

ಕಲಬುರಗಿಯ ಎಸ್.ಎಸ್.ತೆಗನೂರ ಕಾಲೇಜಿನಲ್ಲಿ ಬಿಳ್ಕೋಡುಗೆ ಸಮಾರಂಭ
ವಿಜಯವಾಣಿ ಸುದ್ದಿಜಾಲ ಕಲಬುರಗಿ
ಕಠಿಣ ಪರಿಶ್ರಮ ಮತ್ತು ಶ್ರದ್ಧೆಯಿಂದ ಓದುವ ಮೂಲಕ ಜೀವನದಲ್ಲಿ ಎದುರಾಗುವ ಸವಾಲು ಸ್ವೀಕರಿಸಿ ಯಶಸ್ವಿ ವ್ಯಕ್ತಿಗಳಾಗಬೇಕು, ಮಾದರಿಯಾಗಿ ಜೀವಿಸಬೇಕು ಎಂದು ಎಸ್.ಎನ್.ತೆಗನೂರ ಏಜುಕೇಷನಲ್ ಟ್ರಸ್ಟ್ ಕಾರ್ಯದರ್ಶಿಗಳು ಆಗಿರುವ ಪ್ರಾಚಾರ್ಯೆ ಡಾ.ಜ್ಯೋತಿ ತೆಗನೂರ ಹೇಳಿದರು.
ನಗರದ ಎಸ್.ಎಂ.ಪoಡಿತ ರಂಗ ಮಂದಿರದಲ್ಲಿ ಬುಧವಾರ ಆಯೋಜಿಸಿದ್ದ ಎಸ್.ಎಸ್.ತೆಗನೂರ ಪಿಯು ಮತ್ತು ಪದವಿ ಕಾಲೇಜಿನ ಪ್ರಥಮ ಪಿಯುಸಿ ಮತ್ತು ಪದವಿ ವಿದ್ಯಾರ್ಥಿಗಳಿಗೆ ಸ್ವಾಗತ ಹಾಗೂ ದ್ವಿತೀಯ ಹಾಗೂ ಅಂತಿಮ ವರ್ಷದ ವಿದ್ಯಾರ್ಥಿಗಳ ಬಿಳ್ಕೋಡುಗೆ ಹಾಗೂ ಹೆಚ್ಚಿನ ಅಂಕಗಳನ್ನು ಪಡೆದ ಸಾಧಕ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮತ್ತು ಸನ್ಮಾನ ಸಮಾರಂಭದÀ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಾಧನೆ ಓದುಗನ ಕೈವಶವಾಗುತ್ತದೆ. ಓದುವ ಸಮಯದಲ್ಲಿ ಕಲಿಕೆಗೆ ಒತ್ತು ನೀಡಿದರೆ, ಮುಂದೆ ಗೌರವಯುತವಾಗಿ ಇರಬಹುದು. ಹೊಸ ವಿಚಾರ ಕಲಿಕೆಗೆ ಗಮನ ಕೊಡಿ, ಮಾನವೀಯ ಮೌಲ್ಯ ಮೈಗೂಡಿಸಿಕೊಳ್ಳಿ, ಒಳ್ಳೆಯ ಗುಣವಂತರಾಗುವ ಮೂಲಕ ಶ್ರೇಷ್ಠ ವ್ಯಕ್ತಿಗಳಾಗಬೇಕು. ಕಲಿತ ಸಂಸ್ಥೆಗೆ, ಹೆತ್ತÀವರಿಗೆ ಕೀರ್ತಿ ತರುವಂತೆ ಬೆಳೆಯಬೇಕು ಎಂದು ಡಾ.ಜ್ಯೋತಿ ಕಿವಿಮಾತು ಹೇಳಿದರು. ಅಲ್ಲದೆ ಕಳೆದ ಶೈಕ್ಷಣಿಕ ಸಾಲಿನಲ್ಲಿ ರ‍್ಯಾಂಕ್‌ಗಳನ್ನು ಪಡೆದುಕೊಂಡಿರುವ ಸಾಧನೆ ಪಟ್ಟಿ ವಿವರಿಸಿದರು.
ಮುಖ್ಯ ಅತಿಥಿಗಳಾಗಿದ್ದ ತೆಗನೂರ ಏಜುಕೇಷನಲ್ ಟ್ರಸ್ಟ್ ಅಧ್ಯಕ್ಷ ರವೀಂದ್ರ ತೆಗನೂರ ಮಾತನಾಡಿ, ಗ್ರಾಮೀಣ ಪ್ರದೇಶದ ಮತ್ತು ಬಡ ಮಧ್ಯಮ ವರ್ಗದ ವಿದ್ಯಾರ್ಥಿಗಳು ಹೆಚ್ಚಾಗಿದ್ದು, ಅವರಿಗೆ ಗುಣಮಟ್ಟ ಜತೆಗೆ ಹೈಟೆಕ್ ಶಿಕ್ಷಣ ನೀಡಲು ಒತ್ತು ನೀಡಲಾಗಿದೆ. ಬೋಧಕರು ಹಾಗೂ ಸಿಬ್ಬಂದಿ ಸದಾ ವಿದ್ಯಾರ್ಥಿಗಳ ಜತೆಗಿದ್ದು ಪ್ರೋತ್ಸಾಹಿಸುತ್ತಾರೆ ಎಂದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಬಾಬುರಾವ ಯಡ್ರಾಮಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ಪ್ರಾಧ್ಯಾಪಕ ರಮೇಶ ಬಡಿಗೇರ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿಗಳಾದ ಕಾವೇರಿ ಪ್ರಾರ್ಥಿಸಿದರು. ಋತಿಕಾ ಪ್ರಾರ್ಥಿಸಿದರು. ಪದವಿಯಲ್ಲಿ ರ‍್ಯಾಂಕ್ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಿ ಗೌರವಿಸಲಾಯಿತು.
====
=====