ಸಿನಿಮೀಯ ರೀತಿಯಲ್ಲಿ ಬೆಂಗಳೂರಿನ ರೌಡಿಷೀಟರ್ ಎಸ್ಕೇಪ್‌: ಕೂದಲೆಳೆ ಅಂತರದಿಂದ ಪರಾರಿಯಾಗಿದ್ದೇ ರೋಚಕ!

rowdy
Published on

ಬೆಂಗಳೂರು: ನಗರದ ಹುಳಿಮಾವು ಠಾಣೆ ರೌಡಿಶೀಟರ್ ಜೆಸಿಬಿ ನಾರಾಯಣ ಹತ್ಯೆಗೆ ಭಾರಿ ಸಂಚು ನಡೆದಿದ್ದು, ಆತ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾನೆ.

ಇಂದು ಬೆಳಗಿನ ಜಾವ ಈ ಘಟನೆ ನಡೆದಿದೆ. ನಾಲ್ಕೈದು ಜನ ದುಷ್ಕರ್ಮಿಗಳ ಗ್ಯಾಂಗ್ ಮಾರಕಾಸ್ತ್ರ ಹಿಡಿದು ಹೊಂಚು ಹಾಕಿ ನಾರಾಯಣನ ಮೇಲೆ ಹಲ್ಲೆಗೆ ಯತ್ನಿಸಿತ್ತು. ಆತನ ಕಾರು ಅಡ್ಡಗಟ್ಟಿದ್ದ ಗ್ಯಾಂಗ್ ಹಲ್ಲೆಗೆ ಮುಂದಾಗಿತ್ತು.

ಕಾರಿನಲ್ಲಿ ಕುಳಿತಿದ್ದ ದುಷ್ಕರ್ಮಿಗಳು ಜೆಸಿಬಿ ನಾರಾಯಣ ಇನ್ನೊಂದು ಕಾರಿನಲ್ಲಿ ಬರುತ್ತಿದ್ದಂತೆಯೇ ಅಟ್ಯಾಕ್‌ ಮಾಡಿದ್ದರು. ಆದರೆ ಇದನ್ನು ಮೊದಲೇ ಅರಿತ ನಾರಾಯಣ, ಮಚ್ಚು-ಲಾಂಗ್ ಹಿಡಿದು ಕಾರಿನಿಂದ ಇಳಿದು ದುಷ್ಕರ್ಮಿಗಳು ಅಡ್ಡಗಟ್ಟುತ್ತಿದ್ದಂತೆ ಕಾರು ರಿವರ್ಸ್ ಚಲಾಯಿಸಿದ ಎಸ್ಕೇಪ್ ಆಗಿದ್ದಾನೆ. ಸಿನಿಮೀಯ ರೀತಿಯಲ್ಲಿ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾನೆ.

ಬೇಗೂರು ಠಾಣೆಯಲ್ಲಿ ದೂರು ದಾಖಲಾಗಿದೆ. ಸಿಸಿ ಕ್ಯಾಮರಾ ದೃಶ್ಯಾವಳಿ ಹಾಗೂ ದೂರನ್ನ ಆಧರಿಸಿ ಆರೋಪಿಗಳಿಗೆ ಶೋಧಕಾರ್ಯ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net