VIDEO: ಕೋಲಾರದಲ್ಲಿ ತಯಾರಾಗ್ತಿದೆ ದೇಶದ ಅತಿದೊಡ್ಡ ತ್ರಿವರ್ಣ ಧ್ವಜ: ಆಹಾ! ಎಷ್ಟೆಲ್ಲಾ ವಿಶೇಷತೆಗಳು...

kolar
Published on

ಕೋಲಾರ: ಕೋಲಾರದಲ್ಲಿ ದೇಶದಲ್ಲೇ ಅತಿದೊಡ್ಡ ತ್ರಿವರ್ಣ ಧ್ವಜ ತಯಾರಾಗುತ್ತಿದ್ದು, ಇದು ಅಂತಿಮ ರೂಪ ಪಡೆದಿದೆ.

ನಾಳೆ (ಆಗಸ್ಟ್-15) 1.30 ಲಕ್ಷ ಚದರಡಿಯ ಬೃಹತ್ ತ್ರಿವರ್ಣ ಧ್ವಜದ ಅನಾವರಣ ಮಾಡಲಾಗುತ್ತಿದೆ. ಇದು 204 ಅಡಿ ಉದ್ದ 630 ಅಡಿ ಅಗಲದ ಬೃಹತ್ ತ್ರಿವರ್ಣ ಧ್ವಜವಾಗಿದೆ. 1.30 ಲಕ್ಷ ಚದರ ಅಡಿಯ ಧ್ವಜ ಇದಾಗಿದ್ದು, 13 ಸಾವಿರ ಮೀಟರ್​ ಬಟ್ಟೆಯಲ್ಲಿ ಇದನ್ನು ತಯಾರಿಸಲಾಗಿದೆ.

7 ದಿನಗಳಲ್ಲಿ 25 ಜನರು ಸೇರಿ ಇದನ್ನು ರೆಡಿ ಮಾಡಿದ್ದಾರೆ. ಕೋಲಾರ ಸಂಸದ ಮುನಿಸ್ವಾಮಿ ನೇತೃತ್ವದಲ್ಲಿ ಇದನ್ನು ತಯಾರಿಸಲಾಗಿದ್ದು, ಈಗ ಧ್ವಜವು ಅಂತಿಮ‌ ರೂಪ‌ ಪಡೆಯುತ್ತಿದೆ.

ಇದನ್ನು ಲಿಮ್ಕಾ ಬುಕ್​ ಆಫ್​ ರೆಕಾರ್ಡ್​ಗೂ ಸೇರಿಸಲಾಗುತ್ತಿದೆ. ಕೈಯಿಂದ ನಿರ್ಮಾಣ ಮಾಡಲಾಗಿರುವ ರಾಷ್ಟ್ರಧ್ವಜ ಎಂಬ ಹೆಗ್ಗಳಿಕೆ ಕೂಡ ಇದಕ್ಕಿದೆ. ಕೋಲಾರದ ಸರ್​.ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಈ ಬೃಹತ್​ ಧ್ವಜವನ್ನು ನಾಳೆ ಹಾರಿಸಲು ಸಿದ್ಧತೆ ನಡೆದಿದ್ದು, ಈ ಧ್ವಜ ಹಿಡಿದುಕೊಳ್ಳಲು 2000 ಜನರನ್ನು ನೇಮಿಸಲಾಗಿದೆ. (ದಿಗ್ವಿಜಯ ನ್ಯೂಸ್​)

ವಿಡಿಯೋ ಇಲ್ಲಿದೆ ನೋಡಿ:

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net