More

    ಧ್ವಜಾರೋಹಣ, ಜಾಥಾ, ಮೆರವಣಿಗೆ… ಬೆಂಗಳೂರಲ್ಲಿ ಸಂಚಾರ ಬದಲು: ಎಲ್ಲೆಲ್ಲಿ ಪಾರ್ಕಿಂಗ್​, ಪಾಸ್​ ಹೇಗೆ? ಇಲ್ಲಿದೆ ಡಿಟೇಲ್ಸ್​

    ಬೆಂಗಳೂರು: ಭಾರತ 75ನೇ ಸ್ವಾತಂತ್ರ್ಯದ ಸಂಭ್ರಮದಲ್ಲಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿಯೂ ಭರ್ಜರಿ ತಯಾರಿ ನಡೆಸಲಾಗುತ್ತಿದ್ದು, ಬೆಂಗಳೂರಿನ ಕೆಲವು ಕಡೆಗಳಲ್ಲಿ ಸಂಚಾರ ಮಾರ್ಗದಲ್ಲಿ ಬದಲಾವಣೆ ಮಾಡಲಾಗಿದೆ. ಸ್ವಾತಂತ್ರ್ಯೋತ್ಸವದ ಆಚರಣೆ ನಡುವೆಯೇ ಮಾಣಿಕ್ ಷಾ ಮೈದಾನದಲ್ಲಿ ಧ್ವಜಾರೋಹಣ, ಚಾಮರಾಜಪೇಟೆ ಮೈದಾನದಲ್ಲಿ ಕಂದಾಯ ಇಲಾಖೆ ಕಾರ್ಯಕ್ರಮ, ಕಾಂಗ್ರೆಸ್ ಪಕ್ಷದ ಸ್ವಾತಂತ್ರ್ಯ ನಡಿಗೆ ಸೇರಿದಂತೆ ಹಲವು ಜಾಥಾ, ಮೆರವಣಿಗಳೂ ಇರುವ ಕಾರಣ, ಕೆಲವು ಮಾರ್ಗಗಳಲ್ಲಿ ವಾಹನ ಸಂಚಾರ ಬದಲಾವಣೆ ಮಾಡಲಾಗಿದೆ.

    ಮಾರ್ಗ ಬದಲಾವಣೆ ಎಲ್ಲಿಲ್ಲಿ ಹಾಗೂ ಪಾರ್ಕಿಂಗ್​ ಸೌಲಭ್ಯ ಎಲ್ಲೆಲ್ಲಿ ಎಂಬ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ:

