ಕರ್ನಾಟಕ ಕೂಲ್​ ಕೂಲ್​... ಇದೇ ಮೊದಲ ಬಾರಿ ಬೆಂಗಳೂರಲ್ಲಿ ದಾಖಲೆ ಉಷ್ಣಾಂಶ ಕುಸಿತ

cool karanataka
Published on

ಬೆಂಗಳೂರು: ಬಿಸಿಲು ಧಗೆಯಿಂದ ಕಂಗಟ್ಟಿದ್ದ ರಾಜ್ಯದ ಜನರಿಗೆ ಕೂಲ್ ವಾತಾವರಣ ಅನುಭವವಾಗುತ್ತಿದೆ.

ಸತತ ಮೂರು ದಿನಗಳಿಂದ ಸೃಷ್ಟಿಯಾಗಿದ್ದ ಅಸನಿ ಚಂಡಮಾರುತ ಪರಿಣಾಮ ರಾಜಧಾನಿ ಬೆಂಗಳೂರು ಸೇರಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಗರಿಷ್ಠ ಹಾಗೂ ಕನಿಷ್ಠ ತಾಪಮಾನದಲ್ಲಿ ಗಣನೀಯ ಕುಸಿತವಾಗಿದ್ದು, ಸಂಪೂರ್ಣ ಹವಾಮಾನ ಚಿತ್ರಣವೇ ಬದಲಾಗಿದೆ. ಅಲ್ಲದೆ, ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಪ್ರಸ್ತುತ ತಿಂಗಳಲ್ಲಿ ಗರಿಷ್ಠ ತಾಪಮಾನದಲ್ಲಿ ಅತಿ ಕಡಿಮೆ ಉಷ್ಣಾಂಶ ದಾಖಲಾಗಿದೆ.

ಸಿಲಿಕಾನ್ ಸಿಟಿಯಲ್ಲಿ ಬರೋಬ್ಬರಿ 11 ಡಿಗ್ರಿ ಸೆಲ್ಸಿಯಸ್ ಕುಸಿತವಾಗಿದ್ದು, ಗುರುವಾರ ಗರಿಷ್ಠ ತಾಪಮಾನದಲ್ಲಿ 23.0 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಅಲ್ಲದೆ, ಹಂಪೆ 11, ಚಿತ್ರದುರ್ಗ ಮತ್ತು ಬಳ್ಳಾರಿ ತಲಾ 9, ಮಡಿಕೇರಿ ಮತ್ತು ರಾಯಚೂರು ತಲಾ 8, ಬೆಳಗಾವಿ ಮತ್ತು ಮಂಗಳೂರು ತಲಾ 7, ಮಂಡ್ಯ, ಗದಗ, ಬಾದಮಿ ಮತ್ತು ವಿಜಯಪುರದಲ್ಲಿ ತಲಾ 6 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನದಲ್ಲಿ ಇಳಿಕೆಯಾಗಿದೆ.

ಪ್ರಸ್ತುತ ತಿಂಗಳಲ್ಲಿ ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನದಲ್ಲಿ ಸರಾಸರಿ 42-43 ಡಿಗ್ರಿ ಸೆಲ್ಸಿಯಸ್ ಇರುತ್ತಿತ್ತು. ಅಲ್ಲದೆ, ದಕ್ಷಿಣ ಕರ್ನಾಟಕ ಜಿಲ್ಲೆಗಳಲ್ಲಿ 36-38 ಡಿಗ್ರಿ ಸೆಲ್ಸಿಯಸ್ ದಾಖಲಾಗುತ್ತಿತ್ತು. ಆದರೆ, ಚಂಡಮಾರುತದಿಂದ ರಾಜ್ಯದಲ್ಲಿ ಜೋರಾಗಿ ಮಳೆ ಬರದಿದ್ದರೂ ವಾತಾವರಣವನ್ನು ತಂಪಾಗಿಸಿದೆ.

ಒಂದೆರಡು ದಿನಗಳಲ್ಲಿ ಕುಂಠಿತ:

ನಾಲ್ಕೈದು ದಿನಗಳಿಂದ ರಾಜ್ಯದಲ್ಲಿ ಸುರಿಯುತ್ತಿರುವ ಮಳೆ ಮೇ 14ರ ನಂತರ ಕುಂಠಿತವಾಗಲಿದೆ. ಬಂಗಾಳಕೊಲ್ಲಿಯಲ್ಲಿ ಉಂಟಾಗಿದ್ದ ಚಂಡಮಾರುತ ಸದ್ಯ ದುರ್ಬಲವಾಗಿದೆ. ಕರಾವಳಿ, ಮಲೆನಾಡು ಹಾಗೂ ದಕ್ಷಿಣ ಒಳನಾಡಿನಲ್ಲಿ ಮೇ 13ರಂದು ಭಾರಿ ಮಳೆಯಾಗಲಿದ್ದು, ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ೋಷಿಸಿದೆ. ಉಳಿದೆಡೆ ಹಗುರದಿಂದ ಕೂಡಿದ ಸಾಧಾರಣ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮೂನ್ಸೂಚನೆ ನೀಡಿದೆ.

ಮೇ ತಿಂಗಳಲ್ಲಿ ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನದಲ್ಲಿ ಉಷ್ಣಾಂಶ ಕುಸಿತವಾಗಿರುವುದು ಇದೇ ಮೊದಲು. ಸತತ 3 ದಿನ ಚಂಡಮಾರುತ ಏೆಕ್ಟ್‌ನಿಂದ ವಾತಾವರಣದಲ್ಲಿ ಬದಲಾವಣೆಯಾಗಿದೆ. ಮೋಡ ಕವಿದ ವಾತಾವರಣ ಹಾಗು ತೇವಾಂಶ ಭರಿತ ಮೋಡ ಇರುವುದರಿಂದ ಮಳೆ ಸುರಿಯುವ ಜತೆಗೆ ಚಳಿ ಕಾಣಿಸಿಕೊಳ್ಳಲಿದೆ. ಜತೆಗೆ, ಗರಿಷ್ಠ ಹಾಗೂ ಕನಿಷ್ಠ ತಾಪಮಾನ ಇಳಿಕೆಯಾಗಿದೆ ಎಂದಿದ್ದಾರೆ ಹವಾಮಾನ ತಜ್ಞ ಡಾ.ಶ್ರೀನಿವಾಸರೆಡ್ಡಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net