ಗ್ರಾಪಂಗಳಿಗೆ 225.51 ಕೋಟಿ ರೂ. ಬಿಡುಗಡೆ: -ಹಣ ವಿನಿಯೋಗಕ್ಕೆ ಷರತ್ತು ವಿಧಿಸಿರುವ ಸರ್ಕಾರ

grapam
Published on

ಬೆಂಗಳೂರು: ಗ್ರಾಮ ಪಂಚಾಯಿತಿಗಳಿಗೆ 2020-21 ನೇ ಸಾಲಿನ ಮೂರನೇ ಕಂತಿನ ಅನುದಾನವಾಗಿ 225.51 ಕೋಟಿ ರೂ.ಗಳನ್ನು ಸರ್ಕಾರ ಬಿಡುಗಡೆ ಮಾಡಿ ಆದೇಶಿಸಿದೆ.
ಈ ಕೆಳಕಂಡ ಷರತ್ತಿಗೊಳಪಟ್ಟು ಬಿಡುಗಡೆ ಮಾಡಿ ಆದೇಶಿಸಿದೆ.

ಷರತ್ತುಗಳು:
* 5962 ಗ್ರಾಮ ಪಂಚಾಯತಿಗಳಿಗೆ ಅನುಬಂಧ-1ರಲ್ಲಿ ಇರುವಂತೆ ಶಾಸನಬದ್ಧ ಅನುದಾನದ ಬ್ಯಾಂಕ್‌ ಖಾತೆಗಳಿಗೆ ರಾಜ್ಯ ಖಜಾನೆಯಿಂದ ಸೆಳೆದು ಬಿಡುಗಡೆ ಮಾಡಬೇಕು.

* ಗ್ರಾಮ ಪಂಚಾಯತಿಗಳು ವಾರ್ಷಿಕ 50 ಲಕ್ಷಕ್ಕೂ ಹೆಚ್ಚು ಆದಾಯ ಗಳಿಸುವ ಸ್ವಂತ ಸಂಪನ್ಮೂಲವನ್ನು ಹೊಂದಿರುವ ಗ್ರಾಮ ಪಂಚಾಯತಿಗಳು ತಮ್ಮ ಸ್ವಂತ ಅನುದಾನದಿಂದ ಸಿಬ್ಬಂದಿಗಳ ವೇತನವನ್ನು ಪಾವತಿಸಬೇಕು. ಹಾಗೂ ವಿದ್ಯುತ್‌ ಬಿಲ್ಲು ಪಾವತಿಗಾಗಿ ಬಿಡುಗಡೆಗೊಳಿಸುವ ಅನುದಾನವನ್ನು ವಿದ್ಯುತ್‌ ಬಿಲ್ಲು ಪಾವತಿಸಲು ಬಳಸಿಕೊಂಡು ಉಳಿದ ಹಣವನ್ನು ಇತರೆ ಅಭಿವೃದ್ಧಿ ಕಾರ್ಯಗಳಿಗಾಗಿ ಬಳಸಿಕೊಳ್ಳಬೇಕು.

* ಎರಡನೇ ತ್ರೈಮಾಸಿಕ ಕಂತಿನ ಅನುದಾನ ಬಿಡುಗಡೆಯ ಸಂದರ್ಭದಲ್ಲಿ ಒಂದೇ ಹೆಸರಿನ ಗ್ರಾಮ ಪಂಚಾಯಿತಿಗಳ ಪೈಕಿ ಒಂದೇ ಗ್ರಾಮ ಪಂಚಾಯಿತಿಗೆ ಹೆಚ್ಚುವರಿ ಅನುದಾನ ಬಿಡುಗಡೆಯಾಗಿದ್ದು. ಅಂತಹ 126 ಗ್ರಾಮ ಪಂಚಾಯಿತಿಗಳಿಗೆ ಈಗಾಗಲೇ ಹಚ್ಚುವರಿ ಅನುದಾನ ಬಿಡುಗಡೆಯಾಗಿರುವುದರಿಂದ ಈ ಮೂರನೇ ತ್ರೈಮಾಸಿಕ ಕಂತಿನ ಅನುದಾನದಲ್ಲಿ ಈ ಗ್ರಾಮ ಪಂಚಾಯಿತಿಗಳಿಗೆ ಅನುದಾನ ಬಿಡುಗಡೆ ಮಾಡಿರುವುದಿಲ್ಲ.

* ಈ ಅನುದಾನದಲ್ಲಿ ಕುಡಿಯುವ ನೀರು ಸರಬರಾಜು ಮತ್ತು ಸ್ವಚ್ಛತೆ ಸೇವ ಒದಗಿಸುವವರಿಗೆ ಅನುದಾನ ಪಾವತಿಗೆ ಅವಕಾಶವಿರುತ್ತದೆ. ಅದರಂತೆ, 2021-2022ನೇ ಸಾಲಿನಲ್ಲಿ ಕುಡಿಯುವ ನೀರು ಸರಬರಾಜು ಮತ್ತು ಸ್ವಚ್ಛತೆ ಸೇವೆ ನೀಡುವವರಿಗೆ ಅನುದಾನ ಪಾವತಿಸಲು ಕ್ರಮವಹಿಸತಕ್ಕದ್ದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net