ಒಬ್ಬಳಿಗೆ ಕೈಕೊಟ್ಟು ಇನ್ನೊಬ್ಬಳ ಮದ್ವೆಯಾದ: ನವವಿವಾಹಿತೆಯ ಕುತ್ತಿಗೆ ಕೊಯ್ದ ಶಿಡ್ಲಘಟ್ಟದ ಪ್ರೇಯಸಿ!

pic murder
Published on

ಚಿಕ್ಕಬಳ್ಳಾಪುರ: ಪ್ರೀತಿಸಿದ ಯುವಕ ಮದುವೆಯಾದ ಎನ್ನುವ ಕಾರಣಕ್ಕೆ ಆತನ ಪತ್ನಿಯ ಕೊಲೆಗೆ ಯುವತಿ ಯತ್ನಿಸಿರುವ ಘಟನೆ .ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಆನೆಮಡಗು ಗ್ರಾಮದಲ್ಲಿ ನಡೆದಿದೆ.

ಚಾಕುವಿನಿಂದ ಪ್ರಿಯಕರನ ಪತ್ನಿಯ ಕತ್ತು ಕೊಯ್ದು ಕೊಲೆಗೆ ಯತ್ನಿಸಿರುವ ಆರೋಪವನ್ನು ಗಂಗೋತ್ರಿ ಎಂಬ ಯುವತಿ ಎದುರಿಸುತ್ತಿದ್ದು, ಆಕೆಯನ್ನು ದಿಬ್ಬೂರಹಳ್ಳಿ ಪೊಲೀಸರು ಬಂಧಿಸಿದ್ದಾರೆ

ತೀವ್ರ ಸ್ವರೂಪದಲ್ಲಿ ಗಾಯವಾಗಿರುವ ಮೋನಿಕಾಳನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮೋನಿಕಾ ಮನೆಯಲ್ಲಿ ಒಂಟಿಯಾಗಿದ್ದ ಸಂದರ್ಭದಲ್ಲಿ ಅವರ ಕೊಲೆಗೆ ಯತ್ನಿಸಲಾಗಿದೆ.

ಗಂಗರಾಜು ಎಂಬ ಯುವಕ ಗಂಗೋತ್ರಿಯನ್ನು ಪ್ರೀತಿಸಿ, ಮೋನಿಕಾಳನ್ನು ಮದುವೆಯಾಗಿದ್ದ. ಈ ಕೃತ್ಯದಲ್ಲಿ ಗಂಗರಾಜು ಭಾಗಿಯಾಗಿರುವ ಶಂಖೆ ವ್ಯಕ್ತವಾಗಿದ್ದು. ದಿಬ್ಬೂರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net