

ಬಾಲಘಾಟ್ (ಮಧ್ಯಪ್ರದೇಶ): ಸ್ನಾನಕ್ಕೆ ಹೋದಾಗ ಟವಲ್ ಕೊಡಲು ಲೇಟ್ ಆಯಿತೆಂದು ಪತ್ನಿಯ ಬರ್ಬರ ಹತ್ಯೆ ಮಾಡಿದ ಪತಿ!ಭೂಪಾಲ್: ಸ್ನಾನಕ್ಕೆ ಹೋದ ಸಮಯದಲ್ಲಿ ತನಗೆ ಪತ್ನಿ ಹೇಳಿದ ಕೂಡಲೇ ಟವಲ್ ಕೊಡಲಿಲ್ಲ ಎನ್ನುವ ಕಾರಣಕ್ಕೆ ಆಕೆಯನ್ನು ಕಬ್ಬಿಣದ ರಾಡ್ನಿಂದ ಹೊಡೆದು ಪತಿ ಬರ್ಬರವಾಗಿ ಹತ್ಯೆ ಮಾಡಿದ್ದಾನೆ! ಈ ಭಯಾನಕ ಘಟನೆ ನಡೆದಿರುವುದು ಮಧ್ಯಪ್ರದೇಶದ ಬಾಲಘಾಟ್ ಜಿಲ್ಲೆಯ ಕಿರ್ನಾಪುರದಲ್ಲಿ.
ರಾಜಕುಮಾರ್ ಬಹೆಯ (50) ಈ ಭಯಾನಕ ಕೃತ್ಯಕ್ಕೆ ಬಲಿಯಾದವಳು 45 ವರ್ಷದ ಪುಷ್ಪಾಬಾಯಿ. ಅರಣ್ಯ ಇಲಾಖೆಯಲ್ಲಿ ದಿನಗೂಲಿ ನೌಕರನಾಗಿ ಕೆಲಸ ಮಾಡುತ್ತಿರುವ ರಾಜಕುಮಾರ್ ಸ್ನಾನಕ್ಕೆ ಹೋಗಿದ್ದಾನೆ. ಆಗ ಟವಲ್ ಕೊಡುವಂತೆ ಕೇಳಿದ್ದಾನೆ.ಪತ್ನಿ ಅಡುಗೆ ಮನೆಯಲ್ಲಿ ಕೆಲಸ ಮಾಡುತ್ತಿದ್ದರಿಂದ ಆ ಕೆಲಸ ಮುಗಿಸಿದ ಬಳಿಕ ಕೊಡುವೆ ಎಂದಿದ್ದಾಳೆ.
ಬಾತ್ರೂಮ್ನಲ್ಲಿ ಪತಿ ಕಾದಿದ್ದಾನೆ. ಸ್ನಾನ ಮುಗಿದರೂ ಪತ್ನಿ ಟವಲ್ ಕೊಟ್ಟಿಲ್ಲ. ಇದರಿಂದ ರೊಚ್ಚಿಗೆದ್ದ ಆತ ಬಾತ್ರೂಮ್ನಿಂದ ಬಂದವನೇ ಅಲ್ಲಿಯೇ ಇದ್ದ ಕಬ್ಬಿಣದ ಕಾಡ್ನಿಂದ ಅಡುಗೆ ಮಾಡುತ್ತಿದ್ದ ಪತ್ನಿಯ ತಲೆಗೆ ಹಾಗೂ ದೇಹದ ಮೇಲೆ ಹೊಡೆದಿದ್ದಾನೆ. ಅಲ್ಲಿಯೇ ಇದ್ದ ಮಗಳು ತಡೆಯಲು ಹೋದರೂ ಆಕೆಯನ್ನು ನೂಕಿ ಪತ್ನಿಗೆ ಹೊಡೆದದ್ದರಿಂದ ಆಕೆ ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ.
ಪತಿಯನ್ನು ಬಂಧಿಸಲಾಗಿದ್ದು, ಆತನ ವಿರುದ್ಧ ಕೊಲೆ ಕೇಸ್ ದಾಖಲು ಮಾಡಿಕೊಳ್ಳಲಾಗಿದೆ. ಮರಣೋತ್ತರ ಪರೀಕ್ಷೆಯ ನಂತರ ಮೃತದೇಹವನ್ನು ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಗಿದೆ.