More

    2 ಕೆಜಿ ತೂಕದ ಬೆಳ್ಳಿ ವಸ್ತುಗಳ ಕಳವು

    ಹಾಸನ: ಮನೆಯಲ್ಲಿ ಯಾರೂ ಇಲ್ಲದಿರುವುದನ್ನು ಗಮನಿಸಿದ ಕಳ್ಳರು ಮನೆಯ ಬೀಗವನ್ನು ಒಡೆದು ಮನೆಯಲ್ಲಿದ್ದ ಸುಮಾರು 1,40,000 ರೂ. ಮೌಲ್ಯದ 2 ಕೆ.ಜಿ ಬೆಳ್ಳಿ ಪದಾರ್ಥಗಳು 35 ಸಾವಿರ ರೂ. ಹಣವಿದ್ದ ಎರಡು ಲಾಕರ್‌ಗಳನ್ನು ಕಳವು ಮಾಡಿಕೊಂಡು ಹೋಗಿದ್ದಾರೆ.
    ಹಾಸನದ ಶಾಂತಿನಗರದ 2ನೇ ಹಂತ, 80 ಅಡಿ ರಸ್ತೆಯಲ್ಲಿ ಅವಿನಾಶ್ ಗೆರ‌್ಲಾಡ್ ಅವರು ಮನೆಯಲ್ಲಿ ಈ ಕಳವು ನಡೆದಿದೆ.
    ಅವಿನಾಶ್ ಅವರು ಏ.26ರ ಮಧ್ಯಾಹ್ನ 3 ಗಂಟೆಗೆ ಮನೆ ಲಾಕ್ ಮಾಡಿ ಸಂಸಾರಸಮೇತ ತಮ್ಮ ಊರಾದ ಚನ್ನರಾಯಪಟ್ಟಣ ತಾಲ್ಲೂಕು ಎಂ.ದಾಸಪುರಕ್ಕೆ ಹೋಗಿದ್ದರು. ಮನೆಯಲ್ಲಿ ಯಾರೂ ಇಲ್ಲದಿರುವುದನ್ನು ಗಮನಿಸಿದ ಕಳ್ಳರು ಏ.26ರ ಮಧ್ಯಾಹ್ನದಿಂದ ಮೇ 7ರ ನಡುವಿನ ಅವಧಿಯಲ್ಲಿ ಮನೆಯ ಬೀಗ ಒಡೆದು ಮನೆಯ ಬೀರುವಿನಲ್ಲಿ ಇಡಲಾಗಿದ್ದ ಅಂದಾಜು 1.40 ಲಕ್ಷ ರೂ. ಮೌಲ್ಯದ 2 ಕೆ.ಜಿ. ಬೆಳ್ಳಿ ಪದಾರ್ಥಗಳನ್ನು ಹಾಗೂ 35 ಸಾವಿರ ಹಣವಿದ್ದ ಎರಡು ಲಾಕರ್‌ಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದಾನೆ.
    ಮೇ 7ರಂದು ಅವಿನಾಶ್ ಸ್ನೇಹಿತ ಗಣೇಶ್ ಎಂಬುವವರು ತಮ್ಮ ಮನೆಯ ಗೃಹಪ್ರವೇಶದ ಆಮಂತ್ರಣ ಪತ್ರಿಕೆಯನ್ನು ನೀಡಲು ಮನೆಯ ಬಳಿಗೆ ಹೋದಾಗ ಮನೆಯ ಬಾಗಿಲು ಒಡೆದಿರುವುದನ್ನು ನೋಡಿ ಕೂಡಲೇ ಅವಿನಾಶ್‌ಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಕೂಡಲೇ ಅವಿನಾಶ್ ಹಾಸನದ ಮನೆಗೆ ಬಂದು ನೋಡಲಾಗಿ ಕಳ್ಳತನವಾಗಿರುವುದು ತಿಳಿದು ಬಂದಿದೆ. ಘಟನೆ ಸಂಬಂಧ ಹಾಸನದ ಪೆನ್ಷನ್ ಮೊಹಲ್ಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ತನಿಖೆ ಪ್ರಗತಿಯಲ್ಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts