

ಬೆಂಗಳೂರು: ಹೊಸ ವರ್ಷ ಆಚರಣೆಗೆ ಕೆಲ ಗಂಟೆಗಳು ಬಾಕಿ ಇರುವಾಗಲೇ ರಾಜ್ಯಾದ್ಯಂತ ಮದ್ಯ ಕಿಕ್ ಜೋರಾಗಿದೆ.
ಮದ್ಯದಂಗಡಿಗಳಲ್ಲಿ ಮದ್ಯ ಖರೀದಿಗೆ ಜನರು ಮುಗಿಬಿದ್ದಿದ್ದಾರೆ. ಇವತ್ತು ಒಂದು ದಿನದಲ್ಲಿ 170 ಕೋಟಿ ರೂ. ಮೌಲ್ಯದ ಮದ್ಯ ವಹಿವಾಟು ನಡೆಯುವ ನಿರೀಕ್ಷೆ ಇದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಹಾಟ್ ಡ್ರಿಂಕ್ಸ್ ಹಾಗೂ ಬಿಯರ್ ಮಾರಾಟದಲ್ಲಿ ತುಸು ಹೆಚ್ಚಳವಾಗಿದೆ.
2020ರ ಡಿ.31ರಂದು ಮದ್ಯ ಮಾರಾಟದಿಂದ 150.94 ಕೋಟಿ ರೂ.ಮದ್ಯ ಸೇಲಾಗಿತ್ತು. 2019ರ ಡಿ.31ರಂದು 119.97 ಕೋಟಿ ರೂ. ಮೌಲ್ಯದ 3.62 ಲಕ್ಷ ಬಾಕ್ಸ್ ಇಂಡಿಯನ್ ಮೇಡ್ ಲಿಕ್ಕರ್ (ಐಎಂಎಲ್) ಹಾಗೂ 1.30 ಲಕ್ಷ ಬಾಕ್ಸ್ ಬಿಯರ್ ಸೇಲಾಗಿತ್ತು. 2018ರ ಡಿ.31ರಂದು 18.50 ಲಕ್ಷ ಬಾಕ್ಸ್ ಐಎಂಎಲ್ ಹಾಗೂ 1.48 ಲಕ್ಷ ಬಾಕ್ಸ್ ಬಿಯರ್ ಮಾರಾಟವಾಗಿತ್ತು.