

ಬೆಂಗಳೂರು: ಬೈಕ್‌ನಲ್ಲಿ ಸವಾರಿ ಮಾಡುತ್ತಿದ್ದಾಗ ಆಕಸ್ಮಿಕವಾಗಿ ಮೊಬೈಲ್ ಕಳೆದುಕೊಂಡಿದ್ದ ಇಂಜಿನಿಯರ್ ವಿದ್ಯಾರ್ಥಿಗೆ ಸಂಚಾರ ಪೊಲೀಸರು ಚಾಣಾಕ್ಷದಿಂದ ಕೆಲವೇ ನಿಮಿಷಗಳಲ್ಲಿ ಪತ್ತೆ ಮಾಡಿಕೊಟ್ಟಿದ್ದಾರೆ.
ಚಿಕ್ಕಪೇಟೆ ಸಂಚಾರ ಠಾಣೆಯ ಎಂ.ಆರ್. ಪ್ರಸನ್ನ ಮತ್ತು ಎಚ್.ಎಂ.ಅನಿಲ್ ಕರ್ತವ್ಯಪ್ರಜ್ಞೆ ತೋರಿದ ಪೊಲೀಸ್ ಸಿಬ್ಬಂದಿ.
ಗುರುವಾರ ಬೆಳಗ್ಗೆ ಮೈಸೂರು ರಸ್ತೆಯಲ್ಲಿ ಮುಖ್ಯಮಂತ್ರಿ ಸಂಚಾರವಿದ್ದ ಕಾರಣ ಸ್ಯಾಟಲೈಟ್ ಬಸ್ ನಿಲ್ದಾಣ ಸಮೀಪ ಪೊಲೀಸ್ ಸಿಬ್ಬಂದಿಯಾದ ಪ್ರಸನ್ನ ಮತ್ತು ಅನಿಲ್ ಕರ್ತವ್ಯ ನಿರ್ವಹಿಸುತ್ತಿದ್ದರು. ಇದೇ ವೇಳೆ ಇಂಜಿನಿಯರ್ ವಿದ್ಯಾರ್ಥಿ, ಬೈಕ್‌ನಲ್ಲಿ ಸಾಗಬೇಕಾದರೆ ಮೊಬೈಲ್‌ನ್ನು ಆಕಸ್ಮಿಕವಾಗಿ ಕಳೆದುಕೊಂಡಿದ್ದ. ಸ್ವಲ್ಪ ದೂರ ಸಾಗಿದ ಮೇಲೆ ನೋಡಿಕೊಂಡು ವಾಪಸ್ ಬಂದು ಸುತ್ತಮುತ್ತ ಹುಡುಕಾಟ ನಡೆಸುತ್ತಿದ್ದಾಗ ಸಮೀಪವೇ ನಿಂತಿದ್ದ ಟ್ರಾಫಿಕ್ ಪೊಲೀಸರ ಹತ್ತಿರ ಹೋಗಿ ವಿಷಯ ತಿಳಿಸಿದ್ದಾನೆ. ಆಗ ಪೊಲೀಸರು, ಕಳೆದು ಹೋಗಿದ್ದ ವಿದ್ಯಾರ್ಥಿ ಮೊಬೈಲ್ ನಂಬರ್ ಕರೆ ಮಾಡಿದಾಗ ಕರೆ ಸ್ವೀಕರಿಸುತ್ತಿರಲಿಲ್ಲ. ಹಲವು ಬಾರಿ ಮಾಡಿದರೂ ಕರೆ ಮಾತ್ರ ಸ್ವೀಕರಿಸುತ್ತಿರಲಿಲ್ಲ.
ತಕ್ಷಣ ಚಾಣಾಕ್ಷ ಬುದ್ದಿ ಉಪಯೋಗಿಸಿದ ಟ್ರಾಫಿಕ್ ಸಿಬ್ಬಂದಿ, ಗೂಗಲ್ ಡ್ರೈವ್‌ನಲ್ಲಿ ಸರ್ಚ್ ಡಿವೈಸ್ ಸಹಾಯದಿಂದ ಹುಡುಕಾಟ ನಡೆಸಿದಾಗ ಕಳೆದು ಹೋಗಿದ್ದ ಮೊಬೈಲ್ ಲೋಕೇಷನ್ ಪತ್ತೆಯಾಗಿದೆ. ಅಂದಾಜು 6 ಕಿ.ಮೀಟರ್ ದೂರದಲ್ಲಿ ಮೊಬೈಲ್ ಇರುವುದು ಗೊತ್ತಾಗಿ ತಕ್ಷಣ, ವಿದ್ಯಾರ್ಥಿಯನ್ನು ಕರೆದುಕೊಂಡು ಲೋಕೇಷನ್ ಆನ್ ಮಾಡಿಕೊಂಡು ಹೋದಾಗ ಹಳೇ ಗುಡ್ಡದಹಳ್ಳಿಯಲ್ಲಿ ಅಂಗಡಿ ಒಂದರ ಬಳಿಗೆ ಕರೆದೊಯ್ದು ಕಾಲ್ ಮಾಡಿದ್ದಾರೆ. ಆಗ ಅಂಗಡಿ ಮಾಲೀಕ ಮೊಬೈಲ್ ತನ್ನ ಬಳಿ ಇರುವುದಾಗಿ ಒಪ್ಪಿಕೊಂಡು ವಾಪಸ್ ಕೊಟ್ಟಿದ್ದಾನೆ.
ಕರೆ ಸ್ವೀಕರಿಸದ ಬಗ್ಗೆ ಪ್ರಶ್ನಿಸಿದಾಗ ಟ್ರೂ ಕಾಲ್‌ನಲ್ಲಿ ಪೊಲೀಸ್ ಎಂದು ತೋರಿಸಿದ ಕಾರಣ ಭಯಬಂದು ಕಟ್ ಮಾಡುತ್ತಿದ್ದೆನೆ. ಅನ್ಯ ನಂಬರ್‌ನಿಂದ ಮೊಬೈಲ್ ವಾರಸುದಾರ ಮಾಡುತ್ತಾನೆ ಎಂದು ಕಾಯುತ್ತಿದ್ದೆ ಎಂದು ಹೇಳಿಕೆ ನೀಡಿದ. ಕೊನೆಗೆ ಮೊಬೈಲ್‌ನನ್ನು ಇಂಜಿನಿಯರ್ ವಿದ್ಯಾರ್ಥಿಗೆ ಟ್ರಾಫಿಕ್ ಪೊಲೀಸರು ಒಪ್ಪಿಸಿ ವಾಪಸ್ ಕರ್ತವ್ಯಕ್ಕೆ ಹಾಜರಾಗಿದ್ದಾರೆ.