

ಸಿದ್ದಾಪುರ: ಮೈಸೂರು ವಿವೇಕಾನಂದ ಯೋಗ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಪೋಸ್ಟ್ ಗ್ರಾೃಜುಯೇಷನ್ ಡಿಪ್ಲೊಮಾ ಇನ್ ಯೋಗ ಥೆರಪಿನಲ್ಲಿ ಡಿಸ್ಟಿಂಕ್ಷನ್ ವಿತ್ ಪ್ರಾಕ್ಟಿಕಲ್ಸ್ ನಲ್ಲಿ ಪಾಲಿಬೆಟ್ಟದ ಚೆಶೈರ್ ಹೋಮ್ಸ್ ಇಂಡಿಯಾ ಕೂರ್ಗ್ ವಿಶೇಷ ಶಾಲೆಯ ಮುಖ್ಯಶಿಕ್ಷಕ ಎಸ್.ಸಿ.ಶಿವರಾಜ್ ಚಿನ್ನದ ಪದಕ ಪಡೆದುಕೊಂಡಿದ್ದಾರೆ.
ಈ ಹಿಂದೆ ಇವರು 2022-23 ಸಾಲಿನಲ್ಲಿ ಪೋಸ್ಟ್ ಗ್ರಾೃಜುಯೇಷನ್ ಡಿಪ್ಲೊಮಾ ಇನ್ ಯೋಗ ಎಜುಕೇಶನ್ ನಲ್ಲಿ ಡಿಸ್ಟಿಂಕ್ಷನ್ ವಿತ್ ಪ್ರಾಕ್ಟಿಕಲ್ಸ್ ನಲ್ಲಿ ಚಿನ್ನದ ಪದಕವನ್ನು ಪಡೆದಿದ್ದು, ಇದೀಗ ಯೋಗ ಥೆರಪಿಯಲ್ಲಿ ಡಿಸ್ಟಿಂಕ್ಷನ್ ವಿತ್ ಪ್ರಾಕ್ಟಿಕಲ್ಸ್‌ನಲ್ಲಿ ಚಿನ್ನದ ಪದಕವನ್ನು ಪಡೆಯುವುದರ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.