ಪಠ್ಯೇತರ ಚಟುವಟಿಕೆಯಿಂದ ಶಿಸ್ತು : ಉಪನ್ಯಾಸಕಿ ಅಂಕಿತಾ ಅಭಿಪ್ರಾಯ

New Project (1)
Published on

ಬೆಳ್ತಂಗಡಿ: ಮಕ್ಕಳ ಬಾಲ್ಯದಲ್ಲಿಯೇ ಬನ್ನಿಯಂತಹ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಮೂಲಕ ಶಿಸ್ತು ಮೂಡಿಸಿಕೊಳ್ಳಬಹುದು ಎಂದು ಉಜಿರೆ ಎಸ್.ಡಿ.ಎಂ. ಪದವಿಪೂರ್ವ ಕಾಲೇಜಿನ ಉಪನ್ಯಾಸಕಿ ಹಾಗೂ ರೇಂಜರ್ ನಾಯಕಿ ಅಂಕಿತಾ ಹೇಳಿದರು.

ಉಜಿರೆ ಎಸ್.ಡಿ.ಎಂ. ಆಂಗ್ಲ ಮಾಧ್ಯಮ(ಸಿ.ಬಿ.ಎಸ್.ಇ) ಶಾಲೆಯ ಕಿಂಡರ್‌ಗಾರ್ಟನ್ ವಿದ್ಯಾರ್ಥಿಗಳಿಗೆ ಭಾರತ್ ಸ್ಕೌಟ್ಸ್ ಆಂಡ್ ಗೈಡ್ಸ್ ವಿಭಾಗದ 3ರಿಂದ 6 ವರ್ಷದ ವಿದ್ಯಾರ್ಥಿಗಳ ‘ಬನ್ನಿ’ ಉದ್ಘಾಟನೆ ಕಾರ್ಯಕ್ರಮದಲ್ಲಿ ಇತ್ತೀಚೆಗೆ ಮಾತನಾಡಿದರು.

ಬೆಳ್ತಂಗಡಿಯ ಸ್ಥಳೀಯ ಸಂಘದ ಕಾರ್ಯದರ್ಶಿ ಪ್ರಮೀಳಾ ಮಾತನಾಡಿದರು. ಪ್ರಾಂಶುಪಾಲ ಮನ್ಮೋಹನ್ ನಾಯ್ಕ ಕೆ.ಜಿ. ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕಿ ರವೀನಾ ಹಾಗೂ ಮಮತಾ ನಿರೂಪಿಸಿದರು. ಶಿಕ್ಷಕಿ ಸುವಿನ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net