ಧಾರವಾಡ ಕೆಸಿಸಿ ಬ್ಯಾಂಕ್​ನಲ್ಲಿದೆ ಉದ್ಯೋಗ: 87 ಹುದ್ದೆಗಳಿಗೆ ಅರ್ಜಿ ಆಹ್ವಾನ

Dharwad
Published on

ಧಾರವಾಡದ ಕರ್ನಾಟಕ ಸೆಂಟ್ರಲ್​ ಕೋ-ಆಪರೇಟಿವ್​ ಬ್ಯಾಂಕ್​ನಲ್ಲಿ ಖಾಲಿ ಇರುವ ಕ್ಲರ್ಕ್​ (ಸಹಾಯಕ) ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಆನ್​ಲೈನ್​ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಹುದ್ದೆಗಳ ವಿವರ

ಒಟ್ಟು 87 ಹುದ್ದೆಗಳಿದ್ದು, ಸಾಮಾನ್ಯ-44, ಪರಿಶಿಷ್ಟ ಜಾತಿ-13, ಪರಿಶಿಷ್ಟ ಪಂಗಡ-3, ಪ್ರವರ್ಗ-1-3, ಪ್ರವರ್ಗ-2ಎ-3, ಪ್ರವರ್ಗ-2ಬಿ-3, ಪ್ರವರ್ಗ-3ಎ-4 ಮತ್ತು ಪ್ರವರ್ಗ-3ಬಿ-4 ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತಿದೆ.

ವಿದ್ಯಾರ್ಹತೆ

ಮಾನ್ಯತೆ ಪಡೆದ ಅಂಗೀಕೃತ ವಿಶ್ವವಿದ್ಯಾಲಯದಲ್ಲಿ ಯಾವುದೇ ಪದವಿಯಲ್ಲಿ ಕನಿಷ್ಠ ಶೇ.60 (ಮೀಸಲಾತಿ ಅಭ್ಯರ್ಥಿಗಳು ಶೇ.55) ಅಂಕದೊಂದಿಗೆ ಉತ್ತೀರ್ಣರಾಗಿರಬೇಕು. ಕನ್ನಡ ಓದುವ ಮತ್ತು ಬರೆಯುವ ಸಾಮರ್ಥ್ಯ ಇರಬೇಕು. ಕಂಪ್ಯೂರ್​ ಆಪರೇಷನ್​ ಮತ್ತು ಅಪ್ಲಿಕೇಶನ್​ನಲ್ಲಿ ಜ್ಞಾನ ಹೊಂದಿರಬೇಕು.

ವಯೋಮಿತಿ, ವೇತನ

ಕನಿಷ್ಠ 18 ವರ್ಷ ನಿಗದಿಪಡಿಸಿದ್ದು, ಗರಿಷ್ಠ ಸಾಮಾನ್ಯ ವರ್ಗಕ್ಕೆ 35 ವರ್ಷ, ಇತರ ಹಿಂದುಳಿದ ವರ್ಗಕ್ಕೆ 38 ವರ್ಷ, ಪ.ಜಾತಿ, ಪ.ಪಂ ಮತ್ತು ಪ್ರವರ್ಗ-1 ಅಭ್ಯರ್ಥಿಗಳಿಗೆ 40 ವರ್ಷ, ಮಾಜಿ ಸೈನಿಕರಿಗೆ 45 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. 16,000ದಿಂದ 29,600 ರೂ.ವರೆಗೆ ಮಾಸಿಕ ವೇತನ ಇರಲಿದೆ.

ಅರ್ಜಿ ಸಲ್ಲಿಕೆ ವಿಧಾನ

ಸಾಮಾನ್ಯ ಅಭ್ಯರ್ಥಿಗಳು 1180 ರೂ. ಅರ್ಜಿ ಶುಲ್ಕವನ್ನು ನೆಫ್ಟ್​ ಮೂಲಕ ಜಮಾ ಮಾಡಿ ಯುಟಿಆರ್​ ನಂಬರ್​ ಅನ್ನು ಆನ್​ಲೈನ್​ ಅಪ್ಲಿಕೇಷನ್​ ಫಾಮ್​ರ್ನಲ್ಲಿ ನಮೂದಿಸಿ ಚಲನ್​ ಪ್ರತಿ ಅಪ್​ಲೋಡ್​ ಮಾಡಬೇಕು. ಅರ್ಜಿಯಲ್ಲಿ ತಪ್ಪು ಮಾಹಿತಿ ನಮೂದಿಸಿದರೆ ಯಾವುದೇ ಮುನ್ಸೂಚನೆ ಇಲ್ಲದೆ ತಿರಸ್ಕರಿಸಲಾಗುವುದು. ಮೀಸಲಾತಿ ಕೋರುವವರು ಸಂಬಂಧಪಟ್ಟ ಅಧಿಕಾರಿಗಳಿಂದ ಪಡೆದ ಪ್ರಮಾಣ ಪತ್ರಗಳನ್ನು ಕಡ್ಡಾಯವಾಗಿ ಸಲ್ಲಿಸಬೇಕು.

ಆಯ್ಕೆಯ ಮಾನದಂಡ

ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಅರ್ಹರನ್ನು ಆಯ್ಕೆ ಮಾಡಲಾಗುವುದು. ಪದವಿಯಲ್ಲಿ ಪಡೆದ ನಿಗದಿತ ಆಂಕಗಳ ಪ್ರತಿಶತ ಆಧಾರದ ಮೇಲೆ ಅರ್ಹತೆ ಇರುವ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆಗೆ ಆಹ್ವಾನಿಸಲಾಗುವುದು. ಅಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಅರ್ಹತಾ ಪಟ್ಟಿ ತಯಾರಿಸಿ 1:5 ಅನುಪಾತದಲ್ಲಿ ಸಂದರ್ಶನಕ್ಕೆ ಕರೆಯಲಾಗುವುದು. ಕನ್ನಡ, ಸಾಮಾನ್ಯ ಇಂಗ್ಲಿಷ್​, ಸಾಮಾನ್ಯ ಜ್ಞಾನ, ಸಹಕಾರಿ ವಿಷಯ, ಭಾರತ ಸಂವಿಧಾನ ಮತ್ತು ವಸ್ತುನಿಷ್ಠ ವಿಷಯ ಹಾಗೂ ಬ್ಯಾಂಕಿಂಗ್​ ಚಟುವಟಿಕೆಗಳಿಗೆ ಸಂಬಂಧಿಸಿದಂತೆ 200 ಅಂಕಗಳ ಲಿಖಿತ ಪರೀಕ್ಷೆ ನಡೆಯಲಿದೆ. ವೆಬ್​ಸೈಟ್​ನಲ್ಲಿ ನೀಡುವ ಹಾಲ್​ಟಿಕೆಟ್​ ಡೌನ್​ಲೋಡ್​ ಮಾಡಿಕೊಂಡು ಪರೀಕ್ಷೆಗೆ ಹಾಜರಾಗಬೇಕು.

ಅರ್ಜಿ ಸಲ್ಲಿಸಲು ಕೊನೇ ದಿನ: 30.9.2022

ಅಧಿಸೂಚನೆಗೆ: https://bit.ly/3x1G5Hq

ಮಾಹಿತಿಗೆ: https://kccbankdharwad.in/ಅಥವಾ 9036377735

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net