ಹಿಂದೂ ಹುಡುಗಿ ಬೇಕು, ಈ ಸಂಪ್ರದಾಯನಂತೆ ಮದುವೆಯಾಗುವೆ ಎಂದ ಪಪ್ಪು: ನಡೆಯಿತು ಅದ್ಧೂರಿ ವಿವಾಹ

pappu
Published on

ಲಖನೌ: ಅಪ್ಪ ಮುಸ್ಲಿಂ, ಮಗ ಹಿಂದೂ. ತಾನು ಹಿಂದೂ ಧರ್ಮದಂತೆ ಮದುವೆಯಾಗಬೇಕು ಎನ್ನುವುದು ಈ ಪುತ್ರನ ಕೋರಿಕೆ. ಈ ಕೋರಿಕೆಯನ್ನು ಈಡೇರಿಸಿರುವ ಅಪ್ಪ, ಅದ್ಧೂರಿಯಾಗಿ ಮಗನ ಮದುವೆಯನ್ನು ನೆರವೇರಿಸಿದ್ದು, ಇದೀಗ ಭಾರಿ ಸುದ್ದಿಯಾಗಿದ್ದಾರೆ. ಸದ್ಯ ಮದುವೆಯ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

ಉತ್ತರ ಪ್ರದೇಶದ ಘಾಜಿಪುರದಲ್ಲಿ ಇಂಥದ್ದೊಂದು ಘಟನೆ ನಡೆದಿದೆ. ಆಗಿದ್ದೇನೆಂದರೆ ಸುಮಾರು 16 ವರ್ಷದ ಹಿಂದೆ ಗಹಮಾರಾ ಗ್ರಾಮದ ನಿವಾಸಿ ಮೊಹಮ್ಮದ್ ಶೇರ್ ಖಾನ್ ಎಂಬವವರು ಪಪ್ಪು ಅನ್ನೋ ಹುಡುಗನನ್ನು ದತ್ತು ಪಡೆದುಕೊಂಡಿದ್ದರು. ಪಪ್ಪು ಬಾಲ್ಯದಲ್ಲಿ ತಂದೆ-ತಾಯಿಯನ್ನ ಕಳೆದುಕೊಂಡು ಅನಾಥನಾಗಿದ್ದ.

ಆದ್ದರಿಂದ ಈ ಬಾಲಕನನ್ನು ದತ್ತು ಪಡೆದಿದ್ದರು ಖಾನ್​. ಇದಕ್ಕೆ ಗ್ರಾಮಸ್ಥರು ಒಪ್ಪಿಗೆ ನೀಡಿದ್ದರು. ಇಷ್ಟು ವರ್ಷ ತಮ್ಮ ಸಂಪ್ರದಾಯದಂತೆಯೇ ಈ ದತ್ತುಪುತ್ರನನ್ನು ಬೆಳೆಸಿದಿದ್ದಾರೆ. ಇದೀಗ ಆತ ಮದುವೆ ವಯಸ್ಸಿಗೆ ಬಂದಿದ್ದು, ಹಿಂದೂ ಸಂಪ್ರದಾಯದಂತೆ ಮದುವೆಯಾಗುವ ಇಚ್ಛೆ ವ್ಯಕ್ತಪಡಿಸಿದ್ದ.

ಈ ಹಿನ್ನೆಲೆಯಲ್ಲಿ ಪಕ್ಕದೂರಿನ ಉತರೌಲಿ ಗ್ರಾಮದ ಭಗವಾನ ರಾಮ್ ಅವರ ಪುತ್ರಿ ಕಾಶ್ಮೀರಾ ಎನ್ನುವ ಹಿಂದೂ ಯುವತಿಯನ್ನೇ ನೋಡಿದ ತಂದೆ, ಆಕೆಯ ಜತೆ ಮಗನ ವಿವಾಹವನ್ನು ಹಿಂದೂ ಸಂಪ್ರದಾಯದಂತೆ ಮಾಡಿಸಿದ್ದಾರೆ. ತಂದೆಯ ಈ ಪ್ರೀತಿಗೆ ನೆಟ್ಟಿಗರು ಭೇಷ್​ ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net