ರಂಗಾಸಕ್ತರಿಗೆ ಅವಕಾಶ: ಒಂದು ವರ್ಷದ ಡಿಪ್ಲೋಮಾ ತರಗತಿಗೆ ಮೈಸೂರಿನ ನಟನ ರಂಗಶಾಲೆಯಿಂದ ಆಹ್ವಾನ

rangashale
Published on

ಮೈಸೂರು: ಮೈಸೂರಿನ ನಟನ ರಂಗಶಾಲೆಯ ವತಿಯಿಂದ ಒಂದು ವರ್ಷದ ಅಭಿನಯ ಮತ್ತು ರಂಗತರಬೇತಿ ನೀಡುವ 'ರಂಗಭೂಮಿ ಡಿಪ್ಲೋಮಾ' ತರಗತಿ ಆರಂಭಿಸಲಾಗುತ್ತಿದೆ. ಪ್ರತಿದಿನ ಸಂಜೆ 5.30ರಿಂದ ರಾತ್ರಿ 9 ಗಂಟೆಯವರೆಗೆ ಈ ತರಬೇತಿ ನಡೆಯಲಿದೆ.

16 ರಿಂದ 30 ವರ್ಷ ವಯಸ್ಸಿನ ಅಭ್ಯರ್ಥಿಗಳು ಕೆಳಗೆ ತಿಳಿಸಿರುವ ನಟನ ರಂಗಶಾಲೆಯ ಕಚೇರಿಯಲ್ಲಿ ಅಥವಾ ಸಂಸ್ಥೆಯ ಅಧಿಕೃತ ವೆಬ್​ಸೈಟ್​ನಲ್ಲಿ ಅರ್ಜಿ ಪಡೆಯಬೇಕು. ಭರ್ತಿ ಮಾಡಿದ ಅರ್ಜಿಯನ್ನು ನಿಗದಿತ ಅರ್ಜಿ ಶುಲ್ಕದೊಂದಿಗೆ ನೇರವಾಗಿ ಅಥವಾ ಅಂಚೆಯ ಮುಖಾಂತರ ಕಚೇರಿಗೆ ತಲುಪಿಸಬೇಕು.

ಅಯ್ಕೆ ಪ್ರಕ್ರಿಯೆಯು ನೇರ ಸಂದರ್ಶನದ ಮೂಲಕ ನಡೆಯಲಿದ್ದು, ಸಂದರ್ಶನದಲ್ಲಿ ಭಾಗವಹಿಸುವುದು ಕಡ್ಡಾಯ.

ಪ್ರವೇಶ ಪ್ರಕ್ರಿಯೆ ಮತ್ತು ಸಂದರ್ಶನ (ಆಡಿಷನ್​) ನಡೆಯುವ ದಿನ: ನಟನ ರಂಗಶಾಲೆಯಲ್ಲಿ- ಆಗಸ್ಟ್​ 7ರ ಬೆಳಗ್ಗೆ 10ರಿಂದ ಮಧ್ಯಾಹ್ನ 1 ಗಂಟೆಯವರೆಗೆ.

ವೆಬ್​ಸೈಟ್​: http://www.natanamysuru.org

ವಿಳಾಸ: ನಟನ ರಂಗಶಾಲೆ, ರಾಮಕೃಷ್ಣ ನಗರ ಕೆ ಬ್ಲಾಕ್​, ಮೈಸೂರು- 570022

ಹೆಚ್ಚಿನ ಮಾಹಿತಿಗೆ: 72595 37777, 94804 68327, 98455 95505

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net