More

    ಸಿಡ್ನಿಯಲ್ಲಿ ಸಿಕ್ಕಿತು ಎಲಿಜಬೆತ್​ ಬರೆದ ನಿಗೂಢ ಪತ್ರ: ಇದರ ರಹಸ್ಯ ಅರಿಯಲು ಇನ್ನೂ 63 ವರ್ಷ ಕಾಯಬೇಕು!

    ಸಿಡ್ನಿ​: ಜಗತ್ತು ಕಂಡ ಅಪರೂಪದ ರಾಣಿ ಎರಡನೇ ಎಲಿಜಬೆತ್‌. ತಮ್ಮ 96ನೇ ವಯಸ್ಸಿನಲ್ಲಿ ಇವರು ಈಚೆಗೆ ನಿಧನರಾಗುತ್ತಿದ್ದಂತೆಯೇ ಅವರ ಬದುಕಿನ ಕೆಲವು ಕುತೂಹಲ ಎನಿಸುವ ಘಟನೆಗಳು ಒಂದೊಂದಾಗಿ ತೆರೆದುಕೊಳ್ಳುತ್ತಿವೆ.

    ಅಂಥವುಗಳಲ್ಲಿ ಒಂದು ಅವರು ಬರೆದಿರುವ ಅತ್ಯಂತ ರಹಸ್ಯ ಎನ್ನುವ ಪತ್ರ. 1986ರಲ್ಲಿ ರಾಣಿ ಎಲಿಜಬೆತ್​ ಬರೆದಿರುವ ಪತ್ರವೊಂದು ಇದೀಗ ದೊರೆತಿದೆ. ಆದರೆ ಕುತೂಹಲದ ಸಂಗತಿ ಏನೆಂದರೆ, ಅದನ್ನು ಇನ್ನು 63 ವರ್ಷಗಳವರೆಗೆ ಯಾರೂ ತೆರೆಯುವಂತಿಲ್ಲ! ಏಕೆಂದರೆ ಇದನ್ನು ತೆರೆಯಲು 2085ರವರೆಗೆ ಕಾಯಲೇಬೇಕಿದೆ!

    ಆಸ್ಟ್ರೇಲಿಯದ ಸಿಡ್ನಿಯ ಐತಿಹಾಸಿಕ ಕಟ್ಟಡವೊಂದರಲ್ಲಿ ಈ ಪತ್ರ ದೊರೆತಿದೆ. 1986ರ ನವೆಂಬರ್​ನಲ್ಲಿ ಖುದ್ದು ಎಲಿಜಬೆತ್​ ಬರೆದ ಪತ್ರ ಇದಾಗಿದ್ದು, ಗಾಜಿನ ಕೇಸ್‌ ಒಂದರಲ್ಲಿ ಇರಿಸಲಾಗಿದೆ. ಈ ಪತ್ರ ಇದೀಗ ದೊರೆತಿದ್ದು, ಅದರಲ್ಲಿ ಏನನ್ನು ಬರೆಯಲಾಗಿದೆ ಎಂಬುದರ ಬಗ್ಗೆ ಯಾರೆಂದರೆ ಯಾರಿಗೂ ಕೂಡ ತಿಳಿದಿಲ್ಲ. ಅಲ್ಲದೇ ಅಲ್ಲಿನ ಆಡಳಿತಗಾರರಿಗಾಗಲಿ, ರಾಣಿಯ ಆಪ್ತ ಸಹಾಯಕರಿಗೂ ಸಹ ಈ ಬಗ್ಗೆ ತಿಳಿದಿಲ್ಲ. ಅತ್ಯಂತ ರಹಸ್ಯವಾದ ಜಾಗದಲ್ಲಿ ಹಾಗೂ ಅತ್ಯಂತ ಸುರಕ್ಷಿತವಾದ ಜಾಗದಲ್ಲಿ ಈ ಪತ್ರವನ್ನು ಇರಿಸಲಾಗಿದೆ.

    ಈ ಪತ್ರದ ಮೇಲೆ ಸಿಡ್ನಿಯ ಮೇಯರ್​ಗೆ ಒಂದು ಸಂದೇಶವಿದೆ. ‘2085ನೇ ಸಾಲಿನಲ್ಲಿ ಯಾವುದಾದರೂ ಒಂದು ದಿನ ಈ ಪತ್ರ ತೆರೆಯಬೇಕು. ಹಾಗೂ ಸಿಡ್ನಿಯ ಜನರಿಗೆ ಈ ಪತ್ರದಲ್ಲಿ ಏನಿದೆ ಎಂಬುದನ್ನು ತಿಳಿಸಬೇಕು ಎಂಬುದಾಗಿ ಪತ್ರದಲ್ಲಿ ಬರೆಯಲಾಗಿದ್ದು, ಅದರ ಕೆಳಗೆ ಎಲಿಜಬೆತ್‌ ಆರ್‌. ಎಂಬ ಸಹಿ ಇದೆ.

    ‘ತಮ್ಮ ಮೊದಲ ಭೇಟಿಯಿಂದಲೇ ಮಹಾರಾಣಿಗೆ ಆಸ್ಟ್ರೇಲಿಯ ಮೇಲೆ ಒಂದು ಬಗೆಯ ವ್ಯಾಮೋಹ ಹುಟ್ಟಿಕೊಂಡಿತ್ತು, ಮತ್ತು ಈ ದೇಶಕ್ಕೆ ಅವರು ತಮ್ಮ ಹೃದಯದಲ್ಲಿ ವಿಶಿಷ್ಟ ಸ್ಥಾನವನ್ನು ನೀಡಿದ್ದರು, ಆಸ್ಟ್ರೇಲಿಯಗೆ ಭೇಟಿ ನೀಡಿದ ಯಾವುದೇ ಅರಸೊತ್ತಿಗೆ ಏಕೈಕ ಪ್ರತಿನಿಧಿ ಅವರಾಗಿದ್ದರು’ ಎಂದು ಆಸ್ಟ್ರೇಲಿಯದ ಪ್ರಧಾನ ಮಂತ್ರಿ ಅಂತೋಣಿ ಅಲ್ಬಾನೀಸ್ ಅವರು ಇದೇ ಸಂದರ್ಭದಲ್ಲಿ ಹೇಳಿದ್ದಾರೆ. (ಏಜೆನ್ಸೀಸ್​)

    ದಸರಾ ಹಬ್ಬದ ರಜೆಯಲ್ಲಿ ಕಡಿತ: ಟೂರ್​ಗೆ ಪ್ಲ್ಯಾನ್​ ಮಾಡಿಕೊಂಡಿದ್ರೆ ಈ ವಿಷಯ ತಿಳಿದುಕೊಳ್ಳಿ…

    ನಿತೀಶ್​ಕುಮಾರ್​ಗೆ ಬಿಗ್​ ಶಾಕ್​: ಭ್ರಷ್ಟರಿಗೆ ಸಾಥ್​ ನೀಡಿದ್ದು ಸಹಿಸಲ್ಲ ಎಂದು ಕಮಲದ ಕೈಹಿಡಿದ 15 ಮಂದಿ!

    ಲವ್ವಲ್ಲಿ ಏನಿದೆ? ಸಖತ್ ಆಗಿರೋ 24 ವರ್ಷದ ಹುಡುಗನನ್ನ ಕಳಿಸಿಕೊಡಪ್ಪಾ ದೇವ್ರೆ ಎಂದ ಸೋನು ಗೌಡ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts