ಮಗುವಿನ ಜತೆ ಬಾವಿಗೆ ಹಾರಿದರೂ ಬದುಕಿದ ಅಮ್ಮ- ಕಂದನ ಶವ ಕಂಡು ಪುನಃ ಆತ್ಮಹತ್ಯೆಗೆ ಯತ್ನ

well
ಸಾಂದರ್ಭಿಕ ಚಿತ್ರ
Published on

ತುಮಕೂರು: ಪತಿಯ ಕಿರುಕುಳ ತಾಳದೇ ಮಗುವಿನ ಜತೆ ಮಹಿಳೆಯೊಬ್ಬರು ಆತ್ಮಹತ್ಯೆಗೆ ಯತ್ನಿಸಿರುವ ದಾರುಣ ಘಟನೆ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯ ಹುಳಿಯಾರು ಹೋಬಳಿಯ ಕೆಂಕೆರೆ ಗ್ರಾಮದಲ್ಲಿ ನಡೆದಿದೆ.

ಪ್ರೇಮಾ ಎಂಬ 30 ವರ್ಷದ ಮಹಿಳೆ ಎರಡು ವರ್ಷದ ಹೆಣ್ಣುಮಗುವಿನ ಜತೆಗೆ ಆತ್ಮಹತ್ಯೆ ಮಾಡಿಕೊಳ್ಳಲು ಬಾವಿಗೆ ಜಿಗಿದಿದ್ದಾರೆ. ಆದರೆ ಪ್ರೇಮಾ ಬದುಕಿ ಉಳಿದಿದ್ದು, ಮಗು ಮೃತಪಟ್ಟಿದೆ.

ಪತಿ ಜಗದೀಶ್​ ಅವರ ಕಿರುಕುಳ ತಾಳದೇ ಪ್ರೇಮಾ ಮಗುವಿನ ಜತೆ ಬಾವಿಗೆ ಹಾರಿದ್ದರು. ಇದನ್ನು ಗಮನಿಸಿದ ಸ್ಥಳೀಯರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಆಗಮಿಸಿದ ರಕ್ಷಣಾ ಸಿಬ್ಬಂದಿ ತಾಯಿ ಮತ್ತು ಮಗುವನ್ನು ಮೇಲಕ್ಕೆ ಎತ್ತಿದ್ದಾರೆ. ಆದರೆ ಅದಾಗಲೇ ಕಂದಮ್ಮ ಮೃತಪಟ್ಟಿದ್ದು, ಪ್ರೇಮಾ ಅವರಿಗೆ ಎಚ್ಚರ ಆಗುತ್ತಲೇ ಮಗು ಮೃತಪಟ್ಟಿರುವ ಬಗ್ಗೆ ತಿಳಿದಿದೆ. ಇದರಿಂದ ಆಘಾತಗೊಂಡ ಅವರು, ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಪ್ರೇಮ ಯತ್ನಿಸಿದ್ದರು. ಅವರನ್ನು ರಕ್ಷಿಸಲಾಗಿದ್ದು, ನಿಮಾನ್ಸ್​ಗೆ ದಾಖಲಿಸಿದ್ದಾರೆ.

ಈ ಸಂಬಂಧ ಹುಳಿಯಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net