

ಸುಂಟಿಕೊಪ್ಪ: ಸುಂಟಿಕೊಪ್ಪ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಕುಂಜಿಲನ ಎಸ್.ಮಂಜುನಾಥ್, ಉಪಾಧ್ಯಕ್ಷರಾಗಿ ಕೆ.ವಿ.ರಮ್ಯಾ ಮೋಹನ್ ಅವಿರೋಧವಾಗಿ ಆಯ್ಕೆಯಾದರು.
ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಗುರುವಾರ ನಿಗದಿಯಾಗಿದ್ದ ಚುನಾವಣೆ ಪ್ರಕ್ರಿಯೆಯಲ್ಲಿ ಕೆ.ಎಸ್.ಮಂಜುನಾಥ್ ಅಧ್ಯಕ್ಷ ಸ್ಥಾನಕ್ಕೆ, ಕೆ.ವಿ.ರಮ್ಯಾ ಮೋಹನ್ ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರು.
ಮಂಜುನಾಥ ಅವರಿಗೆ ಸೂಚಕರಾಗಿ ನಿರ್ದೇಶಕರಲ್ಲಿ ಒಬ್ಬರಾದ ಎಂ.ಎನ್.ಕೊಮಾರಪ್ಪ ಮತ್ತು ಅನುಮೋದಕರಾಗಿ ಮತ್ತೊಬ್ಬ ನಿರ್ದೇಶಕ ಎನ್.ಸಿ.ಪೊನ್ನಪ್ಪ (ಕ್ಲೈವಾ) ಸೂಚಿಸಿದರು. ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ಕೆ.ವಿ.ರಮ್ಯಾ ಮೋಹನ್ ಅವರಿಗೆ ಸೂಚಕರಾಗಿ ನಿರ್ದೇಶಕರಾದ ಜರ್ಮಿ ಡಿಸೋಜ ಮತ್ತು ಅನುಮೊದಕರಿಗೆ ನಿರ್ದೇಶಕ ಕೆ.ಆರ್.ಮಂಜುನಾಥ್ ಸೂಚಿಸಿದರು.
ನಿಗದಿತ ಸಮಯದವರೆಗೆ 2 ಸ್ಥಾನಗಳಿಗೆ ಬೇರೆ ಯಾವುದೇ ನಾಮಪತ್ರ ಸಲ್ಲಿಕೆಯಾಗದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿ ಸಹಕಾರ ಸಂಘಗಳ ಅಭಿವೃದ್ಧಿ ಅಧಿಕಾರಿ ಬಿ.ಕೆ.ವಿಜೆಯೇಂದ್ರ ಕೆ.ಎಸ್.ಮಂಜುನಾಥ್ ಮತ್ತು ಕೆ.ವಿ.ರಮ್ಯಾ ಮೋಹನ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಘೋಷಿಸಿದರು.
ನಿರ್ದೇಶಕರಾದ ಎಂ.ಎನ್.ಕೊಮಾರಪ್ಪ, ದಾಸಂಡ ರಮೇಶ್ ಚಂಗಪ್ಪ, ಕೆ.ಪಿ.ಜಗನ್ನಾಥ್, ಡಿ.ಕೆ.ಗಂಗಾಧರ, ಪಟ್ಟೆಮನೆ.ಪಿ.ಉದಯಕುಮಾರ್, ಎನ್.ಸಿ.ಪೊನ್ನಪ್ಪ(ಕ್ಲೈವಾ), ಜರ್ಮಿ ಡಿಸೋಜ, ಕೆ.ಆರ್.ಮಂಜುನಾಥ್, ಕೆ.ಆರ್.ದಯಾನಂದ, ಪಿ.ಪಿ.ಲೀಲಾವತಿ ಇದ್ದರು.
ನೂತನ ಅಧ್ಯಕ್ಷ ಕೆ.ಎಸ್.ಮುಂಜುನಾಥ್ ಮಾತನಾಡಿ, ನಾನು 4ನೇ ಅವಧಿಗೆ ನಿರ್ದೇಶಕನಾಗಿ ಆಯ್ಕೆಯಾಗಿದ್ದು ಈ ಬಾರಿ ಸರ್ವರ ಸಹಕಾರದಿಂದ ಅಧ್ಯಕ್ಷನಾಗಿದ್ದೇನೆ. ಹಿರಿಯರು, ಮಾಜಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಆಡಳಿತ ಮಂಡಳಿಯಲ್ಲಿದ್ದು, ಸಂಘವನ್ನು ಇನ್ನಷ್ಟು ಅಭಿವೃದ್ಧಿ ಪಥದಲ್ಲಿ ನಡೆಸಿಕೊಂಡು ಹೋಗಲು ಕಟಿಬದ್ಧನಾಗಿದ್ದೇನೆ ಎಂದು ಹೇಳಿದರು.
ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಮಿತ್ರಾ ಸೇರಿದಂತೆ ಬ್ಯಾಂಕಿನ ಸಿಬ್ಬಂದಿ ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಅಭಿನಂದಿಸಿದರು.