ಬೀದರ್‌ನಲ್ಲಿ ಭೂಮಿ ಕಂಪಿಸಿದ ಅನುಭವ: ಯಾವಾಗ ಏನಾಗುವುದೋ ಎಂಬ ಭಯದಲ್ಲಿ ರಾತ್ರಿ ಕಳೆದ ಜನ

earthquake
Published on

ಬೀದರ್: ಬೀದರನ ಹುಮನಾಬಾದ ತಾಲೂಕಿನ ಹುಣಸನಾಳ ಗ್ರಾಮದಲ್ಲಿ ನಿನ್ನೆ ಒಂದೇ ದಿನ ಎರಡು ಬಾರಿ ಭೂಮಿಯಿಂದ ಶಬ್ಥ ಕೆಳಿ ಬಂದಿದೆ.

ಇದರಿಂದ ಜನರು ಭಯಭೀತಗೊಂಡ ಜನರು ರಾತ್ರಿಯಿಡೀ ಮನೆಯಿಂದ ಹೊರಕ್ಕೆ ಆತಂಕದಲ್ಲಿಯೇ ಕಾಲ ಕಳೆದಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆಯೇ, ನಿನ್ನೆ ರಾತ್ರಿಯೇ ಗ್ರಾಮಕ್ಕೆ ತಹಸೀಲ್ದಾರ ನಗಯ್ಯಾ ಹಿರೇಮಠ, ಡಾ ಗೋವಿಂದ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಭೇಟಿ ಗ್ರಾಮಸ್ಥರೊಂದಿಗೆ ಚರ್ಚೆ ಮಾಡಿದ್ದಾರೆ. ಆದರೂ ಜನರು ಭಯಭೀತರಾಗಿ ರಾತ್ರಿ ಇಡೀ ಆತಂಕದಲ್ಲೇ ಕಾಲ ಕಳೆದರು.

ಇಂದು ಗ್ರಾಮಕ್ಕೆ ಹೈದ್ರಾಬಾದನ ನುರಿತ ತಜ್ಞರು ಹಾಗೂ ಭೂಗರ್ಭ ಇಲಾಖೆಯ ಅಧಿಕಾರಿಗಳ ಭೇಟಿ ಸಾಧ್ಯತೆಯಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net