ಬೆಂಗಳೂರಿಗೆ ಪ್ರಧಾನಿ: ಯಾವೆಲ್ಲಾ ರಸ್ತೆಗಳಲ್ಲಿ ಸಂಚಾರ ನಿಷೇಧ? ಪಾರ್ಕಿಂಗ್​ ವ್ಯವಸ್ಥೆ ಹೇಗೆ? ಇಲ್ಲಿದೆ ಡಿಟೇಲ್ಸ್​

Modi
Published on

ಬೆಂಗಳೂರು: ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿಯವರು ಬೆಂಗಳೂರು ಮತ್ತು ಮೈಸೂರಿಗೆ ಇಂದು (ಸೋಮವಾರ) ಬರಲಿರುವ ಹಿನ್ನೆಲೆಯಲ್ಲಿ ಬೆಂಗಳೂರಿನ ಕೆಲವು ಮಾರ್ಗಗಳಲ್ಲಿ ಇಂದು ಮಧ್ಯಾಹ್ನ 12:30 ರಿಂದ 3:00 ಗಂಟೆಯವರೆಗೆ ಸಂಚಾರ ನಿಷೇಧ ಮಾಡಲಾಗಿದ್ದು, ಪಾರ್ಕಿಂಗ್​ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲಾಗಿದೆ. ಅವುಗಳ ಮಾಹಿತಿ ಇಂತಿದೆ:

ಸಂಚಾರ ನಿಷೇಧ ಮಾಡಿರುವ ರಸ್ತೆಗಳು

* ತುಮಕೂರು ರಸ್ತೆಯ ನಗರದ ಒಳಭಾಗಕ್ಕೆ ಬರುವ ಎಲ್ಲಾ ರೀತಿಯ ಭಾರಿ ವಾಹನಗಳಿಗೆ ನಿಷೇಧ

* ಮೈಸೂರು ರಸ್ತೆ ಮತ್ತು ನೈಸ್ ಬ್ರಿಡ್ಜ್ ಕಡೆಯಿಂದ ಕೆಂಗೇರಿ, ಉತ್ತರಹಳ್ಳಿ ರಸ್ತೆ ಕಡೆಯಿಂದ ಕೆಂಗೇರಿ, ಮೈಸೂರು ಕಡೆಗೆ ನಿಷೇಧ

* ನಾಗರಭಾವಿ ಸರ್ಕಲ್‍ನಿಂದ ಜ್ಞಾನಭಾರತಿ ಆಡ್ಮಿನ್ ಬ್ಲಾಕ್ ಜಂಕ್ಷನ್‍ವರೆಗೆ

* ಮೈಸೂರು ರಸ್ತೆ ಜ್ಞಾನಭಾರತಿ ಜಂಕ್ಷನ್‍ನಿಂದ ಯುನಿವರ್ಸಿಟಿ ಕಡೆಗೆ ಹಳೇ ರಿಂಗ್ ರಸ್ತೆ ಉಲ್ಲಾಳ ಜಂಕ್ಷನ್​ನಿಂದ ಯುನಿವರ್ಸಿಟಿ ಕಡೆಗೆ

* ಕೆಂಗುಂಟೆ ಜಂಕ್ಷನ್ – ನಮ್ಮೂರ ತಿಂಡಿ – ನಾಗರಭಾವಿ ರಿಂಗ್ ರಸ್ತೆ ಕಡೆಗೆ

ಪರ್ಯಾಯ ರಸ್ತೆಗಳು

* ನೈಸ್ ರಸ್ತೆ ಮುಖಾಂತರ ನೈಸ್ ಕಚೇರಿ– ಸೋಂಪುರ ಟೋಲ್ ಉತ್ತರಹಳ್ಳಿ ಮುಖ್ಯ ರಸ್ತೆ – ಸೋಂಪುರ ಟೋಲ್ ಮುಖಾಂತರ ಕೆಂಗೇರಿ ಮತ್ತು ಮೈಸೂರು ಕಡೆಗೆ ಅವಕಾಶ

* ನಾಗರಭಾವಿ ಸರ್ಕಲ್-ನಮ್ಮೂರ ತಿಂಡಿ ಹೋಟೆಲ್-ಅಂಬೇಡ್ಕರ್ ಕಾಲೇಜ್ ಜಂಕ್ಷನ್- ಜ್ಞಾನಭಾರತಿ ಗೇಟ್ ಕಡೆಗೆ ಅವಕಾಶ

* ಆರ್.ಆರ್.ಆರ್ಚ್, ನಾಯಂಡಹಳ್ಳಿ ಜಂಕ್ಷನ್ – ನಾಗರಭಾವಿ ಕಡೆಗೆ ಅವಕಾಶ

* ತುಮಕೂರು ಕಡೆಯಿಂದ ಯಲಹಂಕ, ಕೋಲಾರ, ಹೈದರಬಾದ್ ಕಡೆಗೆ ಸಂಚರಿಸುವ ವಾಹನಗಳು ದಾಬಸ್ ಪೇಟೆಯಲ್ಲಿ ಎಡತಿರುವು ಪಡೆದು ದೊಡ್ಡಬಳ್ಳಾಪುರ ಮುಖ್ಯರಸ್ತೆ ಮುಖಾಂತರ ಅವಕಾಶ

ಪಾರ್ಕಿಂಗ್ ನಿಷೇಧಿಸಿರುವ ಸ್ಥಳಗಳು

* ಕೊಮ್ಮಘಟ್ಟ ಮುಖ್ಯ ರಸ್ತೆ (ಶಂಕರ್​ನಾಗ್ ಸರ್ಕಲ್ ನಿಂದ ರಾಬಿನ್ ಥಿಯೇಟರ್​ವರೆಗೆ

* ನಾಗರಭಾವಿ ಸರ್ಕಲ್​ನಿಂದ ಜ್ಞಾನಭಾರತಿ ಆಡೀನ್ ಬ್ಲಾಕ್ ಜಂಕ್ಷನ್​ವರೆಗೆ

* ಯುನಿವರ್ಸಿಟಿ ಒಳಭಾಗದ ಮುಖ್ಯರಸ್ತೆ, ಲೇಡೀಸ್ ಹಾಸ್ಟಲ್ ರಸ್ತೆ ಮತ್ತು ಗಾಂಧಿ ಮಾರ್ಗ್ ರಸ್ತೆ ಬಿ. ಮೈಸೂರು ರಸ್ತೆ ಜ್ಞಾನಭಾರತಿ ಜಂಕ್ಷನ್ ನಿಂದ ಜೈರಾಮ್ ದಾಸ್ ಜಂಕ್ಷನ್ ವರೆಗೆ

ಪಾರ್ಕಿಂಗ್ ಪರ್ಯಾಯ ವ್ಯವಸ್ಥೆ

* ಕಾಳಿಕಾಂಬ ರಸ್ತೆ ಮತ್ತು ಪಾರ್ಕ್ ರಸ್ತೆ

* ಐಸಕ್ ಮುಖ್ಯರಸ್ತೆ ನಾಗರಭಾವಿ ಸರ್ವಿಸ್ ರಸ್ತೆಯಲ್ಲಿ ಮಾನಸ ನಗರ ಬಸ್ ಸ್ಟಾಪ್ ನಿಂದ ಐಸಾಕ್ ರಸ್ತೆವರೆಗೆ

* 6ನೇ ಮುಖ್ಯರಸ್ತೆ (ಕಾಳಿಕಾಂಬ ರಸ್ತೆ ಮತ್ತು ಪಾರ್ಕ್ ರಸ್ತೆ)

* ಐಸಕ್ ಮುಖ್ಯರಸ್ತೆ ನಾಗರಭಾವಿ ಸರ್ವಿಸ್ ರಸ್ತೆಯಲ್ಲಿ ಮಾನಸ ನಗರ ಬಸ್ ಸ್ಟಾಪ್ ನಿಂದ ಐಸಾಕ್​ವರೆಗೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net