ರಾಹುಲ್​ ಮೇಲೆ ಅತ್ಯಾಚಾರ ಮಾಡ್ತಿದ್ದಾರೆ ಎಂದ ನಲಪಾಡ್​: ರೌಡಿ ಗುರುವಿಗೆ ಬೀದಿ ಗೂಂಡಾಗಳೇ ಶಿಷ್ಯರು ಎಂದ ಬಿಜೆಪಿ

nalpad
Published on

ಬೆಂಗಳೂರು: ನ್ಯಾಷನಲ್​ ಹೆರಾಲ್ಡ್​ ಪತ್ರಿಕೆಯ ಸಾವಿರಾರು ಕೋಟಿ ರೂಪಾಯಿ ಹಣದ ಅಕ್ರಮ ವರ್ಗಾವಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್​ ಮುಖಂಡರ ಆಕ್ರೋಶ ಮುಗಿಲುಮುಟ್ಟಿದೆ. ಕಾಂಗ್ರೆಸ್​ ಅಧಿನಾಯಕಿ ಸೋನಿಯಾ ಗಾಂಧಿ ಹಾಗೂ ಸಂಸದ ರಾಹುಲ್​ ಗಾಂಧಿಯವರಿಗೆ ಜಾರಿ ನಿರ್ದೇಶನಾಲಯ ನೋಟಿಸ್​ ಜಾರಿಗೊಳಿಸಿರುವುದು ಈ ಆಕ್ರೋಶಕ್ಕೆ ಕಾರಣವಾಗಿದೆ.

ಇದಾಗಲೇ ದೇಶಾದ್ಯಂತ ಪ್ರತಿಭಟನೆ ಮಾಡುತ್ತಿದ್ದ ಕೆಲವು ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಸಂದರ್ಭದಲ್ಲಿ ಬಿಜೆಪಿ ವಿರುದ್ಧ ಕಿಡಿಕಾರಿದ ಯುವ ಕಾಂಗ್ರೆಸ್​ ಅಧ್ಯಕ್ಷ ಮೊಹಮ್ಮದ್​ ನಲಪಾಡ್​, ರಾಹುಲ್​ ಗಾಂಧಿಯ ಮೇಲೆ ಅತ್ಯಾಚಾರ ಮಾಡುತ್ತಿದ್ದಾರೆ. ಇದನ್ನು ನಾವು ಸಹಿಸುವುದಿಲ್ಲ ಎಂದಿದ್ದಾರೆ. ಹಾಗೆಯೇ ಬಿಜೆಪಿ ವಿರುದ್ಧ ಅವರು ಕಿಡಿಕಾರಿದ್ದಾರೆ.

ಇದಕ್ಕೆ ಪ್ರತಿಕ್ರಿಯೆ ನೀಡಿ ಬಿಜೆಪಿಯ ಟ್ವಿಟರ್​ನಲ್ಲಿ ಸರಣಿ ಟ್ವೀಟ್​ ಮಾಡಲಾಗಿದೆ. 'ಯಥಾರಾಜಾ ತಥಾ ಪ್ರಜಾ ಎಂಬುದು ಕಾಂಗ್ರೆಸ್ಸಿಗರಿಗೆ ಅನ್ವಯವಾಗುತ್ತದೆ. ಕೊತ್ವಾಲನ ಶಿಷ್ಯ ಕೆಪಿಸಿಸಿ ಅಧ್ಯಕ್ಷರಾದರೆ, ಗ್ಯಾಸ್ ಕಾಲೇಜಿನಲ್ಲಿ ಬ್ಲೇಡು, ಚಾಕು ಚೂರಿ ಹಿಡಿದು ಗೂಂಡಾಗಿರಿ ನಡೆಸುತ್ತಿದ್ದವರು ಮೇಲ್ಮನೆಯ ವಿಪಕ್ಷ ನಾಯಕ' ಎಂದು ಟ್ವಿಟರ್​ನಲ್ಲಿ ಟಾಂಗ್ ನೀಡಲಾಗಿದೆ.

ಇ‌ವರು ಜನರ ಪ್ರೀತಿಯಿಂದ ನಾಯಕರಾಗಿಲ್ಲ, ಜನರಿಗೆ ಭೀತಿ ಹುಟ್ಟಿಸಿ ನಾಯಕರಾಗಿದ್ದಾರೆ. ಕೊತ್ವಾಲ್ ಶಿಷ್ಯ ಡಿಕೆಶಿ ಆಯ್ಕೆಗಳು ಅವರಂತೆಯೇ ಇರುತ್ತದೆ. ಬೀದಿ ರೌಡಿಗಳು, ಬಿಟ್ ಕಾಯಿನ್ ಆಸಾಮಿಗಳಿಗೆ ಮುಂಚೂಣಿ ಘಟಕದ ನಾಯಕತ್ವ ನೀಡಲಾಗಿದೆ. ರೌಡಿ ಗುರುವಿಗೆ ಬೀದಿ ಗೂಂಡಾಗಳೇ ಶಿಷ್ಯರು, ಪಬ್‌ನಲ್ಲಿ ಸಿಕ್ಕ ಸಿಕ್ಕವರ ಮೇಲೆ ಬಾಟಲಿಯಿಂದ ಹಲ್ಲೆ ಮಾಡುತ್ತಿದ್ದ ರೌಡಿ‌‌ ನಲಪಾಡ್ ಯುವ ಕಾಂಗ್ರೆಸ್ ಅಧ್ಯಕ್ಷ. ಗೊರಿಲ್ಲಾ ಶ್ರೀನಿವಾಸ ರಾಷ್ಟ್ರೀಯ ಅಧ್ಯಕ್ಷ. ಎಲ್ಲರೂ ಗೂಂಡಾಗಿರಿಯ ತುಣುಕುಗಳೇ ಎಂದು ಸರಣಿ ಟ್ವೀಟ್​ನಲ್ಲಿ ತಿಳಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net