ಮತ್ತೊಮ್ಮೆ ವಿವಾದದಲ್ಲಿ ಕನ್ನಡ ವಿವಿ! ಕುಲಪತಿ ಅವಧಿ ವಿಸ್ತರಣೆ- ಚರ್ಚೆಗೆ ಗ್ರಾಸವಾದ ಸರ್ಕಾರದ ನಡೆ

kannadavv
Published on

ಹೊಸಪೇಟೆ: ಸಾಕಷ್ಟು ಆರೋಪಗಳ ಮೂಲಕ ನಾಡಿನಾದ್ಯಾಂತ ಸುದ್ದಿಯಲ್ಲಿದ್ದ ಕನ್ನಡ ವಿವಿ ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದೆ. ಹಾಲಿ ಕುಲಪತಿ ಪ್ರೊ.ಸ.ಚಿ.ರಮೇಶ ಅವರ ಅವಧಿಯನ್ನು ಒಂದು ವರ್ಷದ ಅವಧಿಗೆ ಮತ್ತೆ ವಿಸ್ತರಣೆ ಮಾಡಲಾಗಿದೆ.

ಫೆ.22 ರಿಂದ ರಮೇಶ ಅವರ ಅವಧಿ ಒಂದು ವರ್ಷದವರೆಗೆ ವಿಸ್ತರಣೆಗೊಳಿಸಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಆದೇಶ ಹೊರಡಿಸಿದ್ದಾರೆ. ಫೆ.21 ಕ್ಕೆ ಸ.ಚಿ.ರಮೇಶ ಅವಧಿ ಮುಗಿದಿತ್ತು. ಅಲ್ಲದೆ, ರಮೇಶ ಅವರ ಮೇಲೆ ಸಾಕಷ್ಟು ಭ್ರಷ್ಟಾಚಾರದ ಆರೋಪಗಳು ಕೇಳಿ ಬಂದಿದ್ದವು.

ಅಕ್ರಮ ನೇಮಕಾತಿ, ಅನುದಾನದ ಹಣ ದುರ್ಬಳಕೆ ಸೇರಿ ನಾನಾ ಭ್ರಷ್ಟಾಚಾರಗಳಲ್ಲಿ ಹಾಲಿ ಕುಲಪತಿ ಭಾಗಿಯಾಗಿದ್ದಾರೆಂದು ಬೋಧಕರ ವರ್ಗ ಗಂಭೀರ ಆರೋಪ ಮಾಡಿ ಪತ್ರ ಚಳವಳಿ ನಡೆಸಿತ್ತು. ಇದರ ಬೆನ್ನಲ್ಲೆ ಕುಲಪತಿಗಳು ತಮ್ಮ ಅವಧಿ ವಿಸ್ತರಿಸಿಕೊಳ್ಳಲು ಸರ್ಕಾರದ ಮಟ್ಡದಲ್ಲಿ ಒತ್ತಡ ಹೇರಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು.

ಇದರ ನಡುವೆಯೂ ಅವಧಿ ವಿಸ್ತರಣೆ ಗೊಂಡಿರುವುದು ವಿವಿ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ‌.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net