ಟಿ.ನರಸೀಪುರದಲ್ಲಿ ಅನಿಲ ಸೋರಿಕೆಯಿಂದ ಊರತುಂಬ ವಿಷಾನಿಲ: ರಾತ್ರಿಯಿಡೀ ಕಾರ್ಯಾಚರಣೆ: ಕೊನೆಗೂ ಸುಖಾಂತ್ಯ

sorike
Published on

ಮೈಸೂರು: ಮೈಸೂರು ಜಿಲ್ಲೆಯ ಟಿ.ನರಸೀಪುರದಲ್ಲಿ ವಾಟರ್ ಫಿಲ್ಟರ್ ಹೌಸ್​ನಲ್ಲಿ ಅನಿಲ ಸೋರಿಕೆ ಉಂಟಾಗಿ ನಿನ್ನೆ ಪೂರ್ತಿ ಇಡೀ ಊರಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ವಿಷ ಅನಿಲ ಸೇವಿಸಿ ಐವರು ಅಗ್ನಿಶಾಮಕ ಸಿಬ್ಬಂದಿ ಅಸ್ವಸ್ಥರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಪಟ್ಟಣದ ವಾಟರ್​​ ಫಿಲ್ಟರ್ ಹೌಸ್ ಮುಂದಿನ ರಸ್ತೆ ಬಂದ್ ಮಾಡಿ ಅನಿಲ ಸೋರಿಕೆ ನಿಲ್ಲಿಸಲು ಅಗ್ನಿಶಾಮಕ ಸಿಬ್ಬಂದಿ ಹರಸಾಹಸಪಡುತ್ತಿದ್ದರು.

ಇದೀಗ ರಾತ್ರಿಯಿಡೀ ಕಾರ್ಯಾಚರಣೆ ಬಳಿಕ ಅಂತಿಮವಾಗಿ ಅನಿಲ ಸೋರಿಕೆಯನ್ನು ನಿಲ್ಲಿಸಲಾಗಿದೆ. ಇದರಿಂದಾಗಿ ಪಟ್ಟಣದ ಜನತೆ ನಿಟ್ಟುಸಿರು ಬಿಟ್ಟಿದ್ದಾರೆ.

ನಿನ್ನೆಯಿಡೀ ಊರಿನ ಜನರಿಗೆ ಎಚ್ಚರಿಕೆ ನೀಡಲಾಗಿತ್ತು. ಮನೆಯವರು ಹೊರಗೆ ಬರದಂತೆ ಸೂಚನೆ ನೀಡಲಾಗಿತ್ತು, ಇದೀಗ ಅಂತೂ ಅಗ್ನಿಶಾಮಕ ಸಿಬ್ಬಂದಿಯ ಪ್ರಯತ್ನದಿಂದಾಗಿ ಪ್ರಕರಣ ಸುಖಾಂತ್ಯಗೊಂಡಿದ್ದು, ಜನರು ನೆಮ್ಮದಿಯಿಂದ ಇರುವಂತಾಗಿದೆ. ವಿಷಾನಿಲ ಸೇವಿಸಿ ಅಸ್ವಸ್ಥರಾದವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net