ಪ್ರೀತಿಸಿದ್ದೇ ತಪ್ಪಾಯ್ತು! ಬಾವಿಯಲ್ಲಿ ಯುವಕನ ಶವ, ಕೊಲೆಯೋ- ಆತ್ಮಹತ್ಯೆಯೋ ಬಗೆಹರಿಯದ ಸಮಸ್ಯೆ

haveri
Published on

ಹಾವೇರಿ: ಯುವತಿಯೊಬ್ಬಳ ಪ್ರೀತಿಗೆ ಬಿದ್ದು ಯುವಕನೊಬ್ಬ ಪ್ರಾಣ ಕಳಕೊಂಡಿರುವ ದಾರುಣ ಘಟನೆ ಹಾವೇರಿ ಜಿಲ್ಲೆಯಲ್ಲಿ ನಡೆದಿದೆ.

ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಹೆಡಿಗೊಂಡ ಗ್ರಾಮದಲ್ಲಿ ಘಟನೆ ನಡೆದಿದ್ದು, 29 ವರ್ಷದ ಜಯಪ್ಪ ಬ್ಯಾಡಗಿ ಮೃತ ಯುವಕ. ಈತನ ಶವ ಬಾವಿಯಲ್ಲಿ ಪತ್ತೆಯಾಗಿದ್ದು, ಇದು ಕೊಲೆಯೋ, ಆತ್ಮಹತ್ಯೆಯೋ ಎಂಬ ಪ್ರಶ್ನೆ ಎದುರಾಗಿದೆ.

ಕಳೆದ ಐದು ದಿನಗಳ ಹಿಂದೆ ಪ್ರೀತಿಗೆ ಸಂಬಂಧಿಸಿದಂತೆ ಎರಡೂ ಕುಟುಂಬಗಳ ನಡುವೆ ಜಗಳವಾಗಿತ್ತು. ಜಗಳ ವಿಪರೀತಕ್ಕೆ ಹೋಗಿ ಜಯಪ್ಪನನ್ನು ಹುಡುಗಿಯ ಸಂಬಂಧಿಕರು ಮನಸ್ಸಿಗೆ ಬಂದಂತೆ ಥಳಿಸಿದ್ದರು.

ಈ ಘಟನೆ ಬೆನ್ನಲ್ಲೆ ರಾತ್ರೋರಾತ್ರಿ ಯುವಕನ ದೇಹ ಬಾವಿಯಲ್ಲಿ ಪತ್ತೆಯಾಗಿದೆ. ಮೆಲ್ನೋಟಕ್ಕೆ ಬಾವಿಗೆ ಹಾರಿ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಆದರೆ ಇದನ್ನು ಯುವಕನ ಕುಟುಂಬಸ್ಥರು ಅಲ್ಲಗಳೆದಿದ್ದಾರೆ. ನಮ್ಮ ಮಗನನ್ನು ಹುಡುಗಿಯ ಕಡೆಯವರು ಹೊಡೆದು ಬಾವಿಗೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ. ಅವರೇ ಮಗನ ಕೊಲೆ ಮಾಡಿದ್ದಾರೆಂದು ಪಾಲಕರು ಹೇಳಿದ್ದಾರೆ.

ಸ್ಥಳಕ್ಕೆ ಪೋಲಿಸರ ಭೇಟಿ ಪರಿಶೀಲನೆ ನಡೆಸುತ್ತಿದ್ದಾರೆ. ಕಾಗಿನಲೆ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್‌)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net