ಕಾಂಗ್ರೆಸ್ ಮುಖಂಡನ ಬರ್ತಡೇ ಪಾರ್ಟಿಯಲ್ಲಿ ಗಾಳಿಯಲ್ಲಿ ಗುಂಡು: ಇಬ್ಬರ ಬಂಧನ

birthday
Published on

ಧಾರವಾಡ: ಇಲ್ಲಿಗೆ ಸಮೀಪದ ಶಿವಳ್ಳಿ-ಹೆಬ್ಬಳ್ಳಿ ಗ್ರಾಮ ಮಧ್ಯದ ತೋಟದ ಮನೆಯಲ್ಲಿ ತಾಪಂ ಮಾಜಿ ಸದಸ್ಯ ಅಣ್ಣಪ್ಪಗೌಡ ಚಿನ್ನಗುಡಿ ಅವರ ಬರ್ತ್​ಡೇ ಪಾರ್ಟಿಯಲ್ಲಿ ರಿವಾಲ್ವಾರ್‌ನಿಂದ ಗುಂಡು ಹಾರಿಸಿರುವ ಘಟನೆ ನಡೆದಿದೆ.

ಹುಟ್ಟುಹಬ್ಬಕ್ಕೆ ಶುಭಾಶಯ ಕೋರುವ ನಿಟ್ಟಿನಲ್ಲಿ ಕಾಂಗ್ರೆಸ್​ ಮುಖಂಡ ಮಲ್ಲಿಕಾರ್ಜುನ ಆಯಟ್ಟಿ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ.

ನಿನ್ನೆ ರಾತ್ರಿ ಧಾರವಾಡ ತಾಲೂಕಿನ ಶಿವಳ್ಳಿ ಗ್ರಾಮದಲ್ಲಿ ಹುಟ್ಟುಹಬ್ಬದ ಪಾರ್ಟಿ ನಡೆದಿತ್ತು. ಈ ಸಂದರ್ಭದಲ್ಲಿ ಹಾಜರಿದ್ದ ಮಲ್ಲಿಕಾರ್ಜುನ ಅವರು, ಗಾಳಿಯಲ್ಲಿ ಗುಂಡು ಹಾರಿಸಿ ಶುಭ ಕೋರಿದ್ದಾರೆ. ಗುಂಡು ಹಾರಿಸಿದ ನಂತರ, ರಿವಾಲ್ವಾರ್ ಪಾಯಿಂಟ್ ಇಟ್ಟು ಶುಭ ಹಾರೈಕೆ ಮಾಡಿದ್ದಾರೆ.

ಇದರ ವಿಡಿಯೋ ವೈರಲ್​ ಆಗುತ್ತಿದ್ದಂತೆಯೇ ಮಲ್ಲಿಕಾರ್ಜುನ ಆಯಟ್ಟಿ ಮತ್ತು ಹುಟ್ಟುಹಬ್ಬ ಆಚರಿಸಿಕೊಂಡ ಅಣ್ಣಪ್ಪಗೌಡ ಇಬ್ಬರನ್ನೂ ಧಾರವಾಡ ಗ್ರಾಮೀಣ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net