ಕರಾವಳಿಯಲ್ಲಿ ಮತ್ತೆ ಲವ್‌ ಜಿಹಾದ್‌ ಕಿಚ್ಚು: ಲೈಂಗಿಕ ಸಂಪರ್ಕ ಬೆಳೆಸಿ ಯುವತಿಯ ಸಾವಿಗೆ ಕಾರಣನಾದವ ಕೊನೆಗೂ ಸಿಕ್ಕಿಬಿದ್ದ!

lovejihad
Published on

ಕುಂದಾಪುರ: ಪ್ರೀತಿಸುವ ನಾಟಕವಾಡಿ ಆಕೆಯನ್ನು ಲೈಂಗಿಕವಾಗಿ ಬಳಸಿಕೊಂಡು ಪ್ರೇಮಿ ಕೈಕೊಟ್ಟ ಹಿನ್ನೆಲೆಯಲ್ಲಿ ಉಡುಪಿಯ ಯುವತಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕುಂದಾಪುರದಲ್ಲಿ ಇತ್ತೀಚೆಗೆ ನಡೆದಿತ್ತು. ಈ ಘಟನೆಯಿಂದ ಮತ್ತೆ ಲವ್​ ಜಿಹಾದ್​ ವಿವಾದ ಕರಾವಳಿ ಭಾಗದಲ್ಲಿ ಮತ್ತೆ ಭುಗಿಲೆದ್ದಿತ್ತು.

ಉಪ್ಪಿನಕುದ್ರು ಗ್ರಾಮದ 25 ವರ್ಷದ ಹಿಂದೂ ಯುವತಿ ಕೋಟೇಶ್ವರದ ವಿವಾಹಿತ ಅಜೀಜ್ (32) ಎಂಬಾತನ ಬಲೆಗೆ ಬಿದ್ದಿದ್ದಳು. ಮದುವೆಯಾಗುವುದಾಗಿ ನಂಬಿಸಿ ಅಜೀಜ್‌ ದೈಹಿಕ ಸಂಪರ್ಕ ಬೆಳೆಸಿದ್ದ. ನಂತರ ಇಸ್ಲಾಂ ಧರ್ಮಕ್ಕೆ ಮತಾಂತವಾಗುವಂತೆ ಒತ್ತಾಯಿಸಿ ಕೊನೆಗೆ ಕೈಕೊಟ್ಟಿದ್ದ. ಇಬ್ಬರ ನಡುವೆ ನಡೆದಿರುವ ದೈಹಿಕ ಸಂಪರ್ಕದ ವಿಡಿಯೋ ಇಟ್ಟುಕೊಂಡು ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದ. ಇದರಿಂದ ಮನನೊಂದಿದ್ದ ಯುವತಿ ಇಲಿ ಪಾಷಾಣ ಸೇವಿಸಿದ್ದಳು. ಮೂರು ದಿನಗಳವರೆಗೆ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸಿ ಕೊನೆಗೆ ಪ್ರಾಣ ಬಿಟ್ಟಿದ್ದಳು.

ಘಟನೆ ನಂತರ ಅಜೀಜ್​ ತಲೆಮರೆಸಿಕೊಂಡಿದ್ದ. ಇದೀಗ ಕೊನೆಗೂ ಅಜೀಜ್‌ ಸಿಕ್ಕಿಬಿದ್ದಿದ್ದಾನೆ. ಆತನನ್ನು ಕುಂದಾಪುರ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಲವ್ ಜಿಹಾದ್ ಪ್ರಕರಣ ಖಂಡಿಸಿ ಪ್ರತಿಭಟನೆಗೆ ಬಜರಂಗದಳದವರು ಕರೆ ನೀಡಿದ್ದಾರೆ. ನಾಳೆ (ಮಂಗಳವಾರ) ಕುಂದಾಪುರದಲ್ಲಿ ಪ್ರತಿಭಟನೆ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net