ಪತ್ನಿ ಸತ್ತಳೆಂದು ಪತಿ ಆತ್ಮಹತ್ಯೆ- ಅಪ್ಪನ ಹಾದಿ ತುಳಿದ ಮಕ್ಕಳು: ಚಿಕ್ಕೋಡಿಯಲ್ಲೊಂದು ದುರಂತ

death
Published on

ಚಿಕ್ಕೋಡಿ: ಮನೆಯೊಡತಿಯ ಒಂದು ಸಾವು ಇಡೀ ಕುಟುಂಬವನ್ನೇ ಆತ್ಮಹತ್ಯೆಗೆ ತಳ್ಳಿದ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯ ಪೊಗತ್ಯಾನಟ್ಟಿ ಗ್ರಾಮದಲ್ಲಿ ನಡೆದಿದೆ.

ಪತ್ನಿಯ ಸಾವು ಅರಗಿಸಿಕೊಳ್ಳಲಾಗದೇ ಪತಿ ಆತ್ಮಹತ್ಯೆ ಮಾಡಿಕೊಂಡರೆ, ಅಪ್ಪ ಅಮ್ಮನನ್ನು ಕಳೆದುಕೊಂಡ ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇದಾಗಿದೆ. ಚನ್ನವ್ವ ರಂಗಾಪುರೆ(40) ಹೃದಯಾಘಾತದಿಂದ ಒಂದು ವಾರದ ಹಿಂದೆ ಮೃತಪಟ್ಟಿದ್ದರು. ಇದರಿಂದ ಖಿನ್ನತೆ ಜಾರಿದ್ದ ಪತಿ ಕಾಡಪ್ಪ (42) ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಂತರ ಅಪ್ಪನ ಹಾದಿ ತುಳಿದಿದ್ದಾರೆ ಮಕ್ಕಳಾದ ಕೀರ್ತಿ (20) ಸ್ಪೂರ್ತಿ (18).

ಅಪ್ಪ ಮತ್ತು ಮಕ್ಕಳು ಮನೆಯಲ್ಲಿಯೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು ಗ್ರಾಮಸ್ಥರು ಘಟನೆಯಿಂದ ಬೆಚ್ಚಿಬಿದ್ದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net