    * ಬೆಳಗ್ಗೆ 6.30 ರಿಂದ 8 ಗಂಟೆವರೆಗೆ ಹೆಸರಘಟ್ಟ ಮುಖ್ಯ ರಸ್ತೆಯಲ್ಲಿ, ಬೆಳಗ್ಗೆ 7 ಗಂಟೆಯಿಂದ 9 ಗಂಟೆವರೆಗೆ ಎಚ್.ಎಂ.ಟಿ ರಸ್ತೆಯಲ್ಲಿ ವಾಹನಗಳಿಗೆ ನೋ ಎಂಟ್ರಿ. ಬೆಳಗ್ಗೆ 8 ಗಂಟೆಯಿಂದ ಮಧ್ಯಾಹ್ನ 12 ಗಂಟೆವರೆಗೆ ವಾಟಾಳ್ ನಾಗರಾಜ್ ರಸ್ತೆ, ರಾಜ್ ಕುಮಾರ್ ರಸ್ತೆ, ತುಮಕೂರು ರಸ್ತೆ, ಶೇಷಾದ್ರಿ ರಸ್ತೆಯಲ್ಲಿ ಸಂಚರಿಸಬೇಕು.
    * ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 3 ಗಂಟೆವರೆಗೆ, ನೃಪತುಂಗ ರಸ್ತೆ ಎನ್.ಆರ್ ರೋಡ್, ಜೆ. ಸಿ ರೋಡ್, ಜಿ.ಟಿ ರೋಡ್, ಎಲ್.ಪಿ.ಟಿ ರೋಡ್, ಕೆ.ಜಿ ರೋಡ್, ಗಾಂಧಿ ನಗರ 5 ನೇ ಮುಖ್ಯ ರಸ್ತೆಯಲ್ಲಿ ಸಂಚಾರ ನಿರ್ಬಂದಿಸಲಾಗಿದೆ.
    * ಮಧ್ಯಾಹ್ನ 12 ರಿಂದ 3 ಗಂಟೆಯವರೆಗೆ ಆನಂದ್ ರಾವ್ ಸರ್ಕಲ್, ಸುಬೇದಾರ್ ಚತ್ರಂ ರಸ್ತೆ, ಗೂಡ್ ಶೆಡ್ ರೋಡ್​ನಿಂದ ಟಿ.ಎಂ. ಸಿ ರಾಯನ್ ರೋಡ್, ಸಂಗೋಳ್ಳಿ ರಾಯಣ್ಣ ಸರ್ಕಲ್, ಬಿನ್ನಿಪೇಟೆ ಹುಣಸೇಮರ ಜಂಕ್ಷನ್​ನಿಂದ ಗೂಡ್ ಶೆಡ್ ರಸ್ತೆ, ಟ್ಯಾಂಕ್ ಬಂಡ್ ರಸ್ತೆ, ಶೇಷಾದ್ರಿ ರಸ್ತೆ, ಸೌತ್ ಅಂಡ್ ರಸ್ತೆಯಿಂದ ಲಾಲ್ ಬಾಗ್ ಪಶ್ಚಿಮ ಗೇಟ್, ಮಿನರ್ವ ಸರ್ಕಲ್ ನಿಂದ ಟೌನ್ ಹಾಲ್ ಕಡೆಗೆ ಸಂಚರಿಸುವಂತಿಲ್ಲ.
    * ಮಧ್ಯಾಹ್ನ 12 ಗಂಟೆಯಿಂದ 4 ಗಂಟೆವರೆಗೆ ಶೇಷ್ಮಾಲ್ ಜಂಕ್ಷನ್​ನಿಂದ ರಾಮಕೃಷ್ಣ ಆಶ್ರಮ ಸರ್ಕಲ್, ಬುಲ್ ಟೆಂಪಲ್ ರಸ್ತೆ ಮಂಜುನಾಥ ಕಲ್ಯಾಣ ಮಂಟಪದಿಂದ ಉಮಾ ಥಿಯೇಟರ್ ಕಡೆಗೆ, ಕೆ.ಆರ್ ರಸ್ತೆ, ಡಿ.ಎಂ ಜಂಕ್ಷನ್​ನಿಂದ ಶಿವಶಂಕರ್ ಸರ್ಕಲ್‌ವರೆಗೆ. ಡಯಾಗನಲ್ ರೋಡ್ ಹೋಮ್ ಸ್ಕೂಲ್ ಜಂಕ್ಷನ್ ನಿಂದ ವಾಸವಿ ರಸ್ತೆ ಮತ್ತು ನ್ಯಾಷನಲ್ ಕಾಲೇಜ್ ಸುತ್ತಮುತ್ತ ಸಂಚರಿಸುವಂತಿಲ್ಲ.

    ಮಾಣಿಕ್ ಷಾ ಮೈದಾನದಲ್ಲಿ ಧ್ವಜಾರೋಹಣ ಇರುವ ಹಿನ್ನೆಲೆಯಲ್ಲಿ ಈ ಬದಲಾವಣೆ ಗಮನಿಸಿ:

    ಮಾಣೆಕ್ ಷಾ ಪೆರೇಡ್ ಮೈದಾನದಲ್ಲಿ 15ರಂದು ಬೆಳಗ್ಗೆ 8.55ಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಧ್ವಜಾರೋಹಣ ಮಾಡಲಿದ್ದಾರೆ. 9 ಗಂಟೆಗೆ ಧ್ವಜಾರೋಹಣ ನೆರವೇರಲಿದೆ. 2,400 ಮಕ್ಕಳು ಪರೇಡ್ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಕೆಎಸ್‌ಆರ್‌ಪಿ, ಸಿಆರ್‌ಪಿಎಫ್, ಬಿಎಸ್‌ಎಫ್, ಸಿಎಆರ್, ಮಹಿಳಾ ಮೀಸಲು ಪೊಲೀಸ್, ಸಂಚಾರ ಪೊಲೀಸ್, ಗೃಹ ರಕ್ಷಕ ದಳದ 1,200 ಸದಸ್ಯರು ಪರೇಡ್‌ನಲ್ಲಿ ಭಾಗವಹಿಸಲಿದ್ದಾರೆ. ಬೆಳಗ್ಗೆ 11.20ಕ್ಕೆ ಮೆರವಣಿಗೆ ಮುಕ್ತಾಯವಾಗಲಿದೆ. ಶಾಲಾ ಮಕ್ಕಳು ಮತ್ತು ವಿಶೇಷ ಪಡೆಗಳಿಂದ ಕಾರ್ಯಕ್ರಮಗಳು ನಡೆಯಲಿವೆ.

