ಪ್ರಾಣ ಕಸಿದುಕೊಂಡ ಮಿಸ್‌ ಕಾಲ್‌! ಪತಿಯಿಂದ ಬರ್ಬರ ಹತ್ಯೆ- ಹೊಳೆನರಸೀಪುರದಲ್ಲಿ ಭಯಾನಕ ಘಟನೆ

ravi
ಕೊಲೆಯಾದ ರವಿ
Published on

ಹಾಸನ: ತನ್ನ ಪತ್ನಿಗೆ ಕರೆ ಮಾಡುತ್ತಿದ್ದಾನೆ ಎನ್ನುವ ಕಾರಣಕ್ಕೆ ಆ ಮಹಿಳೆಯ ಪತಿಯಿಂದ ವ್ಯಕ್ತಿಯೊಬ್ಬನನ್ನು ಬರ್ಬರ ಹತ್ಯೆಯಾಗಿರುವ ಘಟನೆ ಹಾಸನ ಜಿಲ್ಲೆ ಹೊಳೆನರಸೀಪುರ ತಾಲೂಕಿನ ಹಳ್ಳಿಮೈಸೂರಿನಲ್ಲಿ ನಡೆದಿದೆ.

ಮೈಸೂರು ಜಿಲ್ಲೆ ಕೆ.ಆರ್. ನಗರ ತಾಲೂಕಿನ ಕುಪ್ಪೆಮುದ್ದನಹಳ್ಳಿ ಗ್ರಾಮದ ರವಿ (46) ಕೊಲೆಯಾದವ. ಈತನ ಕೊಲೆ ಮಾಡಿರುವ ಆರೋಪವನ್ನು ಮಹಿಳೆಯ ಪತಿ ಹೊಯ್ಸಳ ಹಾಗೂ ಆತನ ಸ್ನೇಹಿತರಾದ ಬಳೆ ಮಂಜ, ಶ್ರೀಜಿತ್, ಸಾಗರ್ ಎದುರಿಸುತ್ತಿದ್ದಾರೆ.

ರವಿ ಪತ್ನಿಯಿಂದ ದೂರವಾಗಿದ್ದರು. ಅವರು ಯಾರಿಗೋ ಕರೆ ಮಾಡುವಾಗ ಅದು ಆಕಸ್ಮಿಕವಾಗಿ ಮಹಿಳೆಗೆ ಹೋಗಿದೆ ಎನ್ನಲಾಗಿದೆ. ನಂತರ ತನ್ನನ್ನು ಮದುವೆಯಾಗುವಂತೆ ರವಿ ಅವರಿಗೆ ಕೇಳುತ್ತಿದ್ದರಂತೆ. ಪದೇ ಪದೇ ತನ್ನ ಪತ್ನಿಗೆ ಕರೆ ಮಾಡಿ ಹಿಂಸೆ ಕೊಡುತ್ತಿದ್ದಾನೆ ಎನ್ನುವ ಕಾರಣಕ್ಕೆ ಹೊಯ್ಸಳ ತನ್ನ ಸ್ನೇಹಿತರ ಜತೆಗೂಡಿ ರವಿಯ ಹತ್ಯೆ ಮಾಡಿರುವ ಆರೋಪವಿದೆ.

ಮನೆಯೊಳಗೆ ಕೂಡಿಹಾಕಿ ನೇಣು ಬಿಗಿದಿದ್ದು ನಂತರ ಬಲವಾದ ಆಯುಧಗಳಿಂದ ಹೊಡೆದು ಕೊಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ನಡುವೆ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಪೊಲೀಸರು ಆರೋಪಿಗಳ ಹುಡುಕಾಟದಲ್ಲಿ ತೊಡಗಿದ್ದಾರೆ. (ದಿಗ್ವಿಜಯ ನ್ಯೂಸ್‌)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net