VIDEO: ಗ್ರಾಮಲೆಕ್ಕಾಧಿಕಾರಿ ಫುಲ್​ ಟೈಟ್​- ತಹಶೀಲ್ದಾರ್​ ಕಚೇರಿ ಎದುರೇ ಆಹಾ! ಎಂಥ ಸವಿ ನಿದ್ದೆ...

1275584
Published on

ಬೆಳಗಾವಿ: ಕರ್ತವ್ಯವೇಳೆ ಕಂಠಪೂರ್ತಿ ಕುಡಿದು ತಾಲೂಕು ತಹಶಿಲ್ದಾರ ಕಚೇರಿಯ ಮುಂದೆ ಗ್ರಾಮಲೆಕ್ಕಾಧಿಕಾರಿ ಅಡ್ಡಲಾಗಿ ಮಲಗಿದ ಘಟನೆ ಜಿಲ್ಲೆಯ ಸವದತ್ತಿ ತಹಶೀಲ್ದಾರ್ ಕಚೇರಿ ಎದುರು ನಡೆದಿದೆ.

ತಹಶಿಲ್ದಾರ್ ಕಚೇರಿ ಎದುರು ಕಂಠಪೂರ್ತಿ ಕುಡಿದು ಮಲಗಿದ ವಿಡಿಯೋ ವೈರಲ್ ಆಗಿದೆ. ಸಂಜು ಬೆಣ್ಣಿ ಕಂಠಪೂರ್ತಿ ಕುಡಿದು ಮಲಗಿರುವ ಗ್ರಾಮಲೆಕ್ಕಾಧಿಕಾರಿ.

ಮೊದಲು ಸವದತ್ತಿ ತಾಲೂಕಿನ ಗೊರವನಕೊಳ್ಳ ಗ್ರಾಮದ ಗ್ರಾಮಲೆಕ್ಕಾಧಿಕಾರಿ ಆಗಿದ್ದ ಸಂಜು ಬೆಣ್ಣಿ ಅವರು ಅಲ್ಲಿಯೂ ಕರ್ತವ್ಯ ವೇಳೆ ಕಂಠಪೂರ್ತಿ ಕುಡಿಯುತ್ತಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ಸವದತ್ತಿ ತಹಶಿಲ್ದಾರ್ ಕಚೇರಿಯಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಆದರೂ ತಹಶಿಲ್ದಾರ್ ಕಚೇರಿಯಲ್ಲಿಯೂ ತನ್ನ ಚಾಳಿ ಮುಂದುವರೆಸಿದ್ದಾರೆ.

ಇಷ್ಟಾದರೂ ಗ್ರಾಮ ಲೆಕ್ಕಾಧಿಕಾರಿ ವಿರುದ್ಧ ತಹಶೀಲ್ದಾರ್ ಪ್ರಶಾಂತ್ ಪಾಟೀಲ್ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ.

ಇಲ್ಲಿದೆ ನೋಡಿ ವಿಡಿಯೋ:

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net