More

    ಮಂಗಳೂರಿನಲ್ಲಿ ಭಾರಿ ಡ್ರಗ್ಸ್‌ ಜಾಲ: ಯುವತಿಯ ಮೇಲೆ ನಿರಂತರ ಅತ್ಯಾಚಾರ- ರಕ್ಷಣೆ ಕೋರಿ ಅಮ್ಮನಿಂದ ದೂರು

    ಮಂಗಳೂರು: ಡ್ರಗ್ ದಂಧೆಯಿಂದ ಮಗಳನ್ನು ರಕ್ಷಿಸುವಂತೆ ಕೋರಿ ಮಂಗಳೂರಿನ ಕ್ರೈಸ್ತ ಮಹಿಳೆಯೊಬ್ಬರು ವಿಶ್ವ ಹಿಂದೂ ಪರಿಷತ್‌ ಮೊರೆ ಹೋಗಿದ್ದಾರೆ.

    ಮಂಗಳೂರಿನ ಬಿಜೈ ಬಳಿಯ ಗ್ರೇಸಿ ಪಿಂಟೋ ಎಂಬ ಮಹಿಳೆ ಈ ಪತ್ರ ಬರೆದಿದ್ದಾರೆ. ಸುರತ್ಕಲ್ ನಿವಾಸಿ ಶರೀಫ್ ಸಿದ್ದಿಕಿ ಎಂಬಾತನ ಡ್ರಗ್ಸ್‌ ದಂಧೆಗೆ ಮಗಳು ಬಿದ್ದಿದ್ದು ಇದೀಗ ಹೊರಕ್ಕೆ ಬರಲಾಗದೇ ಒದ್ದಾಡುತ್ತಿರುವುದಾಗಿ ಪತ್ರದಲ್ಲಿ ಹೇಳಲಾಗಿದೆ.

    ಕಳೆದ ಮೂರು ವರ್ಷಗಳಿಂದ ಮಗಳು ಡ್ರಗ್ಸ್‌ ದಾಸಳಾಗಿದ್ದಾಳೆ. ಆಕೆಯ ಮೇಲೆ ನಿರಂತರ ಲೈಂಗಿಕ ದೌರ್ಜನ್ಯ ನಡೆಸಲಾಗುತ್ತಿದೆ. ಡ್ರಗ್ಸ್‌ ಕೊಟ್ಟು ಆಕೆಯನ್ನು ಬಳಸಿಕೊಳ್ಳಲಾಗುತ್ತಿದೆ. ಮಗಳು ಇದರಿಂದ ಹೊರಕ್ಕೆ ಬರಲು ಆಗುತ್ತಿಲ್ಲ. ಮಾನಸಿಕವಾಗಿ ಕುಗ್ಗಿ ಅಸ್ವಸ್ಥತೆಗೆ ಜಾರಿದ್ದಾಳೆ. ಪೊಲೀಸ್ ಠಾಣೆ ಮತ್ತು ಸಮುದಾಯದ ಗುರುಗಳಿಗೆ ದೂರು ಕೊಟ್ಟರೂ ನ್ಯಾಯ ಸಿಕ್ಕಿಲ್ಲ ಎಂದು ಮಹಿಳೆ ಪತ್ರದಲ್ಲಿ ನೋವು ತೋಡಿಕೊಂಡಿದ್ದಾರೆ.

    ಸಿದ್ದಿಕಿ ಮತ್ತು ಅವನ ಸ್ನೇಹಿತರಿಂದ ನಿರಂತರ ಡ್ರಗ್ ಪೂರೈಕೆ ಮಾಡುತ್ತಿದ್ದು, ಅವರಿಂದ ನನ್ನ ಮಗಳನ್ನ ರಕ್ಷಣೆ ಮಾಡಿ ಎಂದು ಅವರು ಕೋರಿದ್ದಾರೆ. ಇದೇ ವೇಳೆ ಇದೇ ವೇಳೆ ಪೊಲೀಸ್ ಕಮೀಷನರ್ ಎನ್.ಶಶಿಕುಮಾರ್ ಅವರನ್ನೂ ಭೇಟಿಯಾಗಿರುವ ಗ್ರೇಸಿಯವರು ತಮ್ಮ ಮಗಳಿಗಾಗುತ್ತಿರುವ ತೊಂದರೆಗಳ ಬಗ್ಗೆ ಅಳಲು ತೋಡಿಕೊಂಡಿದ್ದಾರೆ. ತಡರಾತ್ರಿ ಬಂದು ಮಗಳನ್ನು ಕರೆದೊಯ್ಯುತ್ತಿದ್ದ ಸಿದ್ದಿಕಿ ಆಕೆಗೆ ಡ್ರಗ್ಸ್‌ ನೀಡುತ್ತಿದ್ದಾನೆ. ಇದನ್ನು ಪ್ರಶ್ನಿಸಿದರೆ ಕೊಲೆ ಬೆದರಿಕೆಯೊಡ್ಡುತ್ತಿದ್ದಾನೆ ಎಂದು ಅವರು ದೂರಿದ್ದಾರೆ.

    ಕೂಡಲೇ ಆರೋಪಿ ಮಹಮ್ಮದ್ ಸಿದ್ದಿಕಿಯನ್ನು ಸುರತ್ಕಲ್ ಠಾಣಾ ಪೊಲೀಸರು ಬಂಧಿಸಿದ್ದು, ಈತನ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.

    ಆರೋಪಿ ಶರೀಫ್ ಸಿದ್ಧಿಕಿಗೆ ಈಗಾಗಲೇ ಮೂರು ಮದುವೆಯಾಗಿದೆ. ಮುಂಬೈ ಗೋವಾ ಸುರತ್ಕಲ್‌ನಲ್ಲಿ ಹೆಂಡತಿಯರು ಇದ್ದಾರೆ. ಇದರ ಹೊರತಾಗಿಯೂ ಸುಮಾರು ವರ್ಷಗಳ ಮಗಳ ಜತೆ ಸಂಬಂಧ ಇಟ್ಟುಕೊಂಡಿರುವುದಾಗಿ ಆರೋಪಿಸಲಾಗಿದೆ. ಈತನ ವಿರುದ್ಧ ಸುರತ್ಕಲ್ ಠಾಣೆಯಲ್ಲಿ ಈ ಹಿಂದೆ ಎರಡು ಪ್ರಕರಣ ಇದ್ದು, ವಶಕ್ಕೆ ಪಡೆದು ವಿಚಾರಣೆಯ ಮಾಡುತ್ತಿದ್ದೇವೆ. ಸಂತ್ರಸ್ತೆ ಯುವತಿಗೆ ಕೌನ್ಸಿಲಿಂಗ್ ಸೆಂಟರ್‌ನಲ್ಲಿ ಚಿಕಿತ್ಸೆ ನೀಡುತ್ತಿದ್ದು, ಚಿಕಿತ್ಸೆ ಬಳಿಕ ಯುವತಿಯ ವಿಚಾರಣೆ ಮಾಡಿ ತನಿಖೆ ಮುಂದುವರಿಸುತ್ತೇವೆ ಎಂದು ಮಂಗಳೂರು ನಗರ ಪೊಲೀಸ್ ಕಮೀಷನರ್ ಎನ್ ಶಶಿಕುಮಾರ್ ಹೇಳಿಕೆ ನೀಡಿದ್ದಾರೆ. (ದಿಗ್ವಿಜಯ ನ್ಯೂಸ್‌)

    ಎರಡು ಬಸ್ಸುಗಳ ನಡುವೆ ಭೀಕರ ಅಪಘಾತ: ಐವರ ಸಾವು- ಹಲವರ ಸ್ಥಿತಿ ಚಿಂತಾಜನಕ

    ಈ ದಾರಿ ಬದ್ಲು ಆ ದಾರಿಯಲ್ಲಿ ಹೋದ ಸಿಎಂ ಬೆಂಗಾವಲು ವಾಹನ: ಸೀಟಿ ಊದಿ ಊದಿ ಹೈರಾಣಾದ ಪೊಲೀಸರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts