VIDEO: ಕುಸಿಯುತ್ತಿವೆ ಕಟ್ಟಡಗಳು- ಜೀವಭಯದಲ್ಲಿ ಬೆಂಗಳೂರಿಗರು: ಬೀಳುವ ಹಂತದಲ್ಲಿ ಮೂರಂತಸ್ತಿನ ಮನೆ

buidling
Published on

ಬೆಂಗಳೂರು: ಬೆಂಗಳೂರಿನಲ್ಲಿ ಇದಾಗಲೇ ಬಹುಮಹಡಿ ಎರಡು ಕಟ್ಟಡಗಳು ಬಿದ್ದು, ಜನರು ಕಂಗಾಲಾಗಿರುವ ನಡುವೆಯೇ ಇದೀಗ ಮೂರಂತಸ್ತಿನ ಮನೆಯೊಂದು ಬೀಳುವ ಹಂತದಲ್ಲಿದ್ದು, ಬಹುಮಹಡಿ ಕಟ್ಟಡಗಳಲ್ಲಿ ವಾಸಿಸುತ್ತಿರುವ ಜನರ ಸ್ಥಿತಿ ಅಲ್ಲೋಲ ಕಲ್ಲೋಲವಾಗಿದೆ.

ಕಮಲಾನಗರದಲ್ಲಿರುವ ಮೂರು ಅಂತಸ್ತಿನ ಮನೆ ಕುಸಿಯುವ ಸ್ಥಿತಿಯಲ್ಲಿದೆ. ಮಂಗಳವಾರ ಸಂಜೆ ಸುರಿದ ಮಳೆಯಿಂದ ಮನೆಯ ಬುನಾದಿ ಕುಸಿದಿದ್ದು, ಒಟ್ಟು 7 ಮನೆಯಲ್ಲಿ ವಾಸವಿದ್ದವರನ್ನು ಸ್ಥಳಾಂತರ ಮಾಡಲಾಗಿದೆ.

ಕಮಲಾನಗರದ ಎನ್ ಜಿಒ ಕಾಲನಿಯ ತಗ್ಗು ಪ್ರದೇಶದ ಪಕ್ಕದಲ್ಲಿ 15 ವರ್ಷದ ರಾಜೇಶ್ವರಿ ಎಂಬುವವರು ಮನೆ ನಿರ್ಮಿಸಿದ್ದಾರೆ. ಆದರೆ, ತಗ್ಗು ಪ್ರದೇಶದ ಪಕ್ಕದಲ್ಲಿದ್ದರೂ ತಡೆಗೋಡೆಯನ್ನು ಭದ್ರವಾಗಿ ನಿರ್ಮಿಸಿರಲಿಲ್ಲ. ಒಟ್ಟು ಮೂರು ಮಹಡಿಯ ಕಟ್ಟಡದಲ್ಲಿನ 7 ಮನೆಗಳನ್ನು ಬಾಡಿಗೆ ಮತ್ತು ಭೋಗ್ಯಕ್ಕೆ ಕೊಟ್ಟು ಮಾಲೀಕರು ಬೇರೆಡೆ ವಾಸವಾಗಿದ್ದಾರೆ. ಧಾರಾಕಾರವಾಗಿ ಮಳೆ ಸುರಿದು ರಾತ್ರಿ 10 ಗಂಟೆಗೆ ಬುನಾದಿ ಕುಸಿದು ಮನೆ ಬೀಳುವ ಸ್ಥಿತಿ ತಲುಪಿದ್ದರೂ, ಮನೆ ಮಾಲೀಕರು ಬಂದಿಲ್ಲ. ಅಗ್ನಿಶಾಮಕ ದಳ ಮತ್ತು ಪೊಲೀಸ್ ಸಿಬ್ಬಂದಿ ಮನೆಯ ನಿವಾಸಿಗಳನ್ನು ಹೊರಗೆ ಕರೆತಂದಿದ್ದಾರೆ. ಮಾಜಿ ಕಾರ್ಪೊರೇಟರ್ ಎಂ. ಶಿವರಾಜು ಮನೆ ನಿವಾಸಿಗಳನ್ನು ಬೇರೆಡೆ ಉಳಿದುಕೊಳ್ಳಲು ವ್ಯವಸ್ಥೆ ಮಾಡಿದ್ದಾರೆ.

ಕಮಲನಗರದ ಎನ್ ಜಿ ಓ ಕಾಲೋನಿ ಬಳಿ ಈ ಕಟ್ಟಡವಿದ್ದು, ಸ್ಥಳಕ್ಕೆ ಬಿಬಿಎಂಪಿ. ಅಗ್ನಿಶಾಮಕ ದಳದವರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಇದರ ವಿಡಿಯೋ ಇಲ್ಲಿದೆ ನೋಡಿ:

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net