

ನವದೆಹಲಿ: ವಿವಿಧ ಕ್ಷೇತ್ರಗಳಲ್ಲಿ ಅದ್ವಿತೀಯ ಸಾಧನೆ ತೋರಿದ ದೇಶದ ಒಟ್ಟೂ 32 32 ಬಾಲಪ್ರತಿಭೆಗಳನ್ನು 2021 ನೇ ಸಾಲಿನ ಪ್ರಧಾನಮಂತ್ರಿ ರಾಷ್ಟ್ರೀಯ ಬಾಲಪುರಸ್ಕಾರ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಇವರ ಪೈಕಿ ಕರ್ನಾಟಕದ ಇಬ್ಬರು ಮಕ್ಕಳು ಸೇರಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ತಾಲೂಕಿನ ಬನ್ನೂರು ಗ್ರಾಮದ ರಾಕೇಶ್ ಕೃಷ್ಣ ಹಾಗೂ ಬೆಂಗಳೂರು ನಗರದ ವೀರ್ ಕಶ್ಯಪ್ ಬಾಲಪುರಸ್ಕಾರಕ್ಕೆ ಆಯ್ಕೆಯಾದವರು. ನವೋನ್ವೇಷಣೆ ವಿಭಾಗದಲ್ಲಿ ಇವರಿಗೆ ಪ್ರಶಸ್ತಿ ಲಭಿಸಿದೆ.
32 ಮಕ್ಕಳ ಪೈಕಿ ನಾವೀನ್ಯತೆ ವಿಭಾಗದಲ್ಲಿ 9, ಕಲೆ ಸಂಸ್ಕೃತಿ ವಿಭಾಗದಲ್ಲಿ 7, ಶೈಕ್ಷಣಿಕ ಹಾಗೂ ಕ್ರೀಡಾ ಸಾಧನೆ ವಿಭಾಗದಲ್ಲಿ 5, ಶೌರ್ಯ ವಿಭಾಗ 3 ಹಾಗೂ ಸಾಮಾಜಿಕ ಸೇವಾ ವಿಭಾಗದಲ್ಲಿ ಒಬ್ಬ ಮಕ್ಕಳಿಗೆ ಪ್ರಶಸ್ತಿ ಲಭಿಸಿದೆ.
ಪ್ರಶಸ್ತಿ ಪುರಸ್ಕೃತರೊಡನೆ ಪ್ರಧಾನಿ ನರೇಂದ್ರ ಮೋದಿ ಇಂದು ವಿಡಿಯೋ ಸಂವಾದ ನಡೆಸಲಿದ್ದಾರೆ.