ಸಚಿವಾಲಯದ ಸಿಬ್ಬಂದಿಗೆ ಗುಡ್‌ನ್ಯೂಸ್‌ ಕೊಟ್ಟ ಸರ್ಕಾರ: 13ರವರೆಗೆ ಕೆಲಸಕ್ಕೆ ಬರದಿದ್ದರೂ ಓಕೆ...

vidhanasoudha
Published on

ಬೆಂಗಳೂರು: ಕರೊನಾ ಹಿನ್ನೆಲೆಯಲ್ಲಿ ಲಾಕ್‌ಡೌನ್‌ 14ರವರೆಗೆ ವಿಸ್ತರಣೆ ಮಾಡಿರುವ ಬೆನ್ನಲ್ಲೇ ರಾಜ್ಯ ಸಚಿವಾಲಯದ ಎಲ್ಲಾ ಅಧಿಕಾರಿ, ನೌಕರರು, ಸಿಬ್ಬಂದಿಗೆ ಕಚೇರಿಯ ಹಾಜರಾತಿಯಿಂದ ಸರ್ಕಾರ ವಿನಾಯಿತಿ ನೀಡಿದೆ.

ಈ ಕುರಿತು ಸುತ್ತೋಕೆ ಹೊರಡಿಸಲಾಗಿದ್ದು, ಜೂನ್.13ರವರೆಗೆ ಕಚೇರಿ ಹಾಜರಾತಿಯಿಂದ ವಿನಾಯ್ತಿ ನೀಡಲಾಗಿದೆ ಎಂದು ತಿಳಿಸಲಾಗಿದೆ. ಈ ಮೊದಲು ಜೂನ್‌ 6ರವರೆಗೆ ಕಚೇರಿಯಿಂದ ವಿನಾಯಿತಿ ನೀಡಲಾಗಿತ್ತು. ಅದನ್ನೀಗ 13ರವರೆಗೆ ವಿಸ್ತರಿಸಲಾಘಿದೆ ಎಂದು ವಿಧಾನಸಭೆ ಸಚಿವಾಲಯದ ಕಾರ್ಯದರ್ಶಿ ಎಂ.ಕೆ.ವಿಶಾಲಾಕ್ಷಿ ಅವರು ಸುತ್ತೋಲೆಯಲ್ಲಿ ತಿಳಿಸಿದ್ದಾರೆ.

ಈ ಎಲ್ಲ ಅಧಿಕಾರಿ, ನೌಕರರುಗಳು ಕಡ್ಡಾಯವಾಗಿ ಕೇಂದ್ರ ಸ್ಥಾನದಲ್ಲಿ ಲಭ್ಯವಿರಬೇಕು. ಸಂಬಂಧ ಪಟ್ಟ ಶಾಖೆಯ ಮೇಲಾಧಿಕಾರಿಗಳು ಇಚ್ಛಿಸಿದಲ್ಲಿ ಅಗತ್ಯ ಮತ್ತು ತುರ್ತು ಸಂದರ್ಭವಿರುವ ಕೆಲಸ ಕಾರ್ಯಗಳನ್ನು ನಿರ್ವಹಿಸಲು ಆಯಾ ಅಧಿಕಾರಿ, ನೌಕರರುಗಳು ಯಾವುದೇ ಕಾರಣಗಳನ್ನು ನೀಡದೇ ಕಚೇರಿಗೆ ಕಡ್ಡಾಯವಾಗಿ ಹಾಜರಾಗತಕ್ಕದ್ದು ಎಂದು ಸುತ್ತೋಲೆಯಲ್ಲಿ ಸ್ಪಷ್ಟಪಡಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net