More

    3 ನೊಬೆಲ್ ಶಾಂತಿ ಪ್ರಶಸ್ತಿ ಪಡೆದ ಸಂಸ್ಥೆ ರೆಡ್‌ಕ್ರಾಸ್:ಹೆಮ್ಮಿಗೆ ಮೋಹನ್

    ಹಾಸನ: ಸರ್ ಜಿನ್ ಹೆನ್ರಿ ಡ್ಯೂನಾಂಟ್‌ರವರ ತ್ಯಾಗ ಹಾಗೂ ಸೇವಾ ಮನೋಭಾವನೆಯಿಂದಾಗಿ ವಿಶ್ವದಾದ್ಯಂತ ಅತಿ ದೊಡ್ಡದಾದ ಮಾನವೀಯ ಸೇವಾ ಸಂಸ್ಥೆಯಾದ ರೆಡ್ ಕ್ರಾಸ್ ಸಂಸ್ಥೆಯು ಉದಯವಾಗಲು ಸಾಧ್ಯವಾಯಿತು. ಮೂರು ನೊಬೆಲ್ ಶಾಂತಿ ಪ್ರಶಸ್ತಿಗಳನ್ನು ಪಡೆದಿರುವ ಏಕೈಕ ಸ್ವಯಂ ಸೇವಾ ಸಂಸ್ಥೆ ಎಂದು ರೆಡ್ ಕ್ರಾಸ್ ಸಭಾಪತಿ ಹೆಮ್ಮಿಗೆ ಮೋಹನ್ ತಿಳಿಸಿದರು.
    ನಗರದ ಗಂಧದ ಕೋಠಿ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ವಿಶ್ವ ರೆಡ್ ಕ್ರಾಸ್ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ರೆಡ್ ಕ್ರಾಸ್ ಸಂಸ್ಥೆಯ ಹಲವು ವರ್ಷದಿಂದ ಜಿಲ್ಲೆಯಲ್ಲಿ ಸಾಮಾಜಿಕ ಕಳಕಳಿಯಿಂದ ಕೆಲಸ ಮಾಡುತ್ತಿದೆ ಎಂದು ಹೇಳಿದರು.
    ರೆಡ್ ಕ್ರಾಸ್ ಸಂಸ್ಥೆಯ ನಿರ್ದೇಶಕ ಅಮ್ಜದ್ ಖಾನ್ ಮಾತನಾಡಿ, ರಕ್ತದಾನವನ್ನು ಮಾಡಿದರೆ ಅದಕ್ಕಿಂತ ಮಹಾದಾನ ಮತ್ತೊಂದು ಇಲ್ಲ. ಪ್ರತಿಯೊಬ್ಬರು ರಕ್ತದಾನ ಮಾಡಬೇಕು ಎಂದು ಮನವಿ ಮಾಡಿದರು.
    ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಮಂಜಯ್ಯ ಮಾತನಾಡಿ, ಜೀವನದಲ್ಲಿ ಮಾನವೀಯತೆ ಮೆರೆಯಲು ಬೇಕಾದ ಗುಣಗಳನ್ನು ಅಳವಡಿಸಿಕೊಳ್ಳಬೇಕು ಹಾಗೂ ಉತ್ತಮ ಮಾತುಗಳನ್ನು ಕೇಳಿ ಸ್ಮರಣೆಯಲ್ಲಿ ಇಟ್ಟುಕೊಳ್ಳುವಂತಹ ನಡವಳಿಕೆಯನ್ನು ಬೆಳೆಸಿಕೊಳ್ಳಬೇಕು ಎಂದರು.
    ಎಲ್ಲಾ ಸೇವಾ ಸಂಘಟನೆಗಳು ಸಮಾಜದ ಒಳಿತಿಗೆ ಒಗ್ಗಟ್ಟಾಗಿ ಕಾರ್ಯಕ್ರಮಗಳನ್ನು ರೂಪಿಸಬೇಕು. ನಂತರ ಕಾಲೇಜಿನ ವಿದ್ಯಾರ್ಥಿಗಳಿಗೆ ಉಪಯುಕ್ತವಾಗಲೆಂದು ಪ್ರಥಮ ಚಿಕಿತ್ಸೆ ಕಿಟ್ ಮತ್ತು ಮಾಸ್ಕ್‌ಗಳನ್ನು ನೀಡಲಾಗುವುದು ಎಂದು ಹೇಳಿದರು.
    ಕಾರ್ಯಕ್ರಮದಲ್ಲಿ ರೆಡ್ ಕ್ರಾಸ್ ಸಂಸ್ಥೆಯ ಖಜಾಂಜಿ ಎಚ್.ಡಿ ಜಯೇಂದ್ರ ಕುಮಾರ್, ಸಂಚಾಲಕ ಎಚ್.ಆರ್.ಹರ್ಷಿತ್, ಕಾಲೇಜಿನ ಯುವ ರೆಡ್ ಕ್ರಾಸ್ ಘಟಕದ ಸಂಚಾಲಕ ಡಾ.ಶಿವಕುಮಾರ್, ರೆಡ್ ಕ್ರಾಸ್ ಸಂಸ್ಥೆ ನಿರ್ದೇಶಕಿ ಕೆ.ಟಿ. ಜಯಶ್ರೀ, ತಿಮ್ಮಶೆಟ್ಟಿ ಮತ್ತು ವಿದ್ಯಾರ್ಥಿನಿಯರು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts