

ರಾಯಚೂರು: ಪೊಲೀಸ್ ಠಾಣೆಗೆ ನುಗ್ಗುತ್ತಿರುವ ಮಂಗವೊಂದು ಪೊಲೀಸರ ಜಾಗದಲ್ಲಿ ಕುಳಿತು ಗದರಿಸುತ್ತಿರುವ ಘಟನೆ ನಡೆದಿದೆ.
ಜಿಲ್ಲೆಯ ದೇವದುರ್ಗ ತಾಲೂಕಿನ ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ ಮಂಗನ ಕಾಟ ಹೆಚ್ಚಾಗಿದ್ದು, ಪೊಲೀಸರು ಬೇಸ್ತು ಬಿದ್ದಿದ್ದಾರೆ. ಪೊಲೀಸರು ಕುಳಿತುಕೊಳ್ಳೋ ಜಾಗವನ್ನೇ ಆಕ್ರಮಿಸಿಕೊಂಡು ವಾನರ ಕೀಟಲೆ ಮಾಡುತ್ತಿದ್ದು, ಮಂಗನಿಂದಾಗಿ ಪೊಲೀಸ್ ಸಿಬ್ಬಂದಿ ಭಯಭೀತರಾಗುತ್ತಿದ್ದಾರೆ.
ಕಳೆದ 5 ದಿನಗಳಿಂದ ಪೊಲೀಸರಿಗೆ ಈ ಮಂಗ ಕಾಟ ಕೊಡುತ್ತಿದೆ. ಅದರಲ್ಲಿಯೂ ರಾತ್ರಿಯ ಸಮಯದಲ್ಲಿ ಇದು ನುಗ್ಗುತ್ತಿರುವ ಕಾರಣ, ರಾತ್ರಿ ಪಾಳಿಯಲ್ಲಿ ಕೆಲಸ ಮಾಡಲು ಪೊಲೀಸರು ಭಯಪಡುವಂತಾಗಿದೆ. ಇದನ್ನು ಹಿಡಿಯುವಂತೆ ಪೊಲೀಸರು ಮಾಡಿಕೊಂಡ ಮನವಿಗೆ ಅರಣ್ಯ ಇಲಾಖೆ ಸಿಬ್ಬಂದಿ ಬಂದರೂ ಮಂಗ ಯಾರ ಕೈಗೂ ಸಿಗದೇ ಓಡಿ ಹೋಗುತ್ತಿದೆ ಎನ್ನಲಾಗಿದೆ.
ಇಲ್ಲಿದೆ ನೋಡಿ ವಿಡಿಯೋ: