ಜೆಡಿಎಸ್ ಕಾರ್ಯಕರ್ತನ ಸಾವಿಗೆ ಟ್ವಿಸ್ಟ್​! ಇದು ಅಪಘಾತವಲ್ಲ, ಕೊಲೆ ಎಂಬ ರಹಸ್ಯ ಭೇದಿಸಿದ ಪೊಲೀಸರು

ckb
Published on

ಚಿಕ್ಕಬಳ್ಳಾಪುರ: ಶಿಡ್ಲಘಟ್ಟ ಜೆಡಿಎಸ್ ಕಾರ್ಯಕರ್ತ ಚಿಕ್ಕ ಅಂಜಿನಪ್ಪ ಸಾವಿನ ಪ್ರಕರಣ ಈಗ ಹೊಸ ತಿರುವು ಪಡೆದುಕೊಂಡಿದೆ. ಇದು ಸಾವಲ್ಲ ಬದಲಿಗೆ ಕೊಲೆ ಎನ್ನುವುದು ತನಿಖೆಯಿಂದ ತಿಳಿದುಬಂದಿದೆ.

ಶಿಡ್ಲಘಟ್ಟ ಹಾಗೂ ಚೀಮಮಂಗಲ ಮಾರ್ಗದ ನಾರಾಯಣದಾಸರಹಳ್ಳಿ ಬಳಿ ಜೂನ್ 02 ರ ರಾತ್ರಿ 10 ಗಂಟೆ ಸುಮಾರಿಗೆ ಚಿಕ್ಕ ಅಂಜಿನಪ್ಪ ರಸ್ತೆ ಮಧ್ಯೆ ಬೈಕ್ ಸಮೇತ ಬಿದ್ದು ತಲೆಯಲ್ಲಿ ತೀವ್ರ ರಕ್ತಸ್ರಾವವಾಗಿ ಮೃತಪಟ್ಟಿದ್ದರು. ಮೇಲ್ನೋಟಕ್ಕೆ ಇದು ಬೈಕ್​ ಅಪಘಾತ ಎನ್ನುವಂತೆ ಬಿಂಬಿಸಲಾಗಿತ್ತು. ಎಲ್ಲರೂ ಹಾಗೆಯೇ ಅಂದುಕೊಂಡಿದ್ದರು.

ಆದರೆ ಪೊಲೀಸರು ಈ ಸಾವಿನ ಪ್ರಕರಣವನ್ನು ಭೇದಿಸಿದ್ದಾರೆ. ಇದು ಅಪಘಾತದ ಸಾವಲ್ಲ, ಬದಲಿಗೆ ಕೊಲೆ ಎನ್ನುವುದು ತಿಳಿದುಬಂದಿದೆ. ಕೊಲೆಗೆ ಸಂಬಂಧಿಸಿದಂತೆ ಕೊಂಡ ಅಲಿಯಾಸ್ ವೆಂಕಟೇಶ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ವೈಯುಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಈ ಕೊಲೆ ನಡೆದಿದೆ. ಆರೋಪಿ ವೆಂಕಟೇಶ್​ನ ಅಣ್ಣ ನಾಗೇಶ್​ ಹೆಸರಿನಲ್ಲಿ ಜಮೀನು ಖಾತೆ ಮಾಡಿಕೊಳ್ಳಲು ಚಿಕ್ಕ ಅಂಜಿನಪ್ಪ ಸಹಾಯ ಮಾಡುತ್ತಿದ್ದುದೇ ಅವರ ಜೀವಕ್ಕೆ ಕುತ್ತಾಗಿ ಪರಿಣಮಿಸಿದೆ. ಅಣ್ಣನಿಗೆ ಸಹಾಯ ಮಾಡುತ್ತಿರುವ ಕಾರಣ, ತಮ್ಮ ಈ ಕೊಲೆ ಮಾಡಿದ್ದಾನೆ!

ತಾಲೂಕು ಕಚೇರಿಯಲ್ಲಿ ಭೂ ದಾಖಲೆಗಳನ್ನ ಮಾಡಿಸುವುದಲ್ಲಿ ಚಿಕ್ಕ ಅಂಜಿನಪ್ಪ ಎಕ್ಸ್​ಪರ್ಟ್​ ಆಗಿದ್ದರು. ನನಗೆ ಯಾವುದೇ ಆಸ್ತಿಬಾರದೆ ಇರುವ ಹಾಗೆ ಮಾಡಿ ಬಿಡುತ್ತಾನೆ ಎಂದು ಹೆದರಿಗೆ ವೆಂಕಟೇಶ್​ ಈ ಕೊಲೆ ಮಾಡಿದ್ದಾನೆ. ವೆಂಕಟೇಶ್​ ಬೈಕ್​ನಲ್ಲಿ ಬರುತ್ತಿದ್ದ ವೇಳೆ ಬೈಕ್​ ನಿಲ್ಲಿಸಿ ದೊಣ್ಣೆಯಿಂದ ತಲೆಗೆ ಹೊಡೆದು ಕೊಲೆ ಮಾಡಿ ನಂತರ ಅಪಘಾತದ ರೀತಿಯಲ್ಲಿ ಬಿಂಬಿಸಲು ಹೋಗಿದ್ದ. ಆದರೆ ಈಗ ಸಿಕ್ಕಿಬಿದ್ದಿದ್ದಾನೆ. ಪೊಲಿಸರು ಆತನನ್ನು ಬಂಧಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net