    ಈ ಹಿನ್ನೆಲೆಯಲ್ಲಿ, ಬೆಳಗ್ಗೆ 8 ರಿಂದ 11 ಗಂಟೆ ವರೆಗೆ ಕಬ್ಬನ್ ರಸ್ತೆಯ ಬಿಆರ್‌ವಿ ಜಂಕ್ಷನ್‌ನಿಂದ ಕಾಮರಾಜ ರಸ್ತೆ ಜಂಕ್ಷನ್ ವರೆಗೆ ಎರಡೂ ದಿಕ್ಕಿನಲ್ಲಿ ಸಂಚಾರ ನಿರ್ಬಂಧ ಮಾಡಲಾಗಿದೆ. ಈ ಮಾರ್ಗದಲ್ಲಿ ಸಂಚರಿಸುವ ವಾಹನಗಳು ಇನ್‌ಫೆಂಟ್ರಿ ರಸ್ತೆ ಮೂಲಕ ಮಣಿಪಾಲ್ ಸೆಂಟರ್ ಮಾರ್ಗ ಬಳಿಸಲು ಸೂಚಿಸಲಾಗಿದೆ. ಕಬ್ಬನ್ ರಸ್ತೆಯಲ್ಲಿ ಸಂಚರಿಸುವ ವಾಹನಗಳು ಮಣಿಪಾಲ್ ಸೆಂಟರ್, ವೆಬ್ಸ್ ಜಂಕ್ಷನ್, ಎಂ.ಜಿ. ರಸ್ತೆ ಮೂಲಕ ತೆರಳಲು ಅವಕಾಶ ಕಲ್ಪಿಸಲಾಗಿದೆ.

    ವಾಹನ ನಿಲುಗಡೆ ನಿಷೇಧ
    * ಬೆಂಗಳೂರಿನ ಸೆಂಟ್ರಲ್ ಸ್ಟ್ರೀಟ್, ಅನಿಲ್ ಕುಂಬ್ಳೆ ವೃತ್ತದಿಂದ ಶಿವಾಜಿನಗರ ಬಸ್ ನಿಲ್ದಾಣದವರೆಗೆ ವಾಹನ ನಿಲುಗಡೆ ನಿಷೇಧಿಸಲಾಗಿದೆ.

    * ಕಬ್ಬನ್ ಪಾರ್ಕ್ ಸಿಟಿಓ ವೃತ್ತದಿಂದ ಕೆ.ಅರ್. ರಸ್ತೆ ಮತ್ತು ಕಬ್ಬನ್ ರಸ್ತೆ ಜಂಕ್ಷನ್‌ವರೆಗೂ ವಾಹನ ನಿಲುಗಡೆ ಮಾಡುವಂತಿಲ್ಲ.

    * ಎಂ.ಜಿ. ರಸ್ತೆ, ಅನಿಲ್ ಕುಂಬ್ಳೆ ವೃತ್ತದಿಂದ ಕ್ವೀನ್ಸ್ ವೃತ್ತದ ವರೆಗೂ ವಾಹನ ನಿಲುಗಡೆ ನಿಷೇಧಿಸಲಾಗಿದೆ.

    ಮಾಣಿಕ್ ಷಾ ಮೈದಾನದಲ್ಲಿ ಧ್ವಜಾರೋಹಣಕ್ಕೆ ಪಾಸ್:

    ಬಿಳಿ ಪಾಸ್ ಹೊಂದಿರುವ ಗಣ್ಯರು, ಸಚಿವರು, ಸರ್ಕಾರದ ಕಾರ್ಯದರ್ಶಿಗಳು, ರಕ್ಷಣಾ ಅಧಿಕಾರಿಗಳು, ಹಿರಿಯ ಪೊಲೀಸ್ ಅಧಿಕಾರಿಗಳು ಕಬ್ಬನ್ ರಸ್ತೆಯಲ್ಲಿ ಸಂಚರಿಸಿ ಪ್ರವೇಶ ದ್ವಾರ 3ರ ಮೂಲಕ ಒಳ ಪ್ರವೇಶಿಸಲು ಅವಕಾಶ ಕಲ್ಪಿಸಲಾಗಿದೆ. ಇವರು ವಾಹನಗಳನ್ನು ಕಬ್ಬನ್ ಜಂಕ್ಷನ್ ಸಫೀನಾ ಪ್ಲಾಜಾ ಬಳಿ ಕಾಮರಾಜ ರಸ್ತೆ ಆರ್ಮಿ ಪಬ್ಲಿಕ್ ಶಾಲೆ ಬದಿ

    ಪಿಂಕ್ ಪಾಸ್ ಎಂಟ್ರಿ:
    ಪಿಂಕ್ ಪಾಸ್ ಹೊಂದಿರುವ ಆಹ್ವಾನಿತರು ತಮ್ಮ ವಾಹನಗಳನ್ನು ಮೈನ್ ಗಾರ್ಡ ಕ್ರಾಸ್ ರಸ್ತೆ ಸಫೀನಾ ಪ್ಲಾಜಾ ಮೂಲಕ ಸಂಚರಿಸಿ ಕಾಮರಾಜ ರಸ್ತೆ ಆರ್ಮಿ ಪಬ್ಲಿಕ್ ಶಾಲೆ ಬಳಿ ವಾಹನ ನಿಲುಗಡೆ ಮಾಡಿ ಗೇಟ್ ನಂಬರ್ 2 ಮೂಲಕ ಪ್ರವೇಶ ಪಡೆಯಬಹುದು.

    ಹಸಿರು ಬಣ್ಣದ ಪಾಸ್:
    ಹಸಿರು ಬಣ್ಣದ ಪಾಸ್ ಹೊಂದಿರುವ ಆಹ್ವಾನಿತರು ತಮ್ಮ ವಾಹನಗಳನ್ನು ಶಿವಾಜಿನಗರದ ಒಂದನೇ ಮಹಡಿ ಬಳಿ ನಿಲುಗಡೆ ಮಾಡಿ ಪೆರೇಡ್ ಮೈದಾನಕ್ಕೆ ಪ್ರವೇಶ ದ್ವಾರ ನಾಲ್ಕರ ಮೂಲಕ ಪ್ರವೇಶಿಸಬಹುದು.

    ಮಾಧ್ಯಮ ಪ್ರತಿನಿಧಿಗಳು ಹಾಗೂ ಸಾರ್ವಜನಿಕರು:
    * ಕಾರ್ಯಕ್ರಮಕ್ಕೆ ಬರುವ ಮಾಧ್ಯಮ ಪ್ರತಿನಿಧಿಗಳ ವಾಹನಗಳು ಪ್ರವೇಶ ದ್ವಾರ ನಾಲ್ಕರ ಬಳಿ ವಾಹನ ನಿಲುಗಡೆ ಮಾಡಿ ಮೈದಾನಕ್ಕೆ ಪ್ರವೇಶಿಸಬೆಕು.
    * ಕವಾಯತಿನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಾರ್ವಜನಿಕರು ವಿದ್ಯಾರ್ಥಿಗಳ ವಾಹನಗಳನ್ನು ಪ್ರವೇಶ ದ್ವಾರ ಎರಡರ ಬಳಿ ನಿಲ್ಲಿಸಿ ಮೈದಾನಕ್ಕೆ ಪ್ರವೇಶಿಸಲು ಅವಕಾಶ ಕಲ್ಪಿಸಲಾಗಿದೆ. ’

    ಪಾಸ್​ ಇಲ್ಲದಿದ್ದರೆ
    * ಯಾವುದೇ ಪಾಸ್ ಇಲ್ಲದೇ ಬರುವ ಸಾರ್ವಜನಿಕರು ತಮ್ಮ ವಾಹನಗಳನ್ನು ಶಿವಾಜಿನಗರ ಬಳಿ ನಿಲ್ಲಿಸಿ ಕಾಲುನಡಿಗೆ ಮೂಲಕ ಪ್ರವೇಶ ದ್ವಾರ ನಾಲ್ಕರ ಮೂಲಕ ಪ್ರವೇಶ ಪಡೆಯಬಹುದಾಗಿದೆ.

    ರಾಷ್ಟ್ರಪತಿ ಪದಕ ಪುರಸ್ಕೃತರ ಪಟ್ಟಿ ಬಿಡುಗಡೆ: ರಾಜ್ಯದ 18 ಪೊಲೀಸ್​ ಅಧಿಕಾರಿ, ಸಿಬ್ಬಂದಿಗೆ ಮೆರಿಟೋರಿಯಸ್​ ಅವಾರ್ಡ್​

    ನೋವಿನ ನಡುವೆಯೂ ಭಾರತಕ್ಕೆ ಚಿನ್ನ ಕೊಟ್ಟ ಸಿಂಧುವಿಗಿಲ್ಲ ವಿಶ್ವ ಚಾಂಪಿಯನ್​ಶಿಪ್​ನಲ್ಲಿ ಆಡುವ ಭಾಗ್ಯ!

    ನಸುಕಿನಲ್ಲಿ ಭೀಕರ ಕಾರು ಅಪಘಾತ: ಮಾಜಿ ಸಚಿವ ವಿನಾಯಕ್​ ಮೇಟೆ ನಿಧನ- ಭದ್ರತಾ ಸಿಬ್ಬಂದಿಗೆ ಗಾಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts