

ಬೆಂಗಳೂರು: ಸ್ಥಳೀಯ ಸಂಸ್ಥೆಗಳಿಂದ ಮೇಲ್ಮನೆಯ 25 ಸ್ಥಾನಗಳಿಗೆ ನಡೆಯುವ ಚುನಾವಣೆಗೆ ಜೆಡಿಎಸ್ ಏಳು ಮಂದಿ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದೆ.
ಮೈಸೂರು ಕ್ಷೇತ್ರದ ಟಿಕೆಟ್ ಹಂಚಿಕೆಯಲ್ಲಿ ಗೊಂದಲ, ಪೈಪೋಟಿಯ ಕಾರಣ ನಾಮಪತ್ರ ಸಲ್ಲಿಕೆಯ ಕೊನೆಯ ದಿನವಾದ ಮಂಗಳವಾರ ಬೆಳಗಿನ ಜಾವ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗಿದೆ.
ನಾನು ಜೆಡಿಎಸ್ ನಿಂದ ಮಾನಸಿಕವಾಗಿ ದೂರವಿದ್ದೇನೆ ಎಂದು ಹೇಳಿದ ಸಂದೇಶ್ ನಾಗರಾಜ್ ಬಿಜೆಪಿ ಟಿಕೆಟ್ ಗೆ ಪ್ರಯತ್ನಪಟ್ಟಿದ್ದರು. ಅಲ್ಲಿ ಟಿಕೆಟ್ ಸಿಗದೇ ಇದ್ದಾಗ ಮತ್ತೆ ಜೆಡಿಎಸ್ ವರಿಷ್ಠರಿಗೆ ದುಂಬಾಲು ಬಿದ್ದಿದ್ದರು.
ಮಾಜಿ ಪ್ರಧಾನಿ ದೇವೇಗೌಡರ ಮೇಲೆ ಸಾಕಷ್ಟು ಒತ್ತಡ ತಂದಿದ್ದರೂ. ಆದರೂ ಪ್ರಯತ್ನ ಫಲಕೊಟ್ಟಿಲ್ಲ.
ಯಾರು ಅಭ್ಯರ್ಥಿಗಳು?
*ಮಂಡ್ಯ- ಅಪ್ಪಾಜಿಗೌಡ
*ತುಮಕೂರು-ಅನಿಲ್ ಕುಮಾರ್
*ಮೈಸೂರು-ಸಿ.ಎನ್.ಮಂಜೇಗೌಡ
*ಕೋಲಾರ-ವಕ್ಕಲೇರಿ ರಾಮು
*ಬೆಂಗಳೂರು ಗ್ರಾಮಾಂತರ-ರಮೇಶ್ ಗೌಡ
*ಕೊಡಗು-ಎಚ್.ಯು.ಇಸಾಕ್ ಖಾನ್
*ಹಾಸನ-ಸೂರಜ್ ರೇವಣ್ಣ