

ಆಕೆಗೆ ಯಾರೂ ವಾರಸುದಾರರು ಇಲ್ಲ ನಾನೇ ನೋಡಿಕೊಳ್ಳುವುದು ಎಂದು ಸುಳ್ಳು ಹೇಳಿ ಬರೆಯಿಸಿಕೊಂಡಿದ್ದಾರೆ. ಈ ವಿಷಯ, ಆ ವೃದ್ಧ ಮಹಿಳೆ ತೀರಿಕೊಂಡ ಮೇಲೆ ಆಕೆಯ ವಾರಸುದಾರರಿಗೆ ತಿಳಿದುಬಂದಿರುತ್ತದೆ. ಪರಿಶಿಷ್ಟ ಜಾತಿಯವರಿಗೆ ಬಂದ ಜಾಗವನ್ನು ಬೇರೆಯವರಿಗೆ ವಿಲ್ ಮಾಡಿದರೆ ಅದು ಊರ್ಜಿತವಾಗುತ್ತದೆಯೇ ತಿಳಿಸಿ.
ಉತ್ತರ: ಒಬ್ಬ ವ್ಯಕ್ತಿಗೆ ಮಂಜೂರಾತಿ ಆದ ಜಮೀನು ಆ ವ್ಯಕ್ತಿಯ ಸ್ವಯಾರ್ಜಿತ ಆಸ್ತಿ ಆಗಿರುತ್ತದೆ. ಅದನ್ನು ಅವರು ಯಾರಿಗೆ ಬೇಕಾದರೂ, ಯಾವ ಜಾತಿಯವರಿಗೆ ಬೇಕಾದರೂ ವಿಲ್ ಮಾಡುವ ಅಧಿಕಾರ ಇರುತ್ತದೆ.
ಆದರೆ, ಯರೇ ಆಗಲೀ ಮೋಸದಿಂದ ವಿಲ್ ಮಾಡಿಸಿಕೊಂಡಿದ್ದರೆ, ಆ ಮರಣಶಾಸನದ ಕ್ರಮವನ್ನು ನ್ಯಾಯಾಲಯದಲ್ಲಿ ಪ್ರಶ್ನೆ ಮಾಡಬಹುದು. ವೃದ್ಧ ಮಹಿಳೆಗೆ ವಾರಸುದಾರರು ಇದ್ದಾಗಲೂ ಸಹ, ಯಾರೂ ಇಲ್ಲ ಎಂದು ಸುಳ್ಳು ಹೇಳಿ ವಿಲ್ ಮಾಡಿಸಿಕೊಂಡಿದ್ದರೆ, ಆಕೆಯ ವಾರಸುದಾರರು, ಆ ವಿಲ್ ಸಿಂಧುತ್ವವನ್ನು ನ್ಯಾಯಾಲಯದಲ್ಲಿ ಪ್ರಶ್ನೆ ಮಾಡಬಹುದು.
ಆದರೆ ವಿಲ್ ಯಾರ ಪರವಾಗಿ ಆಗಿದೆಯೋ ಅವರು ಬೇರೆಯ ಜಾತಿಯವರು ಎನ್ನುವ ಕಾರಣದಿಂದ ವಿಲ್ ಅನೂರ್ಜಿತ ಆಗುವುದಿಲ್ಲ.