ಶಾಸಕನ ತೋಟದ ಕಾರ್ಮಿಕನಿಂದ ಗೋಮಾಂಸ ಮಾರಾಟ: ತೋಟದ ಆಸುಪಾಸೇ ಇವನ ಕೃತ್ಯ..

gomansa
Published on

ಚಿಕ್ಕಮಗಳೂರು: ಕಾಂಗ್ರೆಸ್‌ ಶಾಸಕ ಟಿ.ಡಿ ರಾಜೇಗೌಡರ ಅವರ ತೋಟದಲ್ಲಿ ಕಾರ್ಮಿಕನಾಗಿ ದುಡಿಯುತ್ತಿದ್ದ ಅಸ್ಸಾಂ ಮೂಲದ ಜಲೀಲ್ ಶೇಖ್‌ ಎಂಬಾತ ಹಿಂದೂ ಪರ ಸಂಘಟನೆಗಳ ಕೈಗೆ ಸಿಕ್ಕಿಬಿದ್ದಿದ್ದಾನೆ.

ಶೃಂಗೇರಿ ಕ್ಷೇತ್ರದ ಶಾಸಕ ಟಿ.ಡಿ ರಾಜೇಗೌಡರ ತೋಟದಲ್ಲಿ ಕೆಲಸ ಮಾಡುವ ಈತ ಅಕ್ರಮವಾಗಿ ಗೋಮಾಂಸ ಸಾಗಾಣೆ ಮಾಡುತ್ತಿದ್ದ. ಚಿಕ್ಕಮಗಳೂರಿನಿಂದ ಅಕ್ರಮವಾಗಿ ಗೋ ಮಾಂಸವನ್ನು ತಂದು ಶಾಸಕರ ತೋಟದ ಲೈನ್ ಜನರಿಗೆ ಗೋಮಾಂಸ ಸಾಗಾಟ ಮಾಡುತ್ತಿದ್ದ ಈತ.

10 ಕೆ.ಜಿ ಗೋಮಾಂಸದೊಂದಿಗೆ ಈತ ಹಿಂದೂ ಸಂಘಟನೆಯ ಕಾರ್ಯಕರ್ತರ ಕೈಗೆ ಸಿಕ್ಕಿಬಿದ್ದಿದ್ದಾನೆ. ಶೃಂಗೇರಿ ಕ್ಷೇತ್ರದ ಶಾಸಕ ಟಿ.ಡಿ ರಾಜೇಗೌಡರ ತೋಟದಲ್ಲಿ ಕೆಲಸ ಮಾಡುವ ಜಲೀಲ್‌ ಶೇಕ್.. ಬೈಕ್‌ನಲ್ಲಿ ಬಾಸಾಪುರದಿಂದ‌ ತೋಟಕ್ಕೆ ಹೋಗುವ ವೇಳೆ ಈತನನ್ನು ತಡೆಹಿಡಿದು ವಶಕ್ಕೆ ಪಡೆದಿದ್ದಾರೆ.

ಬಾಳೆಹೊನ್ನೂರು ಸಮೀಪದ ಕಣತಿ ಬಳಿ ಈ ಘಟನೆ ನಡೆದಿದೆ. ಈತ ತಾನು ಶಾಸಕ ಟಿ ಡಿ ರಾಜೇಗೌಡರ ತೋಟದಲ್ಲಿ ಕೆಲಸ ಮಾಡುತ್ತಿರುವ ಹೇಳಿದ್ದಾನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net