ಮೀಸಲು ವರ್ಗೀಕರಣ ಬೇಡಿಕೆ, ಪರಿಹಾರೋಪಾಯ ಕೇಳಿದ ಸಿಎಂ ಬೊಮ್ಮಾಯಿ‌

CM
Published on

ಬೆಂಗಳೂರು: ದಶಕಗಳಷ್ಟು ಹಳೆಯದಾದ ಪರಿಶಿಷ್ಟ ಜಾತಿಯಲ್ಲಿ ಆಂತರಿಕ ಮೀಸಲು ಕಲ್ಪಿಸಬೇಕೆಂಬ ಬೇಡಿಕೆ ಸರ್ವಸಮ್ಮತ ಪರಿಹಾರೋಪಾಯ ನೀಡಬೇಕೆಂದು ಮಾದಿಗ ಸಮುದಾಯಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಕೇಳಿಕೊಂಡರು.

ರಾಷ್ಟ್ರೀಯ ಮಾದಿಗ ಸಮುದಾಯದ ಬುದ್ಧಿ ಜೀವಿಗಳು ಹಾಗೂ ಚಿಂತಕರ ವೇದಿಕೆ ಕರ್ನಾಟಕ ಶಾಖೆ ಶುಕ್ರವಾರ ಆಯೋಜಿಸಿದ್ದ ವಿಶ್ವ ನಾಲ್ಕನೇ ಮಾದಿಗ ಸಮಾವೇಶಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಯಾವುದೇ ಸಮುದಾಯಕ್ಕೆ ಅನ್ಯಾಯವಾಗದ ರೀತಿಯಲ್ಲಿ ಮೀಸಲು ವರ್ಗೀಕರಣಕ್ಕೆ ಶಿಫಾರಸು ಮಾಡಬೇಕು ಎನ್ನುವುದು ತಮ್ಮ ಇಚ್ಛೆಯಾಗಿದ್ದು, ಸಮುದಾಯದ ಮಠಾಧೀಶರು, ಬುದ್ಧಿಜೀವಿಗಳು, ಚಿಂತಕರು, ರಾಜಕೀಯ ನಾಯಕರು ಒಂದೆಡೆ ಸೇರಿ‌ ಚರ್ಚಿಸಿ ಕಾರ್ಯಸಾಧು ಪರಿಹಾರ ಮಾರ್ಗ ಸೂಚಿಸಲು ಕೋರಿದರು.

ಸಮುದಾಯದ ಸರ್ವತೋಮುಖ ಏಳಿಗೆಗೆ ಸರ್ಕಾರ ಬದ್ಧವಾಗಿದ್ದು, ಹೊಸ ಯೋಜನೆಗಳ ಬಗ್ಗೆ ಸ್ಪಷ್ಟ ರೂಪುರೇಷೆಯೊಂದಿಗೆ ಪ್ರಸ್ತಾವನೆ ಸಲ್ಲಿಸಿದರೆ ಪರಿಗಣಿಸುವುದಾಗಿ ಸಿಎಂ ಬೊಮ್ಮಾಯಿ‌ ಭರವಸೆ ನೀಡಿದರು.

ಸಾನ್ನಿಧ್ಯ ವಹಿಸಿದ್ದ ಮಾದಾರ ಚನ್ನಯ್ಯ ಗುರುಪೀಠದ ಪೀಠಾಧಿಪತಿ ‌ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಮಾತನಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net