

ಬೆಂಗಳೂರು: ಶಶಿಕಲಾ ಜೊಲ್ಲೆ ಅವರಿಗೆ ನೀಡಿದ್ದ ಝಿರೋ ಟ್ರಾಫಿಕ್ ವಿಚಾರ ಪರಿಷತ್ ನಲ್ಲಿ ತೀವ್ರ ಗದ್ದಲ ಸೃಷ್ಟಿಯಾಯಿತು.
ಶಶಿಕಲಾ ಜೊಲ್ಲೆ ಟ್ರಾಫಿಕ್ ಫ್ರೀ ವಿಚಾರ ಪ್ರಸ್ತಾಪಿಸಿದ ಕಾಂಗ್ರೆಸ್ ಸದಸ್ಯ ಎಂ ನಾರಾಯಣಸ್ವಾಮಿ, ಯಾವ ಕಾರಣಕ್ಕಾಗಿ ಝೀರೊ ಟ್ರಾಫಿಕ್ ನೀಡಲಾಗಿತ್ತು ಎನ್ನುವುದನ್ನು ಬಹಿರಂಗ ಮಾಡಲಿ ಎಂದರು.
ನಮ್ಮ ಪಕ್ಷಕ್ಕೆ ದ್ರೋಹ ಬಗೆದು ಬಿಜೆಪಿಗೆ ಹೋದವರಿಗೂ ಹಿಂದೆ ಝೀರೋ ಟ್ರಾಫಿಕ್ ಒದಗಿಸಲಾಗಿತ್ತು ಎಂದು ನಾರಾಯಣಸ್ವಾಮಿ ಹೇಳಿದ್ದಕ್ಕೆ ಕೆಂಡಾಮಂಡಲವಾದ ಆಡಳಿತ ಪಕ್ಷದ ಸದಸ್ಯರು ಸಚಿವರು,
ಇದೆಂತಾ ಮಾತು, ಈಗ ಅದನ್ನೆಲ್ಲ ಮಾತಾಡೋ ಅಗತ್ಯ ಇದೆಯಾ ಎಂದು ಗದ್ದಲ ಮಾಡಿದರು. ಸಚಿವ ಶಿವರಾಂ ಹೆಬ್ಬಾರ್, ಸಚಿವ ಮುನಿರತ್ನ, ಮಾಧುಸ್ವಾಮಿ, ಕೋಟ ಶ್ರೀನಿವಾಸ ಪೂಜಾರಿ ಇದಕ್ಕೆ ಪ್ರತಿರೋಧ ಒಡ್ಡಿದರು.
ವಾಟ್ ದಿಸ್ ಈಸ್ ಗೋಯಿಃಗ್ ಆನ್ ಎಂದ ಮಾಧುಸ್ವಾಮಿ ಇದನ್ನ ಹೇಳೋದಕ್ಕೆ ಇವರು ಯಾರು ಎಂದು ಕೇಳಿದರು. ಮಾತು ಮುಂದುವರಿಸಲು ಅವಕಾಶ ಕೊಡದ ಸಭಾಪತಿ, ಇದು ಕೋರ್ಟ್ ನಲ್ಲಿರುವ ಕಾರಣ ಈ ಚರ್ಚೆ ಬೇಡ ಎಂದರು.