ಇನ್ಮುಂದೆ ಹೆಂಡ ಕುಡೀಬೇಡ, ದುಡ್ಡು ಕೊಡಲ್ಲ ಎಂದುದಕ್ಕೆ ನೊಂದು ಚಿಕ್ಕೋಡಿ ವ್ಯಕ್ತಿ ಆತ್ಮಹತ್ಯೆ

liquor
Published on

ಚಿಕ್ಕೋಡಿ: ಸಾರಾಯಿ ಕುಡಿಬೇಡ ಅಂತ ಬುದ್ಧಿ ಹೇಳಿದ್ದಕ್ಕೆ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಮಡಿರುವ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಖಡಕಲಾಟ ಗ್ರಾಮದಲ್ಲಿ ನಡೆದ ಘಟನೆ,

ಮನ್ಸೂರ್ ಇಲಾಹಿ ಮುಲ್ಲಾ (50) ಆತ್ಮಹತ್ಯೆ ಮಾಡಿಕೊಂಡವ. ನಿನ್ನೆ (ಶನಿವಾರ) ತಡರಾತ್ರಿ ಹೆಂಡತಿ ಮಗನೊಂದಿಗೆ ಇದೇ ವಿಚಾರಕ್ಕೆ ಮನ್ಸೂರ್​ ಜಗಳವಾಡಿದ್ದ. ಯಾವುದೇ ಕಾರಣಕ್ಕೂ ಹಣ ಕೊಡಲ್ಲ ಕುಡಿಯಬೇಡ ಎಂದು ಮಗ ಮತ್ತು ಪತ್ನಿ ಹೇಳಿದ್ದಕ್ಕೆ ನೊಂದುಕೊಂಡು ಮನ್ಸೂರ್ ಆತ್ಮಹತ್ಯೆ ಮಾಡಿದ್ದಾರೆ ಎನ್ನಲಾಗಿದೆ.

ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ಸ್ಥಳಕ್ಕೆ ಖಡಕಲಾಟ ಪೊಲೀಸರು ಭೇಟಿ ಪರಿಶೀಲನೆ ನಡೆಸುತ್ತಿದ್ದಾರೆ. ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net