಂದಣಿಯಿಂದ ವಿನಾಯಿತಿ: ವಾರ್ಷಿಕವಾಗಿ 40 ಲಕ್ಷ ರೂ. ವಹಿವಾಟು ನಡೆಸುವ ಉದ್ದಿಮೆ, ಸರಕು, ಸೇವೆ ಕಲ್ಪಿಸುವ ಹಾಗೂ ಆನ್​ಲೈನ್ ಮೂಲಕ ಸರಕು ಮಾರಾಟದ ಮೂಲಕ ವಾರ್ಷಿಕ 20 ಲಕ್ಷ ರೂ. ಒಳಗೆ ವಹಿವಾಟು ಹೊಂದಿರುವ ಕಂಪನಿಗಳಿಗೆ ಜಿಎಸ್​ಟಿ ಕಡ್ಡಾಯ ನೋಂದಣಿಯಿಂದ ವಿನಾಯಿತಿ ಕೊಡಲಾಗಿದೆ.

     

    ತೆರಿಗೆ ಇಳಿಕೆ

    • ರೋಪ್ ವೇ ಮೂಲಕ ಸರಕು ಸಾಗಣೆ – 18ರಿಂದ 5
    • ಇಂಧನ ವೆಚ್ಚವನ್ನು ಒಳಗೊಂಡ ನಿರ್ವಾಹಕರ ಸಹಿತ ಸರಕು ಸಾಗಣೆ – 18ರಿಂದ 12
    • ಅಸ್ಟೋಮಿ (ಶಸ್ತ್ರಚಿಕಿತ್ಸೆ) ವೈದ್ಯಕೀಯ ಪರಿಕರ, ಮೂಳೆ ಸಂಬಂಧಿ ರೋಗಳ ಚಿಕಿತ್ಸೆಗೆ ಬಳಸುವ ವಸ್ತುಗಳು ಹಾಗೂ ಕೃತಕ ಅಂಗ -12ರಿಂದ 5

    ಆಯ್ಕೆಗೆ ಅವಕಾಶ: ರಸ್ತೆ ಸಾರಿಗೆ ಸೇವಾದಾತ ರಿಗೆ ಐಟಿಸಿ ಹೊರತಾಗಿ ಶೇ. 5 ಅಥವಾ ಐಟಿಸಿ ಸಹಿತವಾಗಿ ಶೇ. 12ರಷ್ಟು ತೆರಿಗೆ ವಿಧಿಸುವ ಆಯ್ಕೆಯನ್ನು ನೀಡಲಾಗಿದೆ.

    ಕೆಲ ಸರಕು, ಸೇವೆ ದುಬಾರಿ: ನಾಳೆಯಿಂದ ಪರಿಷ್ಕೃತ ಜಿಎಸ್​ಟಿ ದರ ಜಾರಿ, ಜನರ ಜೇಬಿಗೆ ಕತ್ತರಿ..

    ಇಷ್ಟಪಟ್ಟು ಪುರುಷನ ಜತೆಗಿದ್ದು, ಸಂಬಂಧ ಕೆಟ್ಟಾಗ ರೇಪ್​ ಆಯ್ತು ಅನ್ನೋ ಹಾಗಿಲ್ಲ: ಸುಪ್ರೀಂ ಕೋರ್ಟ